ಪ್ರಾಣಾಪಾಯದಿಂದ ಪಾರಾದ ಚಿರತೆ

ವಿಜಯ ದರ್ಪಣ ನ್ಯೂಸ್ 

ಉರುಳಿಗೆ ಸಿಕ್ಕಿಬಿದ್ದ ಚಿರತೆ ಪ್ರಾಣಾಪಾಯದಿಂದ ಪಾರು

ಇಂದುಬೆಳಗಿನ ಜಾವ ಪಿರಿಯಾಪಟ್ಟಣ ತಾಲೂಕು ಕಸಬಾ ಹೋಬಳಿ ಮಲ್ಲಿನಾಥಪುರ ಗ್ರಾಮದ ಅರಣ್ಯ ನಡೆತೋಪಿನಲ್ಲಿ ಅಂದಾಜು ನಾಲ್ಕರಿಂದ ಐದು ವರ್ಷ ಪ್ರಾಯದ ಗಂಡು ಚಿರತೆಯೊಂದು ಉರುಳಿಗೆ ಸಿಕ್ಕಿಬಿದ್ದಿದ್ದ

ಹಿನ್ನಲೆ ಮಾಲತಿ ಪ್ರಿಯ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಮೈಸೂರು ವೃತ್ತ ಸೀಮಾ ಪಿ.ಎ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಹುಣಸೂರು ವಿಭಾಗ ಮತ್ತು ಮಹದೇವಪ್ಪ, ಸಹಾಯಕ ಸಂರಕ್ಷಣಾಧಿಕಾರಿಗಳು ಹುಣಸೂರು ವಿಭಾಗ ರವರ ನಿರ್ದೇಶನದಂತೆ ಪಿರಿಯಾಪಟ್ಟಣ ಪ್ರಾದೇಶಿಕ ವಲಯದ ಕಿರಣ್ ಕುಮಾರ್ ವೈ ಕೆ, ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಸದರಿ ಸ್ಥಳಕ್ಕೆ ಭೇಟಿ ನೀಡಿ, ಡಾ. ರಮೇಶ್, ಇಲಾಖಾ ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡು ಉರುಳಿಗೆ ಸಿಕ್ಕಿಕೊಂಡಿದ್ದ ಚಿರತೆಯನ್ನು ಅರವಳಿಕೆ ಮದ್ದಿನ ಸಹಾಯದಿಂದ ಉರುಳಿನಿಂದ ಬಿಡಿಸಿ, ಪ್ರಾಣಾಪಾಯದಿಂದ ಪಾರು ಮಾಡಿ ವೈದ್ಯಕೀಯ ತಪಾಸಣೆಯನ್ನು ಮಾಡಿದರು.

ವೈದ್ಯಾಧಿಕಾರಿಗಳು ಸದರಿ ಚಿರತೆಯ ಆರೋಗ್ಯ ಸ್ಥಿತಿ ಸದೃಢವಾಗಿರುವ ಬಗ್ಗೆ ದೃಢೀಕರಿಸಿದ ಮೇರೆಗೆ ಮತ್ತು ಮೇಲಾಧಿಕಾರಿಗಳ ನಿರ್ದೇಶನದಂತೆ ನಾಗರಹೊಳೆ ಅಭಯಾರಣ್ಯಕ್ಕೆ ಸದರಿ ಚಿರತೆಯನ್ನು ತೆಗೆದುಕೊಂಡು ಹೋಗಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿರುತ್ತದೆ

—ರಾಜ್ ಕುಶಾಲಪ್ಪ 

 

ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ತಾಳೆ, ಅಡಕೆ, ಕಾಫಿ ತೋಟ

ಕೊಳತ್ತೋಡು ಬೈಗೋಡು ಗ್ರಾಮದ ಕೇಳಪಂಡ ಕುಟುಂಬಸ್ಥರ ಗದ್ದೆಯಲ್ಲಿ ಬೆಳೆದಂತಹ ತಾಳೆ ತೋಟ ಅಡಿಕೆ ತೋಟ ಹಾಗೂ ಕಾಫಿ ತೋಟಗಳು ಇಂದು ಮಧ್ಯಾಹ್ನ 12 ಗಂಟೆ ಹೊತ್ತಿಗೆ ಬೆಂಕಿಯ ಕನ್ನಾಲಿಗೆಗೆ ಹೊತ್ತಿ ಉರಿದಿದ್ದು ಹಲವಾರು ಏಕರೆ ಜಾಗ ಬೆಂಕಿಗಾಹುತಿಯಾಗಿರುತ್ತದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ, ಅರಣ್ಯ ಇಲಾಖೆ ಹಾಗೂ ಸ್ಥಳೀಯರಿಂದ ಬೆಂಕಿ ನಂದಿಸುವ ಕಾರ್ಯ ನಡೆಸಲಾಯಿತು.

ಗ್ರಾಮದಲ್ಲಿ ಹುಲಿ, ಆನೆ, ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿರುವುದರಿಂದ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದೆಂದು ಸ್ಥಳೀಯರಲ್ಲಿ ಸಂಶಯ ಉಂಟುಮಾಡಿದೆ.