ಬ್ಯಾರಿಕೇಡ್ ಗೆ ಸಿಲುಕಿದ ಕಾಡಾನೆ ರಕ್ಷಿಸಿದ ಅರಣ್ಯ ಇಲಾಖೆ
ವಿಜಯ ದರ್ಪಣ ನ್ಯೂಸ್… ನಾಗರಹೊಳೆ ಉದ್ಯಾನವನದ ವೀರನ ಹೊಸಳ್ಳಿಯಲ್ಲಿ ಬ್ಯಾರಿಕೇಡ್ ಗೆ ಸಿಲುಕಿದ ಕಾಡಾನೆ ರಕ್ಷಿಸಿದ ಅರಣ್ಯ ಇಲಾಖೆ ನಾಗರಹೊಳೆ ಉದ್ಯಾನದಂಚಿನ ವೀರನಹೊಸಹಳ್ಳಿ ವ್ಯಾಪ್ತಿಯ ಅರಸುಹೊಸಕಟ್ಟೆಯ ಕೆರೆಯಲ್ಲಿ ಸಿಮೆಂಟ್ ಕಂಬದ ಬ್ಯಾರಿಕೇಡ್ ದಾಟಲಾರದೆ ಸಿಲುಕಿದ್ದ ಆನೆಯನ್ನು ಅರಣ್ಯ ಇಲಾಖೆ ರಕ್ಷಿಸಿದೆ. ಎಂದಿನಂತೆ ಶನಿವಾರ ರಾತ್ರಿ ಕಾಡಿನಿಂದ ಹೊರಬಂದು ಹೊಟ್ಟೆ ತುಂಬಿಸಿಕೊಂಡ ಸಲಗ ಭಾನುವಾರ ಮುಂಜಾನೆ ಅರಣ್ಯಕ್ಕೆ ಮರಳುವ ವೇಳೆ ಈ ಘಟನೆ ನಡೆದಿದೆ. ಸುತ್ತ ಮುತ್ತಲ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಭತ್ತ,ರಾಗಿ ಫಸಲನ್ನು ತಿಂದು ತುಳಿದು…