ವಿಭಿನ್ನತೆಯ ಮಹತ್ವ ಅರಿತರೆ ?
ವಿಜಯ ದರ್ಪಣ ನ್ಯೂಸ್… ವಿಭಿನ್ನತೆಯ ಮಹತ್ವ ಅರಿತರೆ ? ಇಲ್ಲಿ ಒಬ್ಬರಂತೆ ಇನ್ನೊಬ್ಬರಿಲ್ಲ. ಆ ಸೃಷ್ಟಿಕರ್ತನ ಸೃಷ್ಟಿ ಕಾರ್ಯ ಅಚ್ಚರಿ, ಅನಂತ, ಅಗಾಧ. ಪ್ರತಿಯೊಬ್ಬರ ರೂಪ, ಗುಣ ನಡೆ, ನುಡಿ ಯೋಚನಾ ರೀತಿ ಎಲ್ಲವೂ ಭಿನ್ನ ಭಿನ್ನ. ಹೀಗೆ ಯೋಚಿಸುವಾಗ ಒಮ್ಮೊಮ್ಮೆ ನಾನಾ ಬಗೆಯ ಚಿಂತನೆಗಳು ಹೊರಹೊಮ್ಮುತ್ತವೆ. ಭಿನ್ನತೆಯ ಹಿಂದಿನ ಸ್ವಾರಸ್ಯ ಅರಿವಿಗೆ ಬರುತ್ತದೆ. ಆ ಭಿನ್ನತೆಯೇ ಈ ಜಗವನ್ನು ಇಷ್ಟು ಸುಂದರಗೊಳಿಸಿರುವುದು ಅಂತ ತಿಳಿದುಕೊಳ್ಳಲು ಬಹಳ ಹೊತ್ತು ಹಿಡಿಯುವುದಿಲ್ಲ. ಆದರೂ ಚಿಂತನೆಯ ಫಲವನ್ನು ಅಳವಡಿಸಿಕೊಳ್ಳುವುದು ನಮ್ಮಲ್ಲಿ…