ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಪ್ತಿಹೊಸಹಳ್ಳಿ ಪ್ರಕಾಶ್
ವಿಜಯ ದರ್ಪಣ ನ್ಯೂಸ್…..
ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಪ್ತಿಹೊಸಹಳ್ಳಿ ಪ್ರಕಾಶ್
ಶಿಡ್ಲಘಟ್ಟ : ತಾಲ್ಲೂಕಿನ ಆನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜಪ್ತಿಹೊಸಹಳ್ಳಿ ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಹಿತ್ತಲಹಳ್ಳಿ ವೆಂಕಟೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು.
ಬಿಸಿಎಂ ಎ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಜಪ್ತಿಹೊಸಹಳ್ಳಿ ಪ್ರಕಾಶ್ ಮಾತ್ರವೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಚುನಾವಣಾಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್ ,ಸಹಾಯಕರಾಗಿ ಪಿಡಿಓ ಕೆ. ಕಾತ್ಯಾಯಿನಿ ಕಾರ್ಯನಿರ್ವಹಿಸಿದರು.
ಅಧ್ಯಕ್ಷರ ಆಯ್ಕೆ ಆಗುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು, ಹೂವಿನ ಹಾರ ಹಾಕಿ ಅಭಿನಂದಿಸಿದರು.
ನೂತನ ಅಧ್ಯಕ್ಷ ಜಪ್ತಿ ಹೊಸಹಳ್ಳಿ ಪ್ರಕಾಶ್ ಮಾತನಾಡಿ ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವವಿದ್ದು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಳ್ಳುತ್ತೇನೆ, ಎಲ್ಲಾ ಸದಸ್ಯರು ಹಾಗು ಅಧಿಕಾರಿಗಳು ಸಹಕರಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ವಿಜಯೇಂದ್ರ, ಹಿತ್ತಲಹಳ್ಳಿ ವೆಂಕಟೇಶ್,ವಿಶ್ವಾಶ್, ವರಲಕ್ಷ್ಮಿಸಂತೋಷ್,ಅರುಣಾ ,ಲತಾ ದೇವರಾಜ್,ರಾಧಮ್ಮ ಮುನಿಯಪ್ಪ, ಪ್ರೇಮಾಆನಂದ್, ಪಿಡಿಒ ಕಾತ್ಯಾಯಿನಿ,
ಮುಖಂಡರಾದ ಭೋದಗೂರು ಸುರೇಶ್,ಪ್ರಭಾಕರ್, ಹಿತ್ತಲಹಳ್ಳಿ ಲೊಕೇಶ್ ಮುಂತಾದವರು ಹಾಜರಿದ್ದರು.