ಊಹೆಗೂ ಮೀರಿದ ಮಾನವ ಇತಿಹಾಸ ಮತ್ತು ಭವಿಷ್ಯ……
ವಿಜಯ ದರ್ಪಣ ನ್ಯೂಸ್… ಊಹೆಗೂ ಮೀರಿದ ಮಾನವ ಇತಿಹಾಸ ಮತ್ತು ಭವಿಷ್ಯ…… ವರ್ತಮಾನದ ನಾವು ಅದೃಷ್ಟಶಾಲಿಗಳಲ್ಲವೇ…… ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂಧರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ……… ಬಹಳ ಹಿಂದೆ ಏನೂ ಅಲ್ಲ. ಕೇಲವೇ ಶತಮಾನಗಳ ಹಿಂದೆ ಕುರಿ ಕೋಳಿ ಹಸು ನಾಯಿ ಕತ್ತೆ ಕುದುರೆಗಳ ರೀತಿಯಲ್ಲಿ ಮನುಷ್ಯನನ್ನು ಸಹ ಬೀದಿ ಬದಿಯಲ್ಲಿ ಮಾರಾಟಕ್ಕೆ ನಿಲ್ಲಿಸಲಾಗುತ್ತಿತ್ತು. ನಮ್ಮ ಗ್ರಾಮೀಣ ಪ್ರದೇಶದ ದನಗಳ ಜಾತ್ರೆಯಲ್ಲಿ ಅವುಗಳನ್ನು ಕೊಳ್ಳುವವರು ಅದರ ಹಲ್ಲಿನಿಂದ ಹಿಡಿದು ದೇಹದ ಸಂಪೂರ್ಣ ಅಂಶಗಳನ್ನು…
