ಗುರು ಪೂರ್ಣಿಮೆ ಆಚರಣೆ ಭಕ್ತಿ ಮಾರ್ಗಕ್ಕೆ ಪೂರಕವಾಗಿದೆ.

ವಿಜಯ ದರ್ಪಣ ನ್ಯೂಸ್, ವಿಜಯಪುರ,          ಬೆಂಗಳೂರು ಗ್ರಾ ಜಿಲ್ಲೆ 

ಹಿಂದು ಪಂಚಾಂಗ ಆಶಾಡ ಮಾಸದ ಹುಣ್ಣಿಮೆಯನ್ನು ಹಿಂದುಗಳು ಸಂಪ್ರದಾಯಕವಾಗಿ ಗುರುಪೂರ್ಣಿಮೆ ಆಚರಿಸುತ್ತಾರೆ. ಈ ದಿನದಂದು ಹಿಂದೂಗಳು ಮತ್ತು ಬೌದ್ಧರು ನಮ್ಮ ಗುರುವಿಗೆ ಪೂಜೆ ಸರಸುತ್ತಾರೆ. ಗುರು ಪೂರ್ಣಿಮಿಯ ದಿನ ಗುರುಸೂತ್ರ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿ ಆಗಿರುತ್ತದೆ ಎಂದು ಸೇವಾ ಸಮಿತಿಯ ಸಂಚಾಲಕ ವಿ.ಎನ್ ವೆಂಕಟೇಶ್  ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರ ಪಟ್ಟಣದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಚೆನ್ನಕೇಶವ ಸ್ವಾಮಿ ದೇವಾಲಯ ಆವರಣದಲ್ಲಿ ಶ್ರೀ ಕೃಷ್ಣ ಯತೀಂದ್ರ ಸತ್ಸಂಗ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀ ಶ್ರೀ ಶ್ರೀಮದ್ ಭಗವದ್ಗೀತಾ ಪಾರಾಯಣ ಶ್ರೀಶ್ರೀಶ್ರೀ ಕೈವಾರ ಯೋಗಿ ನಾರಾಯಣ ಯತೀಂದ್ರರ ಹಾಗೂ ಕನಕ ಪುರಂದರ ಗೀತಾ ತತ್ವಾಮೃತ ರಸಧಾರೆಯ 217 ನೇ ಕಾರ್ಯಕ್ರಮ ಹಾಗೂ ಶ್ರೀಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆ ಗೋಷ್ಠಿಯ 168 ನೇ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು.

ರೋಟರಿ ಶಾಲೆಯ ಮುಖ್ಯೋಪಾಧ್ಯಾಯನಿ ಮತ್ತು ರೋಟರಿ ಸಂಘದ ಅಧ್ಯಕ್ಷೆ ಎ.ಎಂ.ಮಂಜುಳ ರವರು ಕಾರ್ಯಕ್ರಮ ಉದ್ಘಾಟಿಸಿ   ಮಾತನಾಡುತ್ತಾ ಸುಮಾರು ವರ್ಷಗಳಿಂದ ಶ್ರೀಕೃಷ್ಣ ಯತೀಂದ್ರ ಸತ್ಸಂಗ ಸೇವಾ ಸಮಿತಿಯು ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಭಕ್ತಿ ಮಾರ್ಗಕ್ಕೆ ಪೂರಕವಾಗಿದೆ ಎಂದು ತಿಳಿಯಪಡಿಸುತ್ತಾ ಗುರು ಎನ್ನುವ ಶಬ್ದ* ಗು * ಮತ್ತು*ರು* ಅನ್ನುವ ಪದಗಳನ್ನು ಹೊಂದಿದೆ. ಗು ಎಂದರೆ ಅಂಧಕಾರ ಅಥವಾ ಅಜ್ಞಾನರು . ರು ಎಂದರೆ ಕಳೆಯುವ ಅಥವಾ ದೂರಮಾಡುವ ಎಂಬರ್ಥ. ಅದಕ್ಕೆ ಗುರು ಎಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವುದು ಎಂದು ಅರ್ಥವೆಂದು ತಿಳಿಸುತ್ತಾ ಗುರುಗಳಿಗೆ ಪೂಜ್ಯ ಭಾವನೆಯಿಂದ ಗೌರವ ನೀಡಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮತ್ತು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಯಾದ ಕುಮಾರ ಗುರುಕಿರಣ್ ರವರನ್ನು ಸನ್ಮಾನಿಸಿ ಗೌರವಿಸಿದರು

ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಜೆ ಎಸ್ ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಜೆಎಸ್ ರಾಮಚಂದ್ರಪ್ಪ  ಶ್ರೀ ಕೃಷ್ಣ ಸತ್ಸಂಗದ ಕಾರ್ಯಕ್ರಮವು ಎಲ್ಲರ ಮನವನ್ನು ಮುಟ್ಟಿ ಜೀವನ ಭಕ್ತಿ ಮಾರ್ಗವಾಗಿ ಸಾಗಲೆಂದು ತಿಳಿಯಪಡಿಸುತ್ತಾ ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸ ವೃಂದದವರ ಮಹತ್ವ ಇದೆ . ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ಭಾವಿ ಶಿಕ್ಷಕರನ್ನು ಸ್ಮರಿಸುವ ಮೂಲಕ ಗುರುಪೂರ್ಣಿಮೆ ಆಚರಿಸುತ್ತಾರೆ ಎಂದು ತಿಳಿಸಿದರು.

ಸಂಗೀತ ನಿರ್ದೇಶಕ ಎಂ.ವಿ ನಾಯ್ಡು. , ಜೂನಿಯರ್ ಘಂಟಸಾಲ ,ಟಿ ಮಹಾತ್ಮಾಂಜನೇಯ ನರಸಿಂಹಪ್ಪ ಜ್ಞಾನಗಂಗಾ ಸಂಗೀತ ಶಾಲೆಯ ಶ್ರೀಮತಿ ಸೀತಾ ಲಕ್ಷ್ಮಿ ಭಾಸ್ಕರ್ , ರಾಧಾಮಣಿ ರವರು ಕೀರ್ತತನೆಗಳನ್ನು  ಹಾಡಿದರು.

 ಐದು ಜನರಿಗೆ ಮುತ್ತೈದೆಯರಿಗೆ ಭಗವದ್ಗೀತೆ ಪುಸ್ತಕಗಳು ,ಸೀರೆ ಕುಪ್ಪಸ 5 ಕಂಬಳಿಗಳು ಐದು ಜನ ಮಕ್ಕಳಿಗೆ ವಸ್ತ್ರ ಗಳನ್ನು ನೀಡಿದರು.ಕಾರ್ಯಕ್ರಮದ ಭಕ್ತಿ ಸೇವೆಯನ್ನು ರೇಣುಕಮ್ಮ ಸೋಮಶೇಖರ್ ಕುಟುಂಬದವರು ನೆರವೇರಿಸಿದರು.

 ಶ್ರೀ ರಾಜು ಭಟ್ಟಾಚಾರ್ಯ ರವರು  ದಿವ್ವ ಸಾನಿಧ್ಯ ವಹಿಸಿದ್ದರು.

 ಮುಖ್ಯಅತಿಥಿಗಳಾಗಿ ವಿದ್ಯಾದ್ರಿ ಪಿಯು ಕಾಲೇಜಿನ ಉಪನ್ಯಾಸಕ ಅಶ್ವ‌ತ್ ಎಸ್.ಪಿ.ವೆಂಕಟೇಶ್ ಶ್ರೀ ಧರ್ಮರಾಯ ಸ್ವಾಮಿ ದೇವಾಲಯ ಭಕ್ತ ಮಂಡಳಿಯ ಪದಾಧಿಕಾರಿಗಳಾದ ಎನ್ ಆಂಜನಪ್ಪ ವಿಸಿ ಮಂಜುನಾಥ್ ಬಿರ್ಲಾ ನಾಗಣ್ಣ ಮತ್ತು ಎಸ್.ರಮೇಶ್ ಸ್ವಾಮಿ ರವರು ಉಪಸ್ಥಿತರಿದ್ದರು.