ಬಸವಣ್ಣನವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ : ಶಾಸಕ ಬಿ ಎನ್ ರವಿಕುಮಾರ್
ವಿಜಯ ದರ್ಪಣ ನ್ಯೂಸ್…
ಬಸವಣ್ಣನವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ : ಶಾಸಕ ಬಿ ಎನ್ ರವಿಕುಮಾರ್
ಶಿಡ್ಲಘಟ್ಟ : ಸಮಾನತೆಯ ಸಮ ಸಮಾಜ ನಿರ್ಮಿಸಲು ಜಾತಿ ಧರ್ಮದ ಭೇದವಿಲ್ಲದೆ ಹೋರಾಡಿದ ಬಸವಣ್ಣನವರ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು ಅವರು ನೀಡಿದ ಸಂದೇಶಗಳು ನಾವು ವಿಶ್ವ ಭ್ರಾತೃತ್ವದ ದಾರಿಗೆ ನಡೆಯಲು ದಿಕ್ಕು ತೋರಿಸುತ್ತವೆ ಎಂದು ಶಾಸಕ ಬಿ.ಎನ್.
ರವಿಕುಮಾರ್ ತಿಳಿಸಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಶ್ರೀಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಖುದ್ದು ಬಾಗವಹಿಸಿ ಮಾತನಾಡಿದರು.
ಬಸವಣ್ಣರವರು ಕೊನೆಗಾಲದ ವ್ಯಕ್ತಿಗೂ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಶ್ರಮಿಸಿದವರು ಅವರ ವಚನಗಳು ಕಾಲಾಂತರಕ್ಕೂ ಮಾರ್ಗದೀಪವಾಗಿದ್ದು 12ನೇ ಶತಮಾನದಲ್ಲಿಯೇ ಬಸವಣ್ಣನವರು ಮಾನವ ಸಮಾನತೆಯ ತಾತ್ವಿಕ ನೆಲೆ ನಿರ್ಮಿಸಿದ್ದರು ಎಂದು ಹೇಳಿದರು.
ಗ್ರೇಡ್-2 ತಹಶೀಲ್ದಾರ್ ಪೂರ್ಣಿಮಾ ಮಾತನಾಡಿ,
ಬಸವಣ್ಣನವರ ವಚನಗಳು ಪ್ರತಿಯೊಬ್ಬನ ದೈನಂದಿನ ಬದುಕಿಗೆ ಅನ್ವಯವಾಗಬೇಕು ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಈ ತತ್ವಗಳಿಗೆ ಆದ್ಯತೆ ಇದೆ ಎಂದು ವಿವರಿಸಿದರು.
ಜಿಲ್ಲಾ ಜಾಗೃತಿ ಸಮಿತಿಯ ಮೇಲೂರು ಮಂಜುನಾಥ್ ಮಾತ ನಾಡಿ ಸಮಾನತೆಯ ಸಮಾಜದ ಕನಸು ಕಂಡು, ಎಲ್ಲರೂ ನನ್ನವರೇ ಎಂಬ ಭಾವನೆ ಸಾರಿದರು ಅವರ ಸಂದೇಶ ಇಂದು ಕೂಡ ಸಮಾಜದಲ್ಲಿ ಶಾಂತಿ ಮತ್ತು ಐಕ್ಯತೆಗೆ ಎಲ್ಲಾರಿಗೂ ಮಾರ್ಗದರ್ಶಿಯಾಗಿ ಮುಂದುವರಿದಿದೆ ಎಂದರು.
ಬಸವೇಶ್ವರ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಿ.ಸಿ. ನಂದೀಶ್ ಮಾತನಾಡಿ ವಚನಗಳ ಮೂಲಕ ಬಸವಣ್ಣನವರು ಜಗತ್ತಿಗೆ ಮಾನವೀಯ ಮೌಲ್ಯಗಳ ಪಾಠ ನೀಡಿದ್ದಾರೆ ಜಾತ್ಯತೀತ ಸಮಾಜ, ಸ್ತ್ರೀ-ಪುರುಷ ಸಮಾನತೆ, ಕಾಯಕ-ದಾಸೋಹ, ನಿಸರ್ಗ ಪ್ರೀತಿ ,ಮಮತೆ, ಭಕ್ತಿಯ ತತ್ತ್ವವನ್ನು ಇಡೀ ವಿಶ್ವಕ್ಕೆ ಬೋಧಿಸಿದರು ಎಂದರು.
ಈ ವೇಳೆ ಸಮುದಾಯದ ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಇ.ಒ. ಹೇಮಾವತಿ, ಬಿಇಒ ಪ್ರಸನ್ನ, ಪೌರಾಯುಕ್ತ ಮೋಹನ್ ಕುಮಾರ್,ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್, ಸಮುದಾಯ ಸಮನ್ವಯ ಮುಖಂಡರು ಹಾಗು ನಾಗರಿಕರು ಪಾಲ್ಗೊಂಡಿದ್ದರು.