“ಹೆಚ್.ಡಿ. ದೇವೇಗೌಡ ಕಪ್ – 2026”:   ವಿಜೇತ ತಂಡಗಳಿಗೆ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಬಹುಮಾನ ವಿತರಣೆ

ವಿಜಯ ದರ್ಪಣ ನ್ಯೂಸ್..  “ಹೆಚ್.ಡಿ. ದೇವೇಗೌಡ ಕಪ್ – 2026”: ವಿಜೇತ ತಂಡಗಳಿಗೆ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಬಹುಮಾನ ವಿತರಣೆ ​ದೇವನಹಳ್ಳಿ: ಕುಂದಾಣ ಹೋಬಳಿಯ ಚಪ್ಪರಕಲ್ಲು ಬಳಿ ಜೆ.ಡಿ.ಎಸ್ ಪಕ್ಷದ ಸಹಯೋಗದೊಂದಿಗೆ ಎಂ.ಸಿ.ಸಿ. ಕ್ರಿಕೆಟರ್ಸ್ ವತಿಯಿಂದ ಆಯೋಜಿಸಲಾಗಿದ್ದ “ದೇವನಹಳ್ಳಿ-ದೊಡ್ಡಬಳ್ಳಾಪುರ ಮಟ್ಟದ ಭವ್ಯ ನಾಕ್ ಔಟ್ ಕ್ರಿಕೆಟ್ ಪಂದ್ಯಾವಳಿ”ಯ ಸಮಾರೋಪ ಸಮಾರಂಭ ಅತ್ಯಂತ ವೈಭವದಿಂದ ಜರುಗಿತು. ​ಆಲೂರುದುದ್ದನಹಳ್ಳಿ ಹಾಗೂ ಮನಗೊಂಡನಹಳ್ಳಿ MCC ತಂಡಗಳ ನಡುವೆ ನಡೆದ ಅತ್ಯಂತ ರೋಮಾಂಚನಕಾರಿ ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ “ಮನಗೊಂಡನಹಳ್ಳಿ … Read more

ಕೃಷಿ ಚಟುವಟಿಕೆಯಲ್ಲಿ ಸಂಯುಕ್ತ ರಸಗೊಬ್ಬರ ಬಳಕೆಗೆ ಸಲಹೆ

ವಿಜಯ ದರ್ಪಣ ನ್ಯೂಸ್….. ಕೃಷಿ ಚಟುವಟಿಕೆಯಲ್ಲಿ ಸಂಯುಕ್ತ ರಸಗೊಬ್ಬರ ಬಳಕೆಗೆ ಸಲಹೆ ಬೆಂ.ಗ್ರಾ ಜಿಲ್ಲೆ ಜೂ.08: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೃಷಿಚಟುವಟಿಕೆಗಳು ಬಿರುಸುಗೊಂಡಿದ್ದು, ರೈತರು ಡಿಎಪಿ ರಸಗೊಬ್ಬರ ಬದಲಿಗೆ ಸಂಯುಕ್ತ ರಸಗೊಬ್ಬರ ಬಳಕೆ ಮಾಡಲು ಕೃಷಿ ಇಲಾಖೆ ಸಲಹೆ ನೀಡಿದೆ. ಸಸ್ಯಗಳ ಬೆಳವಣಿಗೆಗೆ 17 ಪೋಷಕಾಂಶಗಳ ಅಗತ್ಯವಿದೆ. ಅವುಗಳಲ್ಲಿ ಗಾಳಿ ಮತ್ತು ನೀರಿನ ಮೂಲಕ ಇಂಗಾಲ, ಜಲಜನಕ ಮತ್ತು ಆಮ್ಲಜನಕವು ಸ್ವಾಭಾವಿಕವಾಗಿ ದೊರೆಯಲಿದ್ದು, ಉಳಿದ 14 ಪೋಷಕಾಂಶಗಳಿಗೆ ಸಂಯುಕ್ತ ರಸಗೊಬ್ಬರ ಬಳಕೆ ಮಾಡಬೇಕು ಎಂದು ಮಾಹಿತಿ ನೀಡಿದೆ. … Read more

ಅಳಬೇಡಿ ಸ್ವಾಮಿ ಅಳಬೇಡಿ, ದಯವಿಟ್ಟು ಅಳಬೇಡಿ, ಸ್ವಲ್ಪ ನಕ್ಕು ಬಿಡಿ….. ವಿವೇಕಾನಂದ ಎಚ್ ಕೆ

[07/06, 3:21 pm] Vivekananda H K Vivek: https://youtu.be/Q5lzea6duZw?si=bAPz4ceFmNX1DzxA [08/06, 6:21 am] Vivekananda H K Vivek: ಅಳಬೇಡಿ ಸ್ವಾಮಿ ಅಳಬೇಡಿ, ದಯವಿಟ್ಟು ಅಳಬೇಡಿ, ಸ್ವಲ್ಪ ನಕ್ಕು ಬಿಡಿ….. ವಿವೇಕಾನಂದ ಎಚ್ ಕೆ ನಾನು ವಿದ್ಯಾವಂತನಾಗಿರಲಿಲ್ಲ, ಅದರಿಂದಾಗಿ ಯಶಸ್ವಿಯಾಗಲಿಲ್ಲ. ನಾನು ಬುದ್ದಿವಂತನಾಗಿರಲಿಲ್ಲ, ಅದರಿಂದಾಗಿ ಜನಪ್ರಿಯನಾಗಲಿಲ್ಲ. ನಾನು ಪ್ರತಿಭಾವಂತನಾಗಿರಲಿಲ್ಲ, ಅದರಿಂದಾಗಿ ಪ್ರಖ್ಯಾತನಾಗಲಿಲ್ಲ. ನಾನು ಶ್ರೀಮಂತನಾಗಿರಲಿಲ್ಲ, ಅದರಿಂದಾಗಿ ಗೌರವ ಪಡೆಯಲಿಲ್ಲ, ನಾನು ದೊಡ್ಡ ಪ್ರಬಲ ಸಮುದಾಯಕ್ಕೆ ಸೇರಿರಲಿಲ್ಲ. ಅದರಿಂದಾಗಿ ಸಹಕಾರ ಸಿಗಲಿಲ್ಲ. ನಾನು ದೊಡ್ಡವರ ಮನೆ ಮಗನಾಗಿರಲಿಲ್ಲ, ಅದರಿಂದಾಗಿ ಮಾರ್ಗದರ್ಶನ … Read more

ನಂಜನಗೂಡಿನಲ್ಲಿ ಹಳಿ ತಪ್ಪಿದ ತಾಲ್ಲೂಕು ಆಡಳಿತ…… ಲಂಚಾವತಾರ ಆರೋಪ…! ಸಿಡಿದೆದ್ದ ರೈತ ಸಂಘದ ಕಾರ್ಯಕರ್ತರಿಂದ ಬಾರ್ ಕೋಲ್ ಚಳುವಳಿ ಮೂಲಕ ಆಕ್ರೋಶ.

ವಿಜಯ ದರ್ಪಣ ನ್ಯೂಸ್…. ನಂಜನಗೂಡಿನಲ್ಲಿ ಹಳಿ ತಪ್ಪಿದ ತಾಲ್ಲೂಕು ಆಡಳಿತ…… ಲಂಚಾವತಾರ ಆರೋಪ…! ಸಿಡಿದೆದ್ದ ರೈತ ಸಂಘದ ಕಾರ್ಯಕರ್ತರಿಂದ ಬಾರ್ ಕೋಲ್ ಚಳುವಳಿ ಮೂಲಕ ಆಕ್ರೋಶ. ತಾಂಡವಪುರ ಜೂನ್ 8:  ನಂಜನಗೂಡು ತಾಲೂಕು ಕಚೇರಿಯಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಹಣಬಾಕ ಅಧಿಕಾರಿಗಳ ವಿರುದ್ಧ ತಾಲೂಕು ರೈತ ಸಂಘದ ಕಾರ್ಯಕರ್ತರು ಸಿಡಿದೆದ್ದಿದ್ ಬಾರ್ಕೋಲ್ ಚಳುವಳಿ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್, ಸಿಂಧುವಳ್ಳಿ ಸತೀಶ್ ಇಮ್ಮಾವು ರಘು ಮತ್ತು ತಾಲೂಕು ಅಧ್ಯಕ್ಷ … Read more

ಮಕ್ಕಳು ಪ್ರತಿಭಾವಂತರಾಗಿ, ಉತ್ತಮ ಪ್ರಜೆಯಾಗಿ ಬಾಳಬೇಕು :ಶಾಸಕ ದಿನೇಶ್ ಗುಂಡೂರಾವ್

ವಿಜಯ ದರ್ಪಣ ನ್ಯೂಸ್…… ಮಕ್ಕಳು ಪ್ರತಿಭಾವಂತರಾಗಿ, ಉತ್ತಮ ಪ್ರಜೆಯಾಗಿ ಬಾಳಬೇಕು :ಶಾಸಕ ದಿನೇಶ್ ಗುಂಡೂರಾವ್ ಗಾಂಧಿನಗರ ವಿಧಾನಸಭಾ ಕ್ಷೇತ್ರ: ಆರ್.ಗುಂಡೂರಾವ್ ಕ್ರೀಡಾ ಸಂಕೀರ್ಣದಲ್ಲಿ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಫೌಂಡೇಷನ್ ವತಿಯಿಂದ ಶಾಲಾ ಮತ್ತು ಕಾಲೇಜು ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮತ್ತು Rankಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ನಗದು ಪುರಸ್ಕಾರ ಸಮಾರಂಭ ಶಾಸಕ ದಿನೇಶ್ ಗುಂಡೂರಾವ್ ರವರು ಸಸಿ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, 400ಕ್ಕೂ ಹೆಚ್ಚು ಶಾಲಾ ಮತ್ತು ಕಾಲೇಜು ಮಕ್ಕಳಿಗೆ ನಗದು ಪುರಸ್ಕಾರ, ಸನ್ಮಾನಿಸಿ … Read more

ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ಸಂಘದಿಂದ ಭವ್ಯ ಗಿಡ ನೆಡುವ ಅಭಿಯಾನ

ವಿಜಯ ದರ್ಪಣ ನ್ಯೂಸ್…. ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ಸಂಘದಿಂದ ಭವ್ಯ ಗಿಡ ನೆಡುವ ಅಭಿಯಾನ ಹಳೇ ಏರ್‌ಪೋರ್ಟ್ ಪಾರ್ಕ್‌ನಲ್ಲಿ ಹಸಿರು ಕ್ರಾಂತಿ: ಭಾರತೀಯ ರಾಯಭಾರಿ ಘನತೆವೆತ್ತ ಶ್ರೀ ವಿಪುಲ್, ಪುರಸಭೆ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗಿ ದೋಹಾ, ಕತಾರ್: ಜಾಗತಿಕ ಪರಿಸರ ಕಾಳಜಿ ಹಾಗೂ ಸಮುದಾಯದ ಸಹಭಾಗಿತ್ವಕ್ಕೆ ಸಾಕ್ಷಿಯಾಗಿ, ಕತಾರ್‌ನ ಪುರಸಭೆ ಸಚಿವಾಲಯದ ಸಾರ್ವಜನಿಕ ಉದ್ಯಾನವನಗಳ ಇಲಾಖೆ ಹಾಗೂ ದೋಹಾ ಪುರಸಭೆ ಸಹಯೋಗದೊಂದಿಗೆ, ಕತಾರ್‌ನ ಭಾರತೀಯ ರಾಯಭಾರ ಕಚೇರಿಯ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಘ ಕತಾರ್ (ಕೆಎಸ್‌ಕ್ಯೂ) … Read more

ಕೆಜೆವಿಎಸ್ ಬೆಂಗಳೂರು ಜಿಲ್ಲೆಯ ವಿಶ್ವ ಪರಿಸರ ದಿನ ಕುರಿತ ಬೃಹತ್ ಜನ ಜಾಗೃತಿ ಅಭಿಯಾನ ಯಶಸ್ವಿ

ವಿಜಯ ದರ್ಪಣ ನ್ಯೂಸ್…. ಕೆಜೆವಿಎಸ್ ಬೆಂಗಳೂರು ಜಿಲ್ಲೆಯ ವಿಶ್ವ ಪರಿಸರ ದಿನ ಕುರಿತ ಬೃಹತ್ ಜನ ಜಾಗೃತಿ ಅಭಿಯಾನ ಯಶಸ್ವಿ ************************* ಬೆಂಗಳೂರು : ಇಂದು ಬೆಳಗ್ಗೆ ಬೆಂಗಳೂರು ನಗರದ 15 ವಿವಿಧ ಸ್ಥಳಗಳಲ್ಲಿ ಬೆಂಗಳೂರು ನಗರ ಜಿಲ್ಲೆ ,ಜ್ಞಾನವಿಜ್ಞಾನ ಸಮಿತಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಯ ಬೃಹತ್ ಜನ ಜಾಗೃತಿ ಅಭಿಯಾನವನ್ನು ಯಶಸ್ವಿ ಗೊಳಿಸಿದ ಪದಾಧಿಕಾರಿಗಳು ಹಾಗೂ ವಿವಿಧ ವಿಧಾನಸಭಾಧ್ಯಕ್ಷರುಗಳು, ಕನ್ನಡದ ಕಾರ್ಯಕರ್ತರುಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಜಿಲ್ಲಾ ಅಧ್ಯಕ್ಷ ನಾ.ಶ್ರೀಧರ್ ಅವರು ಅರ್ಪಿಸಿದರು. ಮುಖ್ಯ … Read more

ಕಾಕ್ರೋಚ್ ಜನತಾ ಪಾರ್ಟಿ……

ವಿಜಯ ದರ್ಪಣ ನ್ಯೂಸ್….. ಕಾಕ್ರೋಚ್ ಜನತಾ ಪಾರ್ಟಿ…… ಸಾಮಾಜಿಕ ಜಾಲತಾಣದ ಹೊಸ ರಾಜಕೀಯ ಚಳುವಳಿ ಎಂದು ಕಳೆದ ಐದಾರು ವಾರಗಳಿಂದ ಇಡೀ ದೇಶದಾದ್ಯಂತ ಬಹುದೊಡ್ಡ ಸುದ್ದಿ ಮಾಡುತ್ತಿದೆ. ಕಾಕ್ರೋಚ್ ಎಂಬ ಪದ ಕೇಳಲು ಸ್ವಲ್ಪ ವಿಚಿತ್ರವೆನಿಸುತ್ತದೆ, ಆದರೆ ಈಗಾಗಲೇ ಜನಪ್ರಿಯವಂತು ಆಗಿ ಹೋಗಿದೆ. ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ಸೂರ್ಯಕಾಂತ್ ಅವರ ಒಂದು ಅರ್ಜಿಯ ವಿಚಾರಣೆಯ ವಾದ ವಿವಾದಗಳ ಸಂದರ್ಭದಲ್ಲಿ ಸಹಜವಾಗಿ ಆಡಿದ ಮಾತು ಇದಕ್ಕೆ ಮೂಲ ಪ್ರೇರಣೆಯಾಗಿದ್ದರೂ, ಯುವಕರ ಆಕ್ರೋಶ ಈ ಮಟ್ಟಿಗೆ … Read more

ವಿಶ್ವ ಪರಿಸರ ದಿನಾಚರಣೆ :  ಶಿವನಹಳ್ಳಿ ಸ್ಮಶಾನದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ವಿಜಯ ದರ್ಪಣ ನ್ಯೂಸ್… ವಿಶ್ವ ಪರಿಸರ ದಿನಾಚರಣೆ :  ಶಿವನಹಳ್ಳಿ ಸ್ಮಶಾನದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ಕನಕಪುರ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶಿವನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಶುಕ್ರವಾರ ಶಿವನಹಳ್ಳಿ ಸ್ಮಶಾನದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಿಬ್ಬಂದಿ ಜೊತೆಗೂಡಿ ಕಾಂಪೌಂಡ್‌ ಸುತ್ತ ಸಸಿ ನೆಟ್ಟು ನೀರುಣಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್ ಎಂ ಕೃಷ್ಣಮೂರ್ತಿ ಮಾತನಾಡಿ, ಕಳೆದ ವರ್ಷ ಇದೇ ಸ್ಮಶಾನದಲ್ಲಿ ಗಿಡಗಳನ್ನು ನೆಟ್ಟು ಅವುಗಳಿಗೆ ಪೋಷಣೆ ಮಾಡಿ ಬೆಳೆಸಲಾಗಿತ್ತು, … Read more

ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷರಾಗಿ ಮುತ್ತೂರು ಎಂ.ಜಿ.ಸುರೇಶ್ ಅವಿರೋಧ ಆಯ್ಕೆ.

ವಿಜಯ ದರ್ಪಣ ನ್ಯೂಸ್….. ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷರಾಗಿ ಮುತ್ತೂರು ಎಂ.ಜಿ.ಸುರೇಶ್ ಅವಿರೋಧ ಆಯ್ಕೆ. ಶಿಡ್ಲಘಟ್ಟ : ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಬಂಕ್ ಮುನಿಯಪ್ಪ ಚಿಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಕಾರಣ ತೆರವಾದ ಸ್ಥಾನಕ್ಕೆ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಮುತ್ತೂರು ಎಂ.ಜಿ.ಸುರೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ತಾಲ್ಲೂಕು ಭೂ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಅಧ್ಯಕ್ಷರಾಗಿ ಮುತ್ತೂರು ಎಂ.ಜಿ.ಸುರೇಶ್ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಆಯ್ಕೆಯಾದ ಸುರೇಶ್ ಅವರನ್ನು ಬ್ಯಾಂಕಿನ ನಿರ್ದೇಶಕರು, ಅಧಿಕಾರಿಗಳು, ಸಿಬ್ಬಂದಿ ಮತ್ತು … Read more