ಕೂಸಿನ ಮನೆ’ಗೆ ಯುನಿಸೆಫ್ ತಂಡ ಭೇಟಿ
ವಿಜಯ ದರ್ಪಣ ನ್ಯೂಸ್…
ಕೂಸಿನ ಮನೆ’ಗೆ ಯುನಿಸೆಫ್ ತಂಡ ಭೇಟಿ
ಬೆಂಗಳೂರು ಗ್ರಾ.ಜಿಲ್ಲೆ. ಜ 08. : ಹೊಸಕೋಟೆ ತಾಲ್ಲೂಕಿನ ಬೈಲನರಸಪುರ ಗ್ರಾಮ ಪಂಚಾಯಿತಿಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಕೂಸಿನ ಮನೆ’ ಕಾರ್ಯಕ್ರಮದ ಪರಿಣಾಮಗಳ ಕುರಿತು ಅಧ್ಯಯನ ಮಾಡಲು ಯುನಿಸೆಫ್ ಸಂಸ್ಥೆಯ ರಿನಿ ಕುರಿನ್ ಮುಖ್ಯಸ್ಥರು ಮತ್ತು ಪರಿಣಿತರ ತಂಡ ಭೇಟಿ ನೀಡಿದರು.
ನರೇಗಾ ಕೆಲಸಕ್ಕೆ ಹೋಗುವ ಕೂಲಿಕಾರರ ಮಕ್ಕಳಿಗಾಗಿ ವಿಶೇಷವಾಗಿ ಗ್ರಾಮ ಪಂಚಾಯತಿಗೆ ಒಂದರಂತೆ ತೆರೆದಿರುವ ಕೂಸಿನ ಮನೆಯು ಹೇಗೆ ಕಾರ್ಯ ನಿರ್ವಹಿಸುತ್ತಿದೆ ಮತ್ತು ಅದರಿಂದ ಮಕ್ಕಳಿಗೆ ಸಿಗುತ್ತಿರುವ ಸಾಧಕ, ಬಾಧಕಗಳ ಬಗ್ಗೆ ಅಧ್ಯಯನ ನಡೆಸಿತು.
ಹೊಸಕೋಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಾರಾಯಣಸ್ವಾಮಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಾಖೆಯ ಉಪನಿರ್ದೇಶಕ ಮುದ್ದಣ್ಣ, ಅನಿತಾ ಲಕ್ಷ್ಮಿ, ಆರೋಗ್ಯ ಇಲಾಖೆ ಅಧಿಕಾರಿಗಳು ಕೂಸಿನ ಮನೆ ಬಗ್ಗೆ ಮಾಹಿತಿ ನೀಡಿದರು.
ಯುನಿಸೆಫ್ ತಂಡದ ಕೂಸಿನ ಮನೆ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಮಕ್ಕಳ ಪೋಷಕರು, ಗ್ರಾಮ ಪಂಚಾಯತಿ ಮಟ್ಟದ ಕೂಸಿನ ಮನೆ ಮೇಲ್ವಿಚಾರಣಾ ಸಮಿತಿ, ಕೂಸಿನ ಮನೆ ಕೇರ್ ಟೇಕರ್ ಗಳು, ಗ್ರಾಮ ಪಂಚಾಯತಿ ಮತ್ತು ನರೇಗಾ ಅಧಿಕಾರಿ ಮತ್ತು ಸಿಬ್ಬಂದಿಗಳು, ಕೂಸಿನ ಮನೆ ಸೌಲಭ್ಯ ಪಡೆಯುತ್ತಿರುವ ಮಕ್ಕಳ ಪೋಷಕರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು.