ತಕ್ಷಣವೇ ಅಭಿವೃದ್ಧಿ ನಿಗಮ ಜಾರಿಮಾಡಲು ಅದೇನು ತರಕಾರಿ ತಾಯಮ್ಮನ ಅಂಗಡಿಯಲ್ಲಿ ಸಿಗುವ ತರಕಾರಿಯೇ?
ವಿಜಯ ದರ್ಪಣ ನ್ಯೂಸ್ ಮಡಿಕೇರಿ: ಚುನಾವಣೆ ಪೂರ್ವದಲ್ಲಿ ಕೊಡಗು ಜಿಲ್ಲೆಗೆ ಸೀಮಿತವಾದ ಪ್ರಣಾಳಿಕೆಯನ್ನು ಕಾಂಗ್ರೆಸ್ ಸಿದ್ದಪಡಿಸಿ ಅದನ್ನು ಎ.ಎಸ್ ಪೊನ್ನಣ್ಣ ನವರು ಬಿಡುಗಡೆ ಮಾಡಿದ್ದರು.ನಂತರ ಡಾ ಮಂತರ್ ಗೌಡ ರವರ ಪ್ರಣಾಳಿಕೆಯಲ್ಲಿ ಕೂಡ ಅವುಗಳಿಗೆ ಆದ್ಯತೆ ನೀಡಿದ್ದರು.ಒಟ್ಟು ಇಪ್ಪತ್ತೆಂಟು ಭರವಸೆಗಳಿದ್ದು ಅವುಗಳಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಕೂಡ ಒಂದು. ಹಾಗಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಯ ಜವಾಬ್ದಾರಿ ಶಾಸಕದ್ವಯರ ಹೊಣೆಗಾರಿಕೆಯಾಗಿದೆ.ಅದನ್ನು ಖಂಡಿತವಾಗಿ ಅವರು ಮಾಡಲು ಸಿದ್ದರಿದ್ದು ಈಗಾಗಲೇ ಪ್ರಕ್ರಿಯೆಗಳು ಆರಂಭಗೊಂಡಿದೆ. ಅಭಿವೃದ್ಧಿ ನಿಗಮ ಸ್ಥಾಪನೆ ಎನ್ನುವುದು…