ಅಖಿಲ ಭಾರತ ಸಸಿ ನೆಡುವ ಅಭಿಯಾನದಡಿ 4ನೇ ಕೋಟಿಯ ಸಸಿ ನೆಟ್ಟ ಅಮಿತ್ ಶಾ, ವರ್ಷಾಂತ್ಯದೊಳಗೆ 5 ಕೋಟಿ ಗಿಡಗಳನ್ನು ನೆಡುವ ಗುರಿ.

ವಿಜಯ ದರ್ಪಣ ನ್ಯೂಸ್

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಶುಕ್ರವಾರ ಗ್ರೇಟರ್ ನೋಯ್ಡಾದ ಸುಟ್ಯಾನದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸೆಂಟರ್ಗೆ ಭೇಟಿ ನೀಡಿದರು, ಅಲ್ಲಿ ಅವರು ‘ಅಖಿಲ ಭಾರತ ಸಸಿ ಅಭಿಯಾನದಡಿ’ಯಲ್ಲಿ ನಾಲ್ಕನೇ ಕೋಟಿಯ ಸಸಿಯನ್ನು ನೆಟ್ಟರು. ಈ ಸಂದರ್ಭದಲ್ಲಿ ಅವರು ಸಿಆರ್ಪಿಎಫ್ನ ಎಂಟು ವಿವಿಧ ಕ್ಯಾಂಪಸ್ಗಳಲ್ಲಿ ಹೊಸದಾಗಿ ನಿರ್ಮಿಸಲಾದ 15 ಕಟ್ಟಡಗಳನ್ನು ಆನ್ಲೈನ್ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾ, ‘ಇಂದು 40 ಮಿಲಿಯನ್ ಮರಗಳನ್ನು ನೆಡುವ ಗುರಿಯ ಸಾಧನೆಯೊಂದಿಗೆ ನಾವು 50 ಮಿಲಿಯನ್ ಮರಗಳನ್ನು ನೆಡುವ ಗುರಿಯನ್ನು ಸಾಧಿಸುವತ್ತ ಸಾಗುತ್ತಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿಆರ್ಪಿಎಫ್ ಯೋಧರ ಸಹಕಾರದಿಂದ ಇದು ಸಾಧ್ಯವಾಗಿದೆ’ ಎಂದರು.

ಶಾರವರು ಈ ಅಭಿಯಾನದಲ್ಲಿ ಗರಿಷ್ಠ ಆಮ್ಲಜನಕವನ್ನು ನೀಡುವ ಅಶ್ವತ್ಥ ಮರವನ್ನು ನೆಟ್ಟರು. ಜುಲೈ 2020 ರಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ದಕ್ಷ ಮಾರ್ಗದರ್ಶನದಲ್ಲಿ, ಗೃಹ ಸಚಿವಾಲಯವು ಪರಿಸರ ಸಂರಕ್ಷಣೆಗಾಗಿ ‘ಅಖಿಲ ಭಾರತ ಸಸಿ ನೆಡುವ ಅಭಿಯಾನ’ವನ್ನು ಪ್ರಾರಂಭಿಸಿತು.

ಶಾರವರ ಮೇಲ್ವಿಚಾರಣೆಯಲ್ಲಿ, 2020 ರಿಂದ 2022 ರ ಅಲ್ಪಾವಧಿಯಲ್ಲಿ 3.55 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಯಿತು. 4 ಕೋಟಿ ಸಸಿಗಳ ನೆಡುವಿಕೆಯೊಂದಿಗೆ, ಈ ವರ್ಷ ಇನ್ನು 1 ಕೋಟಿ ಮರಗಳನ್ನು ನೆಡುವ ಗುರಿಯನ್ನು ನಿಗದಿಪಡಿಸಲಾಗಿದೆ. ದೇಶದ ಭದ್ರತೆಯ ಜೊತೆಗೆ ಸಿಆರ್ಪಿಎಫ್ ಯೋಧರು ಪರಿಸರ ಸಂರಕ್ಷಣೆಗಾಗಿ ಮರಗಳನ್ನು ನೆಟ್ಟು ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಶಾ ಪ್ರಶಂಸಿದರು.

ಮೋದಿಯವರ ನಾಯಕತ್ವದಲ್ಲಿ ಮತ್ತು ಶಾರವರ ಮಾರ್ಗದರ್ಶನದಲ್ಲಿ ಪರಿಸರ ಸಂರಕ್ಷಣೆಯ ವಿಷಯವು ಕೇವಲ ದೇಶದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಮನ್ನಣೆಗೆ ಬಂದಿದೆ. ಕಳೆದ 9 ವರ್ಷಗಳಲ್ಲಿ, ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಸಾಕಷ್ಟು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೋದಿಯವರ ಈ ಉಪಕ್ರಮಗಳಿಂದಾಗಿ ವಿಶ್ವಸಂಸ್ಥೆಯು ಅವರಿಗೆ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಎಂಬ ಬಿರುದನ್ನು ನೀಡಿದೆ.