ಕರ್ನಾಟಕರತ್ನ ಪುನೀತ್ ರಾಜಕುಮಾರ್ ದತ್ತಿ ಸಾಹಿತ್ಯ ಸಂಸ್ಕೃತಿ ಪ್ರಶಸ್ತಿ ಗೆ ಆಹ್ವಾನ
ವಿಜಯ ದರ್ಪಣ ನ್ಯೂಸ್….
ಕರ್ನಾಟಕರತ್ನ ಪುನೀತ್ ರಾಜಕುಮಾರ್ ದತ್ತಿ ಸಾಹಿತ್ಯ ಸಂಸ್ಕೃತಿ ಪ್ರಶಸ್ತಿ ಗೆ ಆಹ್ವಾನ
ಬೆಂಗಳೂರು : 2025 ರ ಸಾಲಿನಲ್ಲಿ ಕೊಡಮಾಡುವ ಸಾಹಿತಿಗಳು ,ಸಂಸ್ಕೃತಿ ಚಿಂತಕರು, ಸಮಾಜ ಸೇವಕ ಶ್ರೀ ಶಶಿಕಾಂತ್ ರಾವ್ ಅವರು ನೀಡಿರುವ * ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಯುವ ಸಾಹಿತ್ಯ ದತ್ತಿ ಪ್ರಶಸ್ತಿ* ಗೆ 40/45 ವಯೋಮಾನದ ಯುವ ಬರಹಗಾರರ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯನ್ನು ಇಬ್ಬರಿಗೆ ಕೊಡುವುದರ ಜೊತೆಗೆ ನಗದು, ಶಾಲು ಫಲ,ಪಲಕ ಒಳಗೊಂಡಿರುತ್ತದೆ.
ಪ್ರಶಸ್ತಿಯನ್ನು ದಿನಾಂಕ :08/02/2026 ಭಾನುವಾರ ಬೆಳಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಯೋಜಿಸಿರುವ ಯುವಜನ ಸಮ್ಮೇಳನದಲ್ಲಿ ಗಣ್ಯರಿಂದ ನೀಡಲಾಗುತ್ತದೆ,
ಕೃತಿಯ ತಲಾ 5 ಪ್ರತಿಗಳು, ಫೋಟೋ ,ಕಿರು ಪರಿಚಯವನ್ನು ಸಂಬಂಧಪಟ್ಟವರು ಕಳುಹಿಸಿ ಕೊಡಬಹುದು.. (ಕಳುಹಿಸುವ ಕೃತಿಗಳಿಗೆ ಈಗಾಗಲೇ ಬೇರೆ ಬೇರೆ ಪ್ರಶಸ್ತಿ ಬಂದಿದ್ದರೆ ಅವರಿಗೆ ಅವಕಾಶವಿರುವುದಿಲ್ಲ)
ಡಾ.ಸಿಸಿರಾ, ಕನ್ನಡ ಉಪನ್ಯಾಸಕರು, ಶೇಷಾದ್ರಿಪುರಂ ಮೈನ್ ಪಿಯು ಕಾಲೇಜು, ಬೆಂಗಳೂರು –560020., ಮೊ.9448880985. ತಾರೀಖು:20/1/2026 ಕೊನೆಯ ದಿನ
ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನಿಂದ ರಾಜ್ಯ ಮಟ್ಟದ 10 ನೇ ಯುವಜನ ಸಮ್ಮೇಳನ

ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಫೆಬ್ರವರಿ ತಿಂಗಳ 8 ನೇ ತಾರೀಖು ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ *ರಾಜ್ಯ ಮಟ್ಟದ 10 ನೇ ಯುವಜನ ಸಮ್ಮೇಳನ,* ಕೃಷಿಕರು, ಯುವ ಕವಿ, ಲೇಖಕರೂ, ಕನ್ನಡ ಸಹ ಪ್ರಾಧ್ಯಾಪಕರೂ ಆದ
ಡಾ.ಎಂ.ಆರ್.ಉಪೇಂದ್ರಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಮಾರಂಭವು ಬೆಳಗ್ಗೆ 9.30 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಇರುತ್ತದೆ.
ದಯಮಾಡಿ ಬಿಡುವು ಮಾಡಿಕೊಂಡು ಬನ್ನಿ..
ಸೂಚನೆ / ಮನವಿ : ಯಾರಾದರೂ ನಮ್ಮ ಯುವಜನ ಸಮ್ಮೇಳನದಲ್ಲಿ ಪುಸ್ತಕ ಲೋಕಾರ್ಪಣೆ ಆಗಬೇಕಾದವರು, ಕವಿಗೋಷ್ಠಿಯಲ್ಲಿ ಕಥಾ ವಾಚನ ಗೋಷ್ಠಿಯಲ್ಲಿ ಭಾಗವಹಿಸಲಿಚ್ಚಿಸುವ ಒಂದು ಕೃತಿಯಾದರೂ ಪ್ರಕಟಿಸಿರಬೇಕು, ಗುಂಪಿನಲ್ಲಿ ನೃತ್ಯ ಪ್ರದರ್ಶನ, ಗಾಯನ ಮಾಡುವವರು, 2024/25 ಸಾಲಿನ ಕಥೆ, ಕಾವ್ಯ, ಕಾದಂಬರಿ, ವಿಮರ್ಶೆ ಕೃತಿಗಳನ್ನು ಪುಸ್ತಕ ಬಹುಮಾನಕ್ಕೆ ಮೂರು ಪ್ರತಿಗಳನ್ನು ಕಳುಹಿಸಿ ಕೊಡಬಹುದು…
ನಿಜವಾದ ಯಾರಾದರೂ ಸಾಧಕರಿದ್ದಲ್ಲಿ ಗರಿಷ್ಠ 50 ಆಗಿರುವ 5/10 ವರ್ಷ ಸೇವೆ ಸಲ್ಲಿಸಿದ ಸಾಧಕರಿದ್ದಲ್ಲಿ ಶಿಫಾರಸು ಮಾಡಬಹುದು, ಭಾಗವಹಿಸಲು ಹೆಸರು ಕಳುಹಿಸಿ ಕೊಡಬಹುದು, ಆದ್ಯತೆಯ ಮೇರೆಗೆ ವೇದಿಕೆ ಕಲ್ಪಿಸಲಾಗುವುದು..,
ಡಾ.ಸಿಸಿರಾ,
ಕಾರ್ಯಕ್ರಮ ಆಯೋಜಕರು.
ಬಿಬಿಜಿಎಸ್.ಟ್ರಸ್ಟ್.
ಮೊ..9448880985
