ಕೇರಳದ ಮಾಜಿ ಯೋಧನಿಗೆ ಮದುವೆ ಮಾಡಿಸುವುದಾಗಿ ವಂಚನೆ :ದಕ್ಷಿಣ ಕನ್ನಡ ಮೂಲದ ಮೂರು ಆರೋಪಿಗಳ ಬಂಧನ.

ವಿಜಯ ದರ್ಪಣ ನ್ಯೂಸ್ 

ಕೊಡಗು 

ಕೇರಳದ ಮಾಜಿ ಯೋಧರೊಬ್ಬರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ 8 ಲಕ್ಷ ರೂಪಾಯಿ ನಗದು ಹಾಗು 2,00000/- ಚೆಕ್ ಅನ್ನು ಪಡೆದು ತಲೆಮರಿಸಿಕೊಂಡಿದ್ದ ಆರೋಪಿಗಳನ್ನು ಕೊಡಗು ಪೊಲೀಸ್ ತಂಡ ಬಂಧಿಸಿದೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳದ ನಿವಾಸಿ ಅಬ್ದುಲ್ ಬಶೀರ್ 

ಕಡಬದ ನಿವಾಸಿ ಸಾಧಿಕ್  ಮತ್ತೊಬ್ಬ ಆರೋಪಿ ಫೈಸುಲ್, ಈಗಾಗಲೇ ಬೇರೊಂದು ಪ್ರಕರಣದಲ್ಲಿ ಮೈಸೂರಿನಲ್ಲಿ ಬಂಧನವಾಗಿದ್ದಾನೆ. ಬಂಧಿತ ಆರೋಪಿಗಳಿಂದ ಮೊಬೈಲ್ ನಗದು ಹಾಗೂ ಚೆಕ್ಕನ್ನು ವಶಪಡಿಸಿಕೊಳ್ಳಲಾಗಿದೆ.

ಇನೊರ್ವ ಆರೋಪಿ ಅಮೀರ್ ತಲೆಮಾರಿಸಿಕೊಂಡಿದ್ದಾನೆ .

ಘಟನೆಯ ವಿವರ:

ಕೇರಳದ ಎರಣಾಕೊಳಂ ಜಿಲ್ಲೆಯ ನಿವಾಸಿ 64 ವಯಸ್ಸಿನ ಮಾಜಿ ಯೋಧ ಜಾನ್ ಮೇಥಿವ್ ರವರಿಗೆ ಮದುವೆಯಾಗಲು ಒಳ್ಳೆಯ ಒಂದು ಹುಡುಗಿ ಇದ್ದಾಳೆ ಎಂದು ಹೇಳಿ ಅವರನ್ನು ನವೆಂಬರ್ 26ರಂದು ಮಡಿಕೇರಿಯ ಹೋಂಸ್ಟೇ ಒಂದಕ್ಕೆ ಕರೆಸಿಕೊಂಡು ಅಲ್ಲಿ ಮಹಿಳೆ ಒಬ್ಬಳನ್ನು ತೋರಿಸಿ ಇವರನ್ನು ವಿವಾಹ ವಾಗುವಂತೆ ಹೇಳಿ ಅದೇ ಹೋಂ ಸ್ಟೇನಲ್ಲಿ ಆರೋಪಿಗಳು ಮದುವೆ ಮಾಡಿಸಿ ಇಬ್ಬರನ್ನು ಹೋಂ ಸ್ಟೇಯಲ್ಲಿ ಅಂದು ತಂಗಲು ಅವಕಾಶ ನೀಡಿದ್ದರು.

ನಂತರ ಸಂಜೆ ಆರೋಪಿಗಳು ಇವರಿಬ್ಬರ ಜೊತೆಯಲ್ಲಿರುವ ಮದುವೆಯ ಫೋಟೋವನ್ನು ಜಾನ್ ಅವರಿಗೆ ತೋರಿಸಿ ಬ್ಲಾಕ್ ಮೈಲ್ ಮಾಡಿ ಒಟ್ಟು ಎಂಟು ಲಕ್ಷ ನಗದು ಹಾಗೂ 2 ಲಕ್ಷ ರೂಪಾಯಿ ಚೆಕ್ಕನ್ನು ಪಡೆದು ಆರೋಪಿಗಳು ಪರಾರಿಯಾಗಿದ್ದರು.

 ನಂತರ ಜಾನ್ ಮಡಿಕೇರಿ ಪೊಲೀಸರಿಗೆ ನೀಡಿದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಅವರಿಂದ ನಗದು ಮೂರು ಮೊಬೈಲ್ ಹಾಗೂ ಚೆಕ್ಕನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಿದ ತಂಡದಲ್ಲಿ ಮಡಿಕೇರಿ ಡಿ ವೈ ಎಸ್ಪಿ ಬಿ. ಜಗದೀಶ್ ಎಂ., ವೃತ್ತ ನಿರೀಕ್ಷಕರಾದ ಅನುಪ್ ಮಾದಪ್ಪ, ಡಿ ಸಿ ಆರ್ ಬಿ, ಇನ್ಸ್ಪೆಕ್ಟರ್ ಐ.ಪಿ ಮೇದಪ್ಪ, ನಗರ ಠಾಣಾಧಿಕಾರಿ ಲೋಕೇಶ್, ಪೊಲೀಸ್ ಸಿಬ್ಬಂದಿಗಳು ಹಾಗೂ ಮಹಿಳಾ ಸಿಬ್ಬಂದಿಗಳು ಭಾಗವಹಿಸಿದ್ದರು.