ದೇವರ ಕೋಪ………
ವಿಜಯ ದರ್ಪಣ ನ್ಯೂಸ್… ದೇವರ ಕೋಪ……… ಹಿಂದೆ ಹಳ್ಳಿಗಳಿಗಾಗಿ ರಸ್ತೆಗಳನ್ನು ನಿರ್ಮಿಸಲಾಗುತ್ತಿತ್ತು, ಈಗ ರಸ್ತೆಗಳಿಗಾಗಿ ಹಳ್ಳಿಗಳನ್ನೇ ನಾಶಗೊಳಿಸಲಾಗುತ್ತಿದೆ…… ಹಿಂದೆ ಹಸಿವಿನಿಂದ ಸಾಕಷ್ಟು ಜನ ಸಾಯುತ್ತಿದ್ದರು, ಈಗ ಅತಿ ಹೆಚ್ಚು ಆಹಾರ ಸೇವನೆಯಿಂದ ಜನ ಸಾಯುತ್ತಿದ್ದಾರೆ…… ಹಿಂದೆ ಹೊಲಗದ್ದೆಗಳಲ್ಲಿ ದುಡಿದು ವಿಶ್ರಾಂತಿಗಾಗಿ ಜನ ಕಾಯುತ್ತಿದ್ದರು, ಈಗ ಅತಿಯಾದ ವಿಶ್ರಾಂತಿಯಿಂದಾಗಿ ದೈಹಿಕ ಚಟುವಟಿಕೆಗಳಿಲ್ಲದೆ ಜನ ಸಾಯುತ್ತಿದ್ದಾರೆ…….. ಹಿಂದೆ ಹತ್ತಾರು ಮಕ್ಕಳನ್ನು ತಂದೆ-ತಾಯಿಗಳು ಸಾಕುತ್ತಿದ್ದರು, ಈಗ ಒಬ್ಬನೇ ಮಗನಿಗೆ ತಂದೆ – ತಾಯಿಗಳೇ ಭಾರವಾಗುತ್ತಿದ್ದಾರೆ……. ಹಿಂದೆ ಹಣ ಅಂತಸ್ತು ಇಲ್ಲದೆ ಮನುಷ್ಯ…
