ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸಲು ರೋಟರಿ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ.

ವಿಜಯ ದರ್ಪಣ ನ್ಯೂಸ್

ವಿಜಯಪುರ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 18

ವಿಜಯಪುರ ಪಟ್ಟಣದ ರೋಟರಿ ಸಂಘದ ಆಶ್ರಯದಲ್ಲಿ ಇನ್ಸ್ಟ್ರಾಕ್ಟ್ ಪದವಿ ಸ್ವೀಕಾರ ಸಮಾರಂಭ ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.ರೋಟರಿ ಸಂಸ್ಥೆಯು 50 ವರ್ಷದ ಸಂಭ್ರಮದಲ್ಲಿ ನಮ್ಮ ಪಟ್ಟಣದಲ್ಲಿ ನಿರಂತರವಾಗಿ ಜನಪರ ಸೇವೆಯನ್ನು ಮಾಡಿಕೊಂಡು ಬರುತ್ತಿದೆ. ಮಕ್ಕಳಿಗೋಸ್ಕರ ಇನ್ಸ್ಟ್ರಾಕ್ಟ್ ಸಂಸ್ಥೆಯನ್ನು ಪ್ರಾರಂಭಿಸಿದ್ದು ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆ ರೋಟರಿ ಶಾಲೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ಅನುವು ಮಾಡಿಕೊಟ್ಟಿದ್ದೇವೆ. ಮಕ್ಕಳ ಪುಟ್ಟ ವಯಸ್ಸಿನಲ್ಲಿ ಸೇವಾ ಮನೋಭಾವನೆ ಬೆಳೆಸಲು ಸಂಸ್ಥೆಯ ಅವಶ್ಯಕವಾಗಿದೆ. ಹಣವಿದ್ದರೆ ಸೇವೆ ಮಾಡಬಹುದು ಎಂದು ತಮ್ಮ ಮನಸ್ಸಿನ ಇದ್ದರೆ ಅದನ್ನು ತೆಗೆದು ಹಾಕಬೇಕೆಂದು ಕರೆ ನೀಡುತ್ತಾ. ಯುವ ಸೇವ ನಿರ್ದೇಶಕರಾದ ಬಿಸಿ ಸಿದ್ದರಾಜ್ ರವರು ಪ್ರಸ್ತಾವಿಕವಾಗಿ ನುಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಜಿಲ್ಲಾ ಇನ್ಟ್ರಾಕ್ಟ್ ಕಮ್ಯುನಿಕೇಷನ್ ಕೋ ಆರ್ಡಿನೇಟರ್ ಆದ ಪಿ ಡಿ ಆರ್ ಶಶಿಕುಮಾರ್ ರವರು ಮಾತನಾಡುತ್ತಾ ವಿಜಯಪುರ ರೋಟರಿ ಸಂಸ್ಥೆಯು 50 ವರ್ಷದಿಂದ ನಿರಂತರವಾಗಿ ಸೇವೆ ಸಲ್ಲಿಸಿಕೊಂಡು ಬರುತ್ತಿರುವುದು ತುಂಬಾ ಶ್ಲಾಘನೀಯವಾದದ್ದು ‌ ಎಂದು ಭಾವಿಸಿದ್ದು ಸಂಸ್ಥೆಯು ಮೂರು ಪ್ರೌಢ ಶಾಲೆಗಳಲ್ಲಿ ಇನ್ಸ್ಟ್ರಾಕ್ಟ್ ಫಿಲಂ ಕ್ಲಬ್ ಸ್ಥಾಪನೆ ಮಾಡಿರುವುದು ತುಂಬಾ ಸಂತೋಷಕರವಾಗಿದೆ. ನಮ್ಮ ಜಿಲ್ಲೆಯಲ್ಲಿ 145 ಸಂಸ್ಥೆಯ ಅಡಿಯಲ್ಲಿ 14,500 ಸಂಸ್ಥೆಗಳಿದ್ದು ಮೂರು ಲಕ್ಷ ತೊಂಬತ್ತು ಸಾವಿರ ಹೆಚ್ಚು ಸದಸ್ಯರಿದ್ದಾರೆ. ಅಧಿಕಾರ ವಹಿಸಿಕೊಳ್ಳುವುದು ಮುಖ್ಯವಲ್ಲ ಸಮಾಜ ಸೇವೆ ಮಾಡುವುದು ಮುಖ್ಯ ಎಂದು ತಿಳಿಸುತ್ತಾ ಈ ಸಂಸ್ಥೆಯಲ್ಲಿ ಇಡೀ ವಿಶ್ವದಲ್ಲಿ ಎಲ್ಲಿ ಬೇಕಾದರೂ ಸಂಪರ್ಕ ಪಡೆಯ ಬಹುದೆಂದು ತಿಳಿಸುತ್ತಾ ಈ ಸಂಸ್ಥೆಯ ಸೇವಾ ಕಾರ್ಯಗಳನ್ನು ನಿಮ್ಮ ತಂದೆ ತಾಯಿ ಅಕ್ಕ ಪಕ್ಕ ಹಂಚಿಕೊಂಡು ತಾವು ಸಹ ಭಾಗಿಯಾಗಬೇಕೆಂದು ತಿಳಿಸಿದರು.

ರೋಟರಿ ಜಿಲ್ಲಾ ಇನ್ಸ್ಟ್ರಾಕ್ಟ್ ಯುವಜನ ಸೇವಾ ನಿರ್ದೇಶಕರಾದ ಅಶೋಕ ಬೇಲೂರು ರವರು ಮಾತನಾಡುತ್ತಾ ಇನ್ಸ್ಟ್ರಾಕ್ಟ್ ಸಂಸ್ಥೆಯು 1962 ರಲ್ಲಿ ಪ್ರಾರಂಭವಾಗಿ 1963 ರಲ್ಲಿ ಯುಎಸ್ಎಯಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ರೋಟರಿ ಸಂಸ್ಥೆಯ ಅತಿ ಮುಖ್ಯವಾದ ಯೋಜನೆ ಪಲ್ಸ್ ಪೋಲಿಯೋ ಕಾರ್ಯಕ್ರಮ ಕಣ್ಣಿನ ತಪಾಸಣೆ ಶಾಲಾ ಮಕ್ಕಳಿಗೆ ಪುಸ್ತಕಗಳು ವಿತರಣೆ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿದೆ. ಇನ್ಸ್ಟ್ರಾಕ್ಟ್ ಪದಾಧಿಕಾರಿಗಳು ಈ ಯೋಜನೆಯ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವುದು. ಪರಿಸರ ಸಂರಕ್ಷಣಾ ಬಗ್ಗೆ ಮೂಡಿಸುವುದು . ಮಕ್ಕಳು ಸಮಾಜ ಸೇವಾ ಕಾರ್ಯದಲ್ಲಿ ಭಾಗವಹಿಸಿ ಮುಂದಿನ ಸತ್ಪ್ರಜೆಗಳಾಗಿ ಬಾಳಬೇಕೆಂದು ಕರೆ ನೀಡಿದರು.

ರೋಟರಿ ಸಂಘದ ಅಧ್ಯಕ್ಷರಾದ ಎ ಎಂ ಮಂಜುಳಾ ರವರು ಮಾತನಾಡುತ್ತಾ ನೂತನ ಇನ್ಸ್ಟ್ರಾಕ್ಟ್ ಪದಾಧಿಕಾರಿಗಳು ತಂದೆ-ತಾಯಿಗಳಿಗೆ ಗುರುಗಳಿಗೆ ಕೌ ಗೌರವ ನೀಡಬೇಕು. 15 ದಿವಸ ಕಾಲದಲ್ಲಿ ಒಂದು ಸಭೆಯನ್ನು ಮಾಡಬೇಕು . ನೀವು ನಮ್ಮನ್ನು ಆಹ್ವಾನಿಸಿದರೆ ಸಭೆಯಲ್ಲಿ ಭಾಗವಹಿಸಿ ನಿಮಗೆ ತರಬೇತಿ ನೀಡುತ್ತೇವೆ ಎಂದು ತಿಳಿಸಿದರು.

ಇನ್ಸ್ಟ್ರಾಕ್ಟ್ ಪದಾಧಿಕಾರಿಗಳಾಗಿ ರೋಟರಿ ಶಾಲೆಯಿಂದ ಅಧ್ಯಕ್ಷರಾಗಿ ಅಂಕಿತ ಎಂ ಕಾರ್ಯದರ್ಶಿಯಾಗಿ ಹರ್ಷತ ಎಂ ಸರ್ಕಾರಿ ಮಾರ್ಗದರ್ಶಕರಾಗಿ ಕಲಾವತಿ ಸರ್ಕಾರಿ ಪ್ರೌಢಶಾಲಾ ವಿಭಾಗದಿಂದ ಹಸೀನಾ ತಬಬಸಮ್ ಕಾರ್ಯದರ್ಶಿಯಾಗಿ ಜಿತಿನ್ ಪಿ ಮಾರ್ಗದರ್ಶಕರಾಗಿ ಪಾರ್ವತಮ್ಮ ಹೆಣ್ಣು ಮಕ್ಕಳ ಪ್ರೌಢಶಾಲೆಯಿಂದ ಅಧ್ಯಕ್ಷರಾಗಿ ದೀಪ ಶ್ರೀ ಕಾರ್ಯದರ್ಶಿಯಾಗಿ ಮಲ್ಲಿಕಾ ಎಂ ಮಾರ್ಗದರ್ಶಕರಾಗಿ ಆರತಿ ಪತ್ತಾರ ರವರು ಆಯ್ಕೆಗೊಂಡಿರುತ್ತಾರೆ

 ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ಕೆಬಿಎಸ್ ಬಸವರಾಜ್ ಶ್ರೀಮತಿ ಗಿರಿಜಾಂಬ ರುದ್ರೇಶ್ ಮೂರ್ತಿ ಉಪ ಪ್ರಾಂಶುಪಾಲ ಪಿ ವೆಂಕಟೇಶ್ ರಾಜು ಅವಳೇಕರ್‌ ಸಿ ಬಸಪ್ಪ ಶೈಲೇಂದ್ರ ಕುಮಾರ್ ಶಶಿಕುಮಾರ್ ರವರು ಉಪಸ್ಥಿತರಿದ್ದರು.

@@@@@@@@@@@@@@@@@##@@@

ಕಲೆ ಸಾಹಿತ್ಯ ಸಂಸ್ಕೃತಿಗೆ ಹೆಚ್ಚಿನ ಪ್ರಾಶಸ್ತ್ಯ ಇದೆ:  ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಹಡಪದ್.

ಪ್ರಪಂಚದ ಯಾವುದೇ ಭಾಗದಲ್ಲಿ ಹೋದರೂ ರಂಗಭೂಮಿಕಲೆ ಸಾಹಿತ್ಯ ಸಂಸ್ಕೃತಿಗೆ ಹೆಚ್ಚಿನ ಪ್ರಾಶಸ್ತ್ಯ ಇದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಹಡಪದ್  ತಿಳಿಸಿದರು .

ವಿಜಯಪುರ ಪಟ್ಟಣದಲ್ಲಿರುವ ಮಹಂತಿನ ಮಠ ಧರ್ಮ ಸಂಸ್ಥೆಯ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘದ ಆಶ್ರಯದಲ್ಲಿ 77 ನೆಯ ಸ್ವಾತಂತ್ರ್ಯೋತ್ಸವ ಅಂಗವಾಗಿ ರಂಗಗೀತೆ ದೇಶ ಭಕ್ತಿ ಗೀತೆಗಳು ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .

 ಅಖಿಲ ಕರ್ನಾಟಕ ಮಿತ್ರ ಸಂಘದ ಅಧ್ಯಕ್ಷ ಚಿ.ಮಾ.ಸುಧಾಕರ ರವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಸ್ವಾತಂತ್ರ್ಯ ಹೋರಾಟಗಾರರು ವಿನಾಯಕ ದಾಮೋದರ ರವರು ಅನೇಕ ಲೇಖನಗಳನ್ನು ರಚಿಸಿ ಸ್ವಾತಂತ್ರ್ಯ ಬಗ್ಗೆ ಅರಿವು ಮೂಡಿಸಿದ ನಿರ್ದೇಶನವಿದೆ ಎಂದು ತಿಳಿಯಪಡಿಸುತ್ತಾ ಇಂದು ಸಹ ಜಗತ್ತಿನ ಅಂಕು ಡೊಂಕು ತಿದ್ದಲು ಸಾಮಾಜಿಕ ರಂಗಭೂಮಿ ಬೀದಿ ನಾಟಕಗಳು ಸಹಕಾರಿಯಾಗಿದೆ ಎಂದು ತಿಳಿಸಿದರು .

 ಕಾರ್ಯಕ್ರಮದಲ್ಲಿ ರಂಗಭೂಮಿ ನಿರ್ದೇಶಕರಾದ ಎಂ.ವಿ.ನಾಯ್ಡು, ಎ.ಎಂ.ನಾರಾಯಣಸ್ಟಾಮಿ ಜೆ.ಎಸ್.ಮುನಿನಾರಾಯಣ, ಜಿ.ಎಸ್ ನಾಗರಾಜ್ ಕೆ.ಎಚ್.ಚಂದ್ರಶೇಖರ್, ಡಿ.ಆರ್ ಚೆನ್ನಕೃಷ್ಣ ಕೃಷ್ಣಪ್ಪ ಮ.ಸುರೇಶ್ ಬಾಬು ರವರು ರಂಗಗೀತೆ ಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು.

ಸಮಾರಂಭದಲ್ಲಿ  ವಿಜಯಪುರ ಪಟ್ಟಣ ಕಸಾಪ ನಿಕಟಪೂರ್ವ ಅಧ್ಯಕ್ಷ  ಜೆ.ಆರ್ ಮುನಿವೀರಣ್ಣ ಕಾರ್ಯಾಧ್ಯಕ್ಷ  ವಿಶ್ವನಾಥ್ ಮಾಮ ಗೌರವ ಕಾರ್ಯದರ್ಶಿ ಆರ್ ಮುನಿರಾಜು ಮತ್ತು ಮುರುಳಿ ಮಗು ರವರು ಉಪಸ್ಥಿತರಿದ್ದರು.