ಕಡೆ ಕಾರ್ತಿಕ ಸೋಮವಾರ ಚಿಕ್ಕಯ್ಯನಛತ್ರ ಬಂಚಳ್ಳಿ ಹುಂಡಿ ಗ್ರಾಮದಲ್ಲಿ  ವಿಜೃಂಭಣೆ ಜರಗಿದ ಶ್ರೀ ಪ್ರಸನ್ನ ನಂಜುಂಡೇಶ್ವರ ರಥೋತ್ಸವ

ವಿಜಯ ದರ್ಪಣ ನ್ಯೂಸ್….

ಕಡೆ ಕಾರ್ತಿಕ ಸೋಮವಾರ ಚಿಕ್ಕಯ್ಯನಛತ್ರ ಬಂಚಳ್ಳಿ ಹುಂಡಿ ಗ್ರಾಮದಲ್ಲಿ  ವಿಜೃಂಭಣೆ ಜರಗಿದ ಶ್ರೀ ಪ್ರಸನ್ನ ನಂಜುಂಡೇಶ್ವರ ರಥೋತ್ಸವ

ತಾಂಡವಪುರ ನವಂಬರ್ 17 ಕಡೆಕಾರ್ತಿಕ ಮಾಸದ ಪ್ರಯುಕ್ತ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯನ ಛತ್ರ ಹೋಬಳಿ ಮೈಸೂರಿನ ಊಟಿ ರಸ್ತೆ ಚಿಕ್ಕಯ್ಯನ ಚಿತ್ರ ಗ್ರಾಮದ ಬಳಿ ಇರುವ ಇತಿಹಾಸ ಪ್ರಸಿದ್ಧಿ ಉಳ್ಳ ಹಳೆ ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಂದಂತ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು

ಈ ದೇವಾಲಯಕ್ಕೆ ಸುತ್ತಮುತ್ತಲ ಗ್ರಾಮಗಳಾದ ತಾಂಡವಪು ಹಳ್ಳಿ ದಿಡ್ಡಿ ಏಚಗಳ್ಳಿ ಮರಳೂರು ಬಸವನಪುರ ಕೆಂಪಿ ಸಿದ್ದನ ಹುಂಡಿ ಕಡಕೋಳ ಬಿದರಗೋಡು ಯಬ್ಯಾ ಹಡಕನಹಳ್ಳಿ ಹುಂಡಿ ಬಂಚಳ್ಳಿ ಹುಂಡಿ ಚಿಕ್ಕಯ್ಯನ ಚಿತ್ರ ಗ್ರಾಮಗಳ ಸಾವಿರಾರು ಭಕ್ತರು ದೇವಾಲಯಕ್ಕೆ ಅಪಾರ ಭಕ್ತ ಸಾಗರ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಬಳಿಕ ಬಂಚಳ್ಳಿ ಹುಂಡಿ ಚಿಕ್ಕಯನ ಛತ್ರ ಗ್ರಾಮಗಳಲ್ಲಿ ಶ್ರೀ ಪ್ರಸನ್ನ ಅಂಜನೇಶ್ವರ ಸ್ವಾಮಿಯ ರಥೋತ್ಸವ ಬಹಳ ವಿಜೃಂಭಣೆ ಜರಗಿತು ಈ ಸಂದರ್ಭದಲ್ಲಿ ಮುಖ್ಯ ಅರ್ಚಕ ವೆಂಕಟೇಶ್ ದೇವಾಲಯದ ಆಡಳಿತ ಮಂಡಳಿಯವರು ಗ್ರಾಮಸ್ಥರು ಭಕ್ತಾದಿಗಳು ಹಾಜರಿದ್ದರು.

ಮೈಸೂರು ಜಿಲ್ಲೆ ಟಿ ನರಸೀಪುರ ಪುರಾತನ ಪ್ರಸಿದ್ಧ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ  ವೈಭವದಿಂದ ನಡೆದ ಕಾರ್ತಿಕ ಮಾಸದ  ಲಕ್ಷ ದೀಪೋತ್ಸವ

ತಾಂಡವಪುರ ನವಂಬರ್ 17 ಮೈಸೂರು ಜಿಲ್ಲೆ ಟಿ ನರಸೀಪುರ ವಿಧಾನಸಭಾ ಕ್ಷೇತ್ರ ವರುಣ ವಿಧಾನಸಭಾ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರುವ ಇತಿಹಾಸ ಪ್ರಸಿದ್ಧಿ ಉಳ್ಳ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ಭಕ್ತಾದಿಗಳು ತಮ್ಮ ಇಷ್ಟಾರ್ಥ ನೆರವೇರಲಿ ಎಂದು ಎಣ್ಣೆ ದೀಪಗಳನ್ನು ಹಚ್ಚಿ ಪೂಜೆ ಸಲ್ಲಿಸಿದರು.

ಸಂಜೆ ಆಗುತ್ತಿದಂತೆ ಭಕ್ತಾದಿಗಳು ಹಚ್ಚಿರುವ ದೀಪಗಳು ಬೆಳಗಲು ಆರಂಭಿಸಿದವು. ಕುಟುಂಬ ಸಮೇತ ಆಗಮಿಸಿದ ಭಕ್ತರು ಹಾಗೂ ಸಾರ್ವಜನಿಕರು ಎಣ್ಣೆ ದೀಪ ಹಚ್ಚಲು ಆರಂಭಿಸಿದರು. ಕವಿದ ಕತ್ತಲು ನಡುವೆ ವಿದ್ಯುತ್ ದೀಪ ಅಲಂಕಾರಗೊಂಡು, ಹೊತ್ತಿ ಉರಿಯುತ್ತಿದ್ದ ಎಣ್ಣೆ ದೀಪದ ಬೆಳಕಿನಲ್ಲಿ ದೇವಾಲಯವನ್ನು ನೆರೆದಿದ್ದವರೆಲ್ಲರೂ ಕಣ್ತುಂಬಿಕೊಂಡರು.

ಶ್ರೀ ಗುಂಜಾ ನರಸಿಂಹಸ್ವಾಮಿ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 14ನೇ ವರ್ಷದ ಲಕ್ಷ ದೀಪೋತ್ಸವವನ್ನು ಹಾಗೂ ತೆಪ್ಪೋತ್ಸವದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಹೋಮ, ಪೂಜೆ ಹಾಗೂ ಮಹಾ ಮಂಗಳಾರತಿ ನಡೆಯಿತು. ಸೂರ್ಯಾಸ್ತವಾಗುತ್ತಿದ್ದಂತೆ ಲಕ್ಷ ದೀಪೋತ್ಸವದ ದೀಪ ಹಚ್ಚುವ ಕಾರ್ಯ ಪ್ರಾರಂಭವಾಯಿತು. ದೀಪೋತ್ಸವಕ್ಕೆ ಎಳ್ಳೆಣ್ಣೆ, ಬತ್ತಿ ಹಾಗೂ ಹಣತೆ ಇತ್ಯಾದಿಗಳನ್ನು ಭಕ್ತರು ತಂದಿದ್ದರು.

ದೇವಾಲಯದ ಆವರಣದಲ್ಲಿ ರಂಗೋಲಿ ಬಿಡಲು, ಹಣತೆ, ಎಣ್ಣೆ ಬತ್ತಿ ಸಜ್ಜುಗೊಳಿಸಲು ಬೆಳಗ್ಗೆ 10 ಗಂಟೆಗೆ ಹಲವು ಭಕ್ತಾದಿಗಳು ಆಗಮಿಸಿ ಸೇವೆ ಸಲ್ಲಿಸಿದರು. ರಂಗೋಲಿ ಪುಡಿಯನ್ನು ಸಮಿತಿ ವತಿಯಿಂದಲೇ ನೀಡಲಾಗಿತ್ತು.

ನೂತನವಾಗಿ ನಿರ್ಮಿಸಿರುವ ಸಿದ್ದೇಶ್ವರಸ್ವಾಮಿ ದೇವಸ್ಥಾನ ಉದ್ಘಾಟಿಸಿದ ಶಾಸಕ ದರ್ಶನ್ ಧ್ರುವನಾರಾಯಣ್

ತಾಂಡವಪುರ ನವಂಬರ್ 17 ನಂಜನಗೂಡು ವಿಧಾನಸಭಾ ಕ್ಷೇತ್ರದ ತಾಲ್ಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಸಿದ್ದರಾಮೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದ ಶಾಸಕ ದರ್ಶನ್ ಧ್ರುವನಾರಾಯಣ್ ರವರು.

ಇದೆ ವೇಳೆ ಮಾತನಾಡಿದ ಅವರು, ದೇವರ ದರ್ಶನ ಪಡೆದು, ಶ್ರೀ ಸಿದ್ದರಾಮೇಶ್ವರ ಸ್ವಾಮಿಯ ಕೃಪೆಗೆ ಪಾತ್ರನಾಗಿ, ಗ್ರಾಮದ ಜನತೆಗೆ ಶಾಂತಿ, ಐಶ್ವರ್ಯ ಮತ್ತು ಸುಖಸಮೃದ್ಧಿ ಲಭಿಸಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಹುಲ್ಲಹಳ್ಳಿ ಬ್ಲಾಕ್ ಅಧ್ಯಕ್ಷ ಶ್ರೀಕಂಠ ನಾಯಕ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಮಾರುತಿ ,ಮಾಜಿ ತಾ. ಪಂ ಅಧ್ಯಕ್ಷ ನಾಗೇಶ್ ರಾಜ್, ಗ್ರಾ. ಪಂ ಅಧ್ಯಕ್ಷ ಹರೀಶ್ ಮಾಜಿ ಜಿ. ಪಂ ಸದಸ್ಯರಾದ ಪುಷ್ಪ ಆದರ್ಶ್ ಕಗ್ಗಲೀಹುಂಡಿ ಮಹದೇವು ಮಣಿಕಂಠ ಪ್ರಕಾಶ್ ಮಹದೇವಸ್ವಾಮಿ ಸೇರಿದಂತೆ ಹಲವು ಮುಖಂಡರು ಗ್ರಾಮಸ್ಥರು, ಯಜಮಾನರು ಹಾಜರಿದ್ದರು.