ಸಹಕಾರಿಗಳ ಸಮಾಪನೆ ಗೊಳಿಸುವ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ವಿಜಯ ದರ್ಪಣ ನ್ಯೂಸ್…. ಸಹಕಾರಿಗಳ ಸಮಾಪನೆ ಗೊಳಿಸುವ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆ , ಜ.03: ದೊಡ್ಡಬಳ್ಳಾಪುರ ಉಪ ವಿಭಾಗದ ಕಚೇರಿ ವ್ಯಾಪ್ತಿಯಲ್ಲಿ ಕೆಳಕಂಡ ಸೌಹಾರ್ದ ಸಹಕಾರಿಗಳು ನೋಂದಣಿಯಾಗಿದ್ದು ಇದರ ಆಡಳಿತ ವ್ಯಾಪ್ತಿಯು ತಾಲೂಕು ಮಟ್ಟಕ್ಕಿಂತ ಕಡಿಮೆಗೆ ಸೀಮಿತವಾಗಿರುತ್ತದೆ. ಆದ್ದರಿಂದ ಸಂಯುಕ್ತ ಸಹಕಾರಿಯ ಆಡಳಿತ ಮಂಡಳಿಯ ನಿರ್ಣಯದ ಅನುಸಾರ ಸಹಕಾರಿಯ ಕಾರ್ಯ ಚಟುವಟಿಕೆಗಳು ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿವೆ. ಈ ಸಹಕಾರಿಗಳನ್ನು ಕಾಯ್ದೆ ಅನುಸಾರ ಕಾರ್ಯ ವ್ಯಾಪ್ತಿಯ ನಿಬಂಧಕರುಗಳಿಗೆ ಸಮಾಪನೆಗೊಳಿಸಲು ಶಿಫಾರಸ್ಸು…
