ಪಿರಿಯಾಪಟ್ಟಣದಲ್ಲಿ ಡಿ ದೇವರಾಜ್ ಅರಸ್ ರವರ 108ನೇ ಜನ್ಮ ದಿನಾಚರಣೆಗೆ ಸಿದ್ದತೆ.

ವಿಜಯ ದರ್ಪಣ ನ್ಯೂಸ್

ಬೆಟ್ಟದಪುರ ,ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ. ಆಗಸ್ಟ್ 19 

ಪಿರಿಯಾಪಟ್ಟಣ ಟಿ. ದೇವರಾಜ ಅರಸು ಕಲಾಭವನದಲ್ಲಿ ದಿವಂಗತ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್ ರವರ 108ನೇ ಜನ್ಮದಿನ ದಿನೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದೆ.

ಬೆಟ್ಟದ ತುಂಗ ಗ್ರಾಮ ಪಂಚಾಯಿತಿ ಆವರಣದಲ್ಲಿ ಬೆಳಿಗ್ಗೆ 8 ಗಂಟೆಗೆ ಅರಸು ಪ್ರತಿಮೆಗೆ ಸಮಾಜ ಕಲ್ಯಾಣ ಹಾಗೂ ಮೈಸೂರು ಉಸ್ತುವಾರಿ  ಸಚಿವ ಹೆಚ್. ಸಿ . ಮಹದೇವಪ್ಪ ಮಾಲಾರ್ಪಣೆ ಮಾಡಲಿದ್ದಾರೆ .ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ .ಮೈಸೂರು ಕೊಡಗು ಲೋಕಸಭಾ ಸಂಸದ ಪ್ರತಾಪ್ ಸಿಂಹ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ .

ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಮರಿತಿದ್ದೆ ಗೌಡ ,ಡಾ. ಡಿ. ತಿಮ್ಮಯ್ಯ ,ಮಧು ಮಾದೇಗೌಡ , ಎಚ್. ವಿಶ್ವನಾಥ್ , ಮಂಜೇಗೌಡ ,ಹುಣಸೂರು ಉಪ ವಿಭಾಗಾಧಿಕಾರಿ ರುಚಿ ಬಿಂದಾಲ್ , ಮುಖ್ಯ ಭಾಷಣಕಾರರಾಗಿ ಆದಿಚುಂಚನಗಿರಿ ಪಿಯು ಕಾಲೇಜಿನ ಪ್ರಾಂಶುಪಾಲ ಗೋವಿಂದೇಗೌಡ , ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ವಸಂತರಾಜ್ ಅರಸ್ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ,ತಾಲೂಕು ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್ ,ತಾಲೂಕು ದಂಡಾಧಿಕಾರಿ ಕುಂಜಿ ಅಹಮದ್ , ಪುರಸಭೆ ಸದಸ್ಯರು ,ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಸಂಘ ಸಂಸ್ಥೆ ಅಧ್ಯಕ್ಷರುಗಳು ,ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಾಲೂಕು ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ಹರೀಶ್ ಬಿ .ಎಸ್ . ಬೆಟ್ಟದಪುರ ಗ್ರಾಮದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. .