ಸಂಕ್ರಮಣ ಸಿಹಿ ಕಹಿ ಬಗ್ಗೆ ಮಕ್ಕಳಿಗೆ ಜಾಗೃತಿ.

ವಿಜಯ ದರ್ಪಣ ನ್ಯೂಸ್

ನಾರಾಯಣಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜನವರಿ 12: ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ, ಸಂಕ್ರಾಂತಿ ಎಂದಾಗ ನೆನಪಾಗುವ ಮಾತಿದು ಸಂಕಾಂತಿಯಲ್ಲಿ ಪುರಾಣ ಕಾಣುತ್ತದೆ ವಿಜ್ಞಾನ ಇಣುಕು ಹಾಕುತ್ತದೆ ಸಂಪ್ರದಾಯ ಮಾತನಾಡುತ್ತದೆ ಕೃತಜ್ಞತೆ ಕೈ ಹಿಡಿಯುತ್ತದೆ ನಮಗೆ ಒಳ್ಳೆಯದಾಗಲಿ ನಮ್ಮ ನಿಮ್ಮ ಬದುಕಿನಲ್ಲಿ ಸಂ- ಕ್ರಾಂತಿಯಾಗಲಿ ಎಂಬ ಆಶಾವಾದಿಗಳಾಗೋಣ.

ನಾರಾಯಣಪುರ ಶಾಲೆಯ  ಮುಖ್ಯ ಶಿಕ್ಷಕ ಚಂದ್ರಶೇಖರ ಹಡಪದ ಸಂಕ್ರಮಣ ಸಿಹಿ ಕಹಿ ಕುರಿತಾದ ಮಕ್ಕಳ ಜಾಗೃತಿ ಸಂಸ್ಥೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಂಕ್ರಾಂತಿಯ ಸೊಗಸೇ ಬೇರೆ ಇದು ಜನರು ವರ್ಷವಿಡಿ ದುಡಿದ ಜಾನುವಾರುಗಳನ್ನು ಸಿಂಗರಿಸುವ ಕೃತಜ್ಞಭಾವ ಮೂಡಿಸುವ ಹಬ್ಬ ಅವುಗಳಿಗೆ ಮೈತೊಳೆದು ಕೊರಳಿಗೆ ಗೆಜ್ಜೆ ಕಟ್ಟಿ ಕೊಂಬಿಗೆ ಬಣ್ಣ ಬಳಿದು ಟೇಪುಕಟ್ಟಿ ಕಿಚ್ಚು ಹಾಯಿಸಿ ಸಂಪ್ರದಾಯ ದಲ್ಲಿ ಖುಷಿ ಕಾಣುವರು ಅಪ್ಪಟ ಗ್ರಾಮೀಣ ಹಬ್ಬ ಎಂಬ ವಿಚಾರ ತಿಳಿಸಿದರು.

ಈಗ ಕೃಷಿಕರ ಮನೆಯಲ್ಲಿ ದನಕರು ಮಾಯವಾಗಿ ಅವುಗಳ ಜಾಗಕ್ಕೆ ಟ್ರಾಕ್ಟರ್ ಬಂದಿದೆ ಸಂಪ್ರದಾಯ ಸಂಭ್ರಮ ಕಡಿಮೆಯಾಗಿವೆ ಆ ಕಾರಣ ವಿದ್ಯಾರ್ಥಿಗಳಿಂದ ಆಚರಿಸುವ ಮೂಲಕ ಸಂಸ್ಕೃತಿಯ ಸಂಕೇತ ಮರುಕಳಿಸಬೇಕು ಸಂಸ್ಕಾರ, ವಿಶ್ವಾಸ, ಕೃತಜ್ಞತೆ ಜೊತೆಗಿನ ಹಬ್ಬದ ಖಷಿ,ರಂಗು,ಆರೋಗ್ಯ, ನಲಿವು ತೃಪ್ತಿ ಹುಮ್ಮಸ್ಸು ಸೊಬಗು ಸಮೃದ್ಧಿಯ ಎಲ್ಲಲ್ಲೂ ಕಾಣಸಿಗಲಿ ಒಳ್ಳೆಯ ಪ್ರಯತ್ನ ಮಾಡುವಾಗ ಏಕತೆ ನಮ್ಮ ಮಂತ್ರವಾಗಲಿ ಎಂದರು. ಮಕ್ಕಳ ಜಾಗೃತ ಸಂಸ್ಥೆಯ ಪ್ರಕಾಶ ಸಂಯೋಜನೆ ಮಾಡಿದ್ದರು ಹನುಮಂತರಾಜು ರಜನಿ ಇದ್ದರು