ಭಗವಂತನ ನೆರಳು
ವಿಜಯ ದರ್ಪಣ ನ್ಯೂಸ್ ಭಗವಂತನ ನೆರಳು. ಹಿಂದೆ ಒಂದು ಕಾಲದಲ್ಲಿ ಒಬ್ಬ ಮುನಿಗಳಿದ್ದರು. ಆ ಮುನಿಗಳು ಎಷ್ಟು ಪವಿತ್ರರೆಂದರೆ, ನಕ್ಷತ್ರಗಳು ತಮ್ಮಗರಿವಿಲ್ಲದಂತೆ ಬೆಳಕನ್ನು ನೀಡುವಂತೆ, ಹೂಗಳು ತಮಗರಿವಿಲ್ಲದಂತೆ ಸುಗಂಧವನ್ನು ಸೂಸುವಂತೆ, ಈ ಮುನಿಗಳು, ತಮ್ಮಗರಿವಿಲ್ಲದಂತೆ ಸದ್ಗುಣ , ಸಚ್ಚಾರಿತ್ರ್ಯವನ್ನು ಹರಡುತ್ತಾ ಸಾಗಿದ್ದರು. ಈ ಮುನಿಗಳ ದಿವ್ಯತೆ ಪವಿತ್ರತೆ, ದೇವತೆಗಳನ್ನು ಕೂಡಾ ಆಕರ್ಷಿಸಿ,ಧರೆಗಿಳಿಯುವಂತೆ ಮಾಡಿತು. ಇವರ ದಿವ್ಯತೆಯನ್ನು ಕಂಡ ದೇವತೆಗಳು, ಪರಮಾತ್ಮನಲ್ಲಿ, ಪ್ರಭೂ ,ಈ ಮುನಿಗಳಿಗೆ ಕೆಲವು ದಿವ್ಯ ಶಕ್ತಿಗಳನ್ನು ನೀವು ವರದಾನವಾಗಿ ಕರುಣಿಸಿ, ಅವರು ಅದನ್ನು ಖಂಡಿತವಾಗಿ…