ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಿದ್ದೇ ಆದಲ್ಲಿ ಹೂಡಿಕೆದಾರರು ಹೆಚ್ಚಾಗಿ ಬರುವ ನಿರೀಕ್ಷೆ ಇದೆ: ಸಚಿವ ಡಾ.ಎಂ ಸಿ ಸುಧಾಕರ್

ವಿಜಯ ದರ್ಪಣ ನ್ಯೂಸ್…..

ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಿದ್ದೇ ಆದಲ್ಲಿ ಹೂಡಿಕೆದಾರರು ಹೆಚ್ಚಾಗಿ ಬರುವ ನಿರೀಕ್ಷೆ ಇದೆ: ಸಚಿವ ಡಾ.ಎಂ ಸಿ ಸುಧಾಕರ್

ಶಿಡ್ಲಘಟ್ಟ ‌: ಜಂಗಮಕೋಟೆ ಹೋಬಳಿ ಪ್ರದೇಶದ ವ್ಯಾಪ್ತಿಯಲ್ಲಿನ ಕೈಗಾರಿಕಾ ಪ್ರದೇಶವು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವುದರಿಂದ ಅಭಿವೃದ್ಧಿ ಪಡಿಸಿದ್ದೇ ಆದಲ್ಲಿ ಹೂಡಿಕೆದಾರರು ಈ ಭಾಗಕ್ಕೆ ಹೆಚ್ಚಾಗಿ ಬರುವ ನಿರೀಕ್ಷೆ ಇದೆ ಇದು ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪೂರಕವಾಗಲಿದೆ ಎಂದು ಉನ್ನತ ಶಿಕ್ಷಣ ಹಾಗು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಜಂಗಮಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಕೈಗಾರಿಕಾ ಪುದೇಶವನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿರುವ ಯೋಜನೆಯ ಅನುಷ್ಠಾನದಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಜಂಗಮಕೋಟೆಯ ಶ್ರೀಜ್ಯೋತಿ ಶಾಲೆಯ ಅವರಣದಲ್ಲಿ ಆಯೋಜಿಸಿದ್ದ ರೈತರೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತಾಲ್ಲೂಕಿನ‌ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು ಸುಮಾರು 500 ಕ್ಕೂ ಹೆಚ್ಚು ಎಕ್ಕರೆ ಸರ್ಕಾರಿ ಭೂಮಿಯೂ ಸೇರಿದಂತೆ 2,863 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಭೂಸ್ವಾಧೀನಕ್ಕೆ ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.

ಈಗಾಗಲೇ ರೈತರನ್ನು ಕರೆಯಿಸಿ ಅವರು ಸ್ವಯಂಪ್ರೇರಿತರಾಗಿ ಭೂಮಿ‌ ನೀಡಿ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ‌ಮಾಡಿ‌ ಮನವೊಲಿಸುವ ಪ್ರಯತ್ನಗಳು ನಡೆದಿವೆ ಆದರೆ, ರೈತರ ನಿರ್ಧಾರವೇ ಅಂತಿಮವಾಗಿದ್ದು, ಕೆಲವು ರೈತರು ಭೂಮಿ‌ ನೀಡಲು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಇನ್ನು ಹಲವು ರೈತರು ಭೂಮಿ ನೀಡುವುದಿಲ್ಲ ಜೀವನೋಪಾಯ ಹಾಗೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಭೂಮಿಯನ್ನು ಬಿಟ್ಟುಕೊಡಲು ಆಗುವುದಿಲ್ಲವೆಂಬ ಅಭಿಪ್ರಾಯ ಮುಂದಿಟ್ಟಿದ್ದಾರೆ ಎಂದರು.

ಈ ಭಾಗದ ಭೂಸ್ವಾಧೀನ ವಿಚಾರವಾಗಿ ಸರ್ಕಾರ ಎಲ್ಲಾ ಆಯಾಮಗಳಿಂದಲೂ ಪರಿಶೀಲಿಸಿ ರೈತರಿಗೆ ತೊಂದರೆಯಾದಂತೆ ಅಂತಿಮ‌ ನಿರ್ಧಾರ ತೆಗೆದುಕೊಳ್ಳಲಿದೆ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೈಗಾರಿಕಾ ಪ್ರದೇಶಾಭಿವೃದ್ಧಿಯೂ ಮುಖ್ಯವಾಗಿದೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಭೂಮಿ‌ ನೀಡುವುದರಿಂದ ರೈತರಿಗೆ ಆರ್ಥಿಕವಾಗಿ ದೊರೆಯುವ ಪ್ರಯೋಜನಗಳ ಜೊತೆಗೆ, ಅವರ ಕುಟುಂಬದ ಸದಸ್ಯರೊಬ್ಬರಿಗೆ ಉದ್ದೇಶಿತ ಕೈಗಾರಿಕೆಗಳಲ್ಲಿ ವಿದ್ಯಾರ್ಹತೆಗೆ ತಕ್ಕ ಉದ್ಯೋಗವೊಂದನ್ನು ನೀಡುವ ವಿಚಾರವನ್ನೂ ಅವರ ಮುಂದಿಡಲಾಗಿದೆ ತೀರ್ಮಾನ ಅಂತಿಮವಾಗಿ ಅವರಿಗೇ ಬಿಟ್ಟಿದ್ದಾಗಿದೆ ಎಂದು ಹೇಳಿದರು.

ಈಗಾಗಲೇ ಈ‌ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಪ್ರವೇಶಿಸಿ ರೈತರನ್ನು ದಿಕ್ಕು ತಪ್ಪಿಸಿ ಒಪ್ಪಂದ ಮಾಡಿಕೊಂಡಿದ್ದಾರೆ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಭೂಮಿಯ ಅಧಿಕೃತ ಮಾಲೀಕ ರೈತರನ್ನು ಗುರುತಿಸಿ ಹಂತ ಹಂತವಾಗಿ ಸಭೆಗಳನ್ನು ನಡೆಸಿ ಚರ್ಚಿಸಿ ಮುಕ್ತ ಅಭಿಪ್ರಾಯಗಳನ್ನು ಪಡೆಯಲಾಗುತ್ತಿದೆ ಭೂಸ್ವಾಧೀನ‌ ವಿಚಾರದಲ್ಲಿ ಯಾವುದೇ ಬಲವಂತ ಮತ್ತು ಒತ್ತಡದ ಪ್ರಶ್ನೆಯೇ ಇಲ್ಲ ರೈತರು ತಮ್ಮ ಭವಿಷ್ಯ ಮತ್ತು ಜಿಲ್ಲೆಯ ಅಭಿವೃದ್ಧಿ ಹಾಗೂ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಸ್ವಯಂಪ್ರೇರಿತರಾಗಿ ಭೂಮಿ‌ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಿದ್ದಾರೆ ಎಂದರು.

ಎಲ್ಲಾ ರೈತರನ್ನೂ ಮತ್ತು ಭೂಮಿ ಹಕ್ಕುದಾರರನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಮುಂದಿನ‌ ಹೆಜ್ಜೆ ಇಡಲಿದೆ ಎಲ್ಲಾ ಸಾಧಕ ಬಾಧಕಗಳನ್ನೂ ರೈತರ ಮುಂದಿಡಲಾಗಿದ್ದು, ಇಂದಿನ ಸಭೆಯಲ್ಲಿ ಭೂಮಿ ನೀಡುವವರು ಬಿಳಿ ಹಾಳೆಯ ಮೇಲೆ ಹಾಗೂ ಅದಕ್ಕೆ ಒಪ್ಪಿಗೆ ಇಲ್ಲದವರು ಕೆಂಪು ಹಾಳೆ ಮೇಲೆ ಬರೆದು ಸಹಿ ಬಾಕಿ ಕೊಟ್ಟಿದ್ದಾರೆ ಈ ಎಲ್ಲವನ್ನೂ ಸರ್ಕಾರ ಪರಿಶೀಲಿಸಲಿದ್ದು ಹೆಚ್ಚಿನ ರೈತರು ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಾರೋ ಅದರಂತೆ ಕ್ರಮ ವಹಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳೂ ಪಾರದರ್ಶಕವಾಗಿ ನಡೆಯಲಿವೆ ಎಂದರು.

ಎಲ್ಲಾ ರೈತರನ್ನೂ ಹಾಗು ಭೂಮಿ ಹಕ್ಕುದಾರರನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಮುಂದಿನ‌ ಹೆಜ್ಜೆ ಇಡಲಿದೆ ಎಲ್ಲಾ ಸಾಧಕ ಬಾಧಕಗಳನ್ನೂ ರೈತರ ಮುಂದಿಡಲಾಗಿದ್ದು, ಇಂದಿನ ಸಭೆಯಲ್ಲಿ ಭೂಮಿ ನೀಡುವವರು ಬಿಳಿ ಹಾಳೆಯ ಮೇಲೆ ಹಾಗೂ ಅದಕ್ಕೆ ಒಪ್ಪಿಗೆ ಇಲ್ಲದವರು ಕೆಂಪು ಹಾಳೆ ಮೇಲೆ ಬರೆದು ಸಹಿ ಹಾಕಿಕೊಟ್ಟಿದ್ದಾರೆ ಈ ಎಲ್ಲವನ್ನೂ ಸರ್ಕಾರ ಪರಿಶೀಲಿಸಲಿದ್ದು ಹೆಚ್ಚಿನ ರೈತರು ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಾರೋ ಅದರಂತೆ ಕ್ರಮ ವಹಿಸಲಾಗುತ್ತದೆ ಈ ಎಲ್ಲಾ ಪ್ರಕ್ರಿಯೆಗಳೂ ಪಾರದರ್ಶಕವಾಗಿ ನಡೆಯಲಿವೆ ಎಂದರು.

ಈ ವೇಳೆ ಸ್ಥಳೀಯ ರೈತರು ಹಾಜರಿದ್ದು ಲಿಖಿತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

,**************************************

ಶಿಡ್ಲಘಟ್ಟ : ಅಭಿಪ್ರಾಯ ಸಂಗ್ರಹ ಸಭೆಗೆ ಹಾಜರಾಗಲು  1082 ಮಂದಿ ಖಾತೆದಾರರಿಗೆ ತಿಳುವಳಿಕೆ ಪತ್ರವನ್ನು ನೀಡಿದ್ದು ಈ ಪೈಕಿ  802 ಮಂದಿ ರೈತರು (ಶೇ .74) ಹಾಜರಾಗಿದ್ದರು. 280 ಮಂದಿ ಗೈರು(ಶೇ.25) ಹಾಜರಾಗಿದ್ದಾರೆ.

ಈ ಪೈಕಿ ಕೆಐಎಡಿಬಿಗೆ ಜಮೀನು ನೀಡುವುದಿಲ್ಲ ಎಂದು 437 ರೈತರು(ಶೇ.40.3) ರಷ್ಟು ರೈತರು ತಮ್ಮ ಅಭಿಪ್ರಾಯ ಮಂಡಿಸಿದ್ದರೆ ಜಮೀನು ನೀಡುವುದಾಗಿ ೩೬೫ ಮಂದಿ ರೈತರು(ಶೇ.33.7) ತಿಳಿಸಿದ್ದಾರೆ.

ಸಭೆಯ ನಂತರ ಈ ವಿಷಯವನ್ನು ತಿಳಿಸಿದ ಸಚಿವ ಡಾ.ಎಂ.ಸಿ.ಸುಧಾಕರ್, ಇನ್ನೂ ಸಹ ಸಭೆಗೆ ಬಾರದ ರೈತರ ಅಭಿಪ್ರಾಯವನ್ನು ಕೂಡ ಪಡೆಯಬೇಕಿದೆ ,ಇಲ್ಲವಾದಲ್ಲಿ ಕಾನೂನಿನಂತೆ ಎದುರಾಗಬಹುದಾದ ಅಡಚಣೆಗಳನ್ನು ಕೂಡ ನಾವು ಗಮನಿಸಬೇಕಾಗುತ್ತದೆ ಎಂದರು.

ಗೈರು ಹಾಜರಾದ ರೈತರ ಅಭಿಪ್ರಾಯವನ್ನೂ ಪಡೆದ ನಂತರ ಒಟ್ಟಾರೆ ಅಭಿಪ್ರಾಯದ ಅಂಕಿ ಅಂಶಗಳನ್ನು ಆಧರಿಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಬೇಕಾಗುತ್ತದೆ, ಒಮ್ಮೆ ಸ್ವಾದೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಿದ ನಂತರ ಮತ್ತೆ ಅಧಿಸೂಚನೆ ರದ್ದುಪಡಿಸಲು ಸಚಿವ ಸಂಪುಟದಲ್ಲೆ ತೀರ್ಮಾನ ಮಾಡಬೇಕಾಗುತ್ತದೆ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮಗಳ ಬಗ್ಗೆ ಶೀಘ್ರದಲ್ಲೆ ತಿಳಿಸಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಶಾಸಕ ಬಿ.ಎನ್.ರವಿಕುಮಾರ್,ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್,
ಜಿಲ್ಲಾ ಪಂಚಾಯತಿ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ , ತಹಸೀಲ್ದಾರ್ ಬಿ.ಎನ್.ಸ್ವಾಮಿ, ತಾಲ್ಲೂಕು ಪಂಚಾಯತಿ ಇ.ಒ. ಹೇಮಾವತಿ ಹಾಗೂ ರೈತ ಸಂಘಟನೆಗಳ ಮುಖಂಡರಾದ ಭಕ್ತರಹಳ್ಳಿ ಭೈರೇಗೌಡ,ತಾದೂರು ಮಂಜುನಾಥ್, ನಡಿಪಿನಾಯಕನಹಳ್ಳಿ ವೆಂಕಟೇಶ್, ಬೆಳ್ಳೂಟಿ ಮುನಿಕೆಂಪಣ್ಣ, ಪ್ರತೀಶ್ ಮುಂತಾದವರು ಹಾಜರಿದ್ದರು.