ಶ್ರೀ ಮಹಾ ತಪಸ್ವಿ ಫೌಂಡೇಷನ್ ವತಿಯಿಂದ ಸಾವಿರ ವೃಕ್ಷ -ಪ್ರಕೃತಿ ಸುಭಿಕ್ಷ
ವಿಜಯ ದರ್ಪಣ ನ್ಯೂಸ್….
ಶ್ರೀ ಮಹಾ ತಪಸ್ವಿ ಫೌಂಡೇಷನ್ ವತಿಯಿಂದ ಸಾವಿರ ವೃಕ್ಷ -ಪ್ರಕೃತಿ ಸುಭಿಕ್ಷ ಕಾರ್ಯಕ್ರಮ
ಶ್ರೀ ಮಹಾ ತಪಸ್ವಿ ಫೌಂಡೇಷನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ರತೀ ವರ್ಷ ಜೂನ್ ತಿಂಗಳು ಪೂರ್ತಿಯಾಗಿ “ಸಾವಿರ ವೃಕ್ಷ – ಪ್ರಕೃತಿ ಸುಭಿಕ್ಷ” ಎಂಬ ವಿನೂತನವಾದ ಅಭಿಯಾನವನ್ನು, ಫೌಂಡೇಶನ್ನಿನ ಸಂಸ್ಥಾಪಕರಾದ ಶ್ರೀ ಶ್ರೀ ಪರಮಪೂಜ್ಯ ಅವಧೂತ ಕವಿ ಗುರುರಾಜ್ ಗುರೂಜಿಯವರ ಅನುಗ್ರಹದಿಂದ ಹಾಗೂ ಫೌಂಡೆಶನ್ ನ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀಯುತ ಪ್ರಜ್ವಲ್ ನಾಯಕ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಕರ್ನಾಟಕದಾದ್ಯಂತ 27 ಉಪ ಶಾಖೆಗಳಲ್ಲೂ ಅಭಿಯಾನ ನಡೆಸಲಾಗುತ್ತಿದೆ.
ಅದರಂತೆ, ಇಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸಾಲುಹಣುಸೆ ಇಲ್ಲಿ ವಿವಿಧ ಪ್ರಭೇದದ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ನಿರ್ವಾಹಣಾ ಟ್ರಸ್ಟ್ ಗಳು, ಕಾರ್ಯದರ್ಶಿಗಳು, ಸಹ ಕಾರ್ಯದರ್ಶಿಗಳು, ಬೆಂಗಳೂರು ಶಾಖೆಯ ಅಧಿಕಾರಿಗಳು ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು. ಈ ವಿನೂತನ ಮಾದರಿಯ ಅಭಿಯಾನವು ಶ್ರೀ ಮಹಾ ತಪಸ್ವಿ ಫೌಂಡೇಶನ್ನಿನ ಪರಿಸರ ಕಾಳಜಿಯನ್ನು ಬಿಂಬಿಸುತ್ತದೆ.