ಒಳ್ಳೆತನದಿಂದ ಕಾರ್ಯನಿರ್ವಹಿಸಿ ನಿಮ್ಮನ್ನು ಜನರು ನೆನಪಿಸಿಕೊಳ್ಳುತ್ತಾರೆ: ನಿವೃತ್ತ ಐಎಎಸ್ ಅಧಿಕಾರಿ ಅಮರ ನಾರಾಯಣ
ವಿಜಯ ದರ್ಪಣ ನ್ಯೂಸ್…. ಅಧಿಕಾರಿಗಳು ಸೌಜನ್ಯ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಒಳ್ಳೆತನದಿಂದ ಕಾರ್ಯನಿರ್ವಹಿಸಿ ನಿಮ್ಮನ್ನು ಜನರು ನೆನಪಿಸಿಕೊಳ್ಳುತ್ತಾರೆ: ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಡಿಸೆಂಬರ್ 23 : ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಈ ದಿನ ಬಹಳ ವಿಶೇಷವಾದ ದಿನ ನಮ್ಮ ರೈತರ ದಿನವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ. ಮುಖ್ಯವಾಗಿ ರೈತರು ನಿಮ್ಮ ಕಚೇರಿಗೆ ಬಂದಾಗ ಉತ್ತಮ ಮನಸ್ಥಿತಿಯಿಂದ ಮುಗುಳ್ನಗುತ್ತಾ ಮಾತನಾಡಿಸಿ, ಏಕೆಂದರೆ ಅವರು ನಮಗೆ ಅನ್ನ ನೀಡುವ ದೇವರು….
