ರಾಜಕೀಯ ದ್ವೇಷಕ್ಕೆ ದ್ರಾಕ್ಷಿ ಗಿಡಗಳ ಬಲಿ ..

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ವಿಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ದುಷ್ಕರ್ಮಿಗಳು ದ್ರಾಕ್ಷಿ ಗಿಡಗಳನ್ನು ಕತ್ತರಿಸಿದ್ದಾರೆ.

ಈ ಸಂಬಂಧ ತೋಟದ ಮಾಲೀಕ ರಘು ರವರು ಪೊಲೀಸರಿಗೆ ದೂರು ನೀಡಿದ್ದು ರಾಜಕೀಯ ದ್ವೇಷದಿಂದ ಈ ದೃಷ್ಕೃತ್ಯ ನಡೆದಿದ್ದು ನನಗೆ ಮೂರು ಲಕ್ಷ ನಷ್ಟವಾಗಿದೆ ಎಂದು ದೂರು ನೀಡಿದ್ದಾರೆ.

ಈ ಹಿಂದೆ ಎರಡು ಬಾರಿ 200ಕ್ಕೂ ಹೆಚ್ಚು ದ್ರಾಕ್ಷಿ ಗಿಡಗಳನ್ನು ಕತ್ತರಿಸಿ ಲಕ್ಷಾಂತರ ರೂಪಾಯಿಗಳಷ್ಟು ನಷ್ಟ ಉಂಟು ಮಾಡಿದ್ದರು. ಎರಡು ಬಾರಿ ವಿಜಯಪುರ ಪೊಲೀಸ್ ಠಾಣೆಯಲ್ಲಿ ಎಪ್ ಐ ಆರ್ ದಾಖಲಾಗಿತ್ತು ಎಂದು ತಿಳಿಸಿದ್ದಾರೆ
ದ್ರಾಕ್ಷಿ ಗಿಡಗಳನ್ನು ನಾಟಿ ಮಾಡಿ ಮೂರು ವರ್ಷ ಕಳೆದಿದ್ದು ಎರಡು ಬಾರಿ ಬೆಳೆ ಕಟಾವು ಮಾಡಲಾಗಿತ್ತು ರಾಜಕೀಯ ದ್ವೇಷದಿಂದ ಬಾರಿ 60 ಹೆಚ್ಚು ಗಿಡಗಳನ್ನು ಕತ್ತರಿಸಿ ಈ ರೀತಿಯಾಗಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯಪುರ ಪೊಲೀಸ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.