ತೆರಿಗೆ ಲೂಟಿ ಮಾಡಿದ್ದೇ ಕಾಂಗ್ರೆಸ್ – ಬಿಜೆಪಿ ಸಾಧನೆ: ಹೆಚ್ ಡಿ ಕೆ

ಕಾಂಗ್ರೆಸ್- ಬಿಜೆಪಿ ರಾಜ್ಯದ ಜನರ ತೆರಿಗೆ ಹಣ ಲೂಟಿ ಮಾಡಿದ್ದನ್ನು ಬಿಟ್ಟರೆ ಬೇರೇನು ಸಾಧನೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ವರವಲಯದ ಬೈಪಾಸ್ ರಸ್ತೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿಆರ್ ನರಸಿಂಹಮೂರ್ತಿ ಪರ ಪ್ರಚಾರ ನಡೆಸಿ ಮಾತನಾಡಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ – ಬಿಜೆಪಿ ಎರಡು ಪಕ್ಷಗಳಿಗೆ ಅಭಿವೃದ್ಧಿ ಬೇಕಾಗಿಲ್ಲ ರಾಜ್ಯದ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದರೆ ಜನ ಮುಂದೆ ನಮ್ಮ ಮಾತು ಕೇಳೋದಿಲ್ಲ ಎಂಬ ಕಾರಣಕ್ಕೆ ಹಿಂದೆಟು ಹಾಕುತ್ತಿದ್ದಾರೆ .ಈ ಬಗ್ಗೆ ಜನ ಯೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ನಮ್ಮ ತೆರಿಗೆ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪಕ್ಷಗಳಿಗೆ ಪಾಠ ಕಲಿಸಬೇಕು ಪ್ರಾದೇಶಿಕ ಅಭಿವೃದ್ಧಿ ಹಿತಾಸಕ್ತಿ ಹೊಂದಿರುವ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.

ಒಮ್ಮೆ ಸಂಪೂರ್ಣ ಬಹುಮತ ನೀಡಿ ನನಗೆ ಯಾವುದೇ ವೈಯಕ್ತಿಕ ಆಸೆ ಇಲ್ಲ ನಾಡಿನ ಭವಿಷ್ಯದ ದೃಷ್ಟಿಯಿಂದ ಅನಾರೋಗ್ಯವನ್ನು ಲೆಕ್ಕಿಸದೆ ನಾಲ್ಕು ತಿಂಗಳಿಂದ ಏಕಾಂಗಿಯಾಗಿ ರಾಜ್ಯವನ್ನು ಸ್ವತ್ತುತ್ತಿದ್ದೇನೆ. ಒಮ್ಮೆ ಸಂಪೂರ್ಣ ಬಹುಮತವನ್ನು ನಮ್ಮ ಪಕ್ಷಕ್ಕೆ ನೀಡಿ ಪಂಚರತ್ನ ಯೋಜನೆಗಳ ಜಾರಿಗೆ ಜೆಡಿಎಸ್ ಬೆಂಬಲಿಸಿ ಬಡ ಕುಟುಂಬಗಳ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ. ಹಾಲಿಗೆ ಪ್ರೋತ್ಸಾಹ ಧನವನ್ನು 5 ರಿಂದ 8 ರೂಪಾಯಿಗೆ ಹೆಚ್ಚಿಸುತ್ತೇನೆ ಎಂದು ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.