ವಿಜಯಪುರ ಸಾರ್ವಜನಿಕ ಆಸ್ಪತ್ರೆಗೆ ಸಿಇಓ ಭೇಟಿ

ವಿಜಯ ದರ್ಪಣ ನ್ಯೂಸ್…..

ವಿಜಯಪುರ ಸಾರ್ವಜನಿಕ ಆಸ್ಪತ್ರೆಗೆ ಸಿಇಓ ಭೇಟಿ

ವಿಜಯಪುರ ದೇವನಹಳ್ಳಿ ತಾಲೂಕು ಬೆಂ.ಗ್ರಾ.ಜಿಲ್ಲೆ.ಸೆಪ್ಟೆಂಬರ್ 2 : ಜಿಲ್ಲಾ ಪಂಚಾಯತ್ ಸಿಇಓ ಡಾ.ಕೆ.ಎನ್.ಅನುರಾಧ ಅವರು ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ವ್ಯವಸ್ಥೆಯನ್ನು ಪರಿಶೀಲಿಸಿದರು.

ಆಸ್ಪತ್ರೆಯ ವಾರ್ಡ್ ಗಳನ್ನು ಭೇಟಿ ಮಾಡಿ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿ ಕೆಲ ರೋಗಿಗಳನ್ನು ಮಾತನಾಡಿಸಿ ವೈದ್ಯಕೀಯ ಸೇವೆ ಮತ್ತು ಸೌಲಭ್ಯಗಳು ಯಾವ ರೀತಿಯಾಗಿ ಸಿಗುತ್ತಿದೆ ಎಂದು ರೋಗಿಗಳಲ್ಲಿ ಮಾಹಿತಿ ಪಡೆದುಕೊಂಡರು ಜೊತೆಗೆ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಅವರಿಗೆ ಔಷಧಿಗಳು ಸರಿಯಾದ ರೀತಿ ಸಕಲಾಕ್ಕೆ ಸಿಗುತ್ತಿವೇಯೇ ಎಂಬುದನ್ನು ಪರಿಶೀಲಿಸಿ ರೋಗಿಗಳಿಗೆ ಯಾವುದೇ ರೀತಿಯ ಸೌಲಭ್ಯಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.

ಚಿಕಿತ್ಸಾ ಕೊಠಡಿಗೆ ಭೇಟಿ ನೀಡಿ ವೈದ್ಯಕೀಯ ಉಪಕರಣಗಳ ಬಳಕೆಯಲ್ಲಿರುವ ಪರೀಕರಗಳ ಮಾಹಿತಿ ಪಡೆದು ಸಲಹೆ ಸೂಚನೆಯನ್ನು ನೀಡಿದರು. ಔಷಧಿ ವಿತರಣೆ ಕೊಠಡಿಗೆ ಭೇಟಿ ನೀಡಿ ದಾಸ್ತಾನು ಹಾಗೂ ಔಷಧಿ ಲಭ್ಯತೆ ಕುರಿತು ಪರಿಶೀಲನೆ ನಡೆಸಿ ಗುಣಮಟ್ಟದ ಔಷಧಿಗಳು ದೊರೆಯುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿಗಳು ಸಾರ್ವಜನಿಕರು ಆಡಳಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.