ಜಯಂತಿಗಳ ಆಚರಣೆ ಹಾಸ್ಯಾಸ್ಪದವಾಗುವ ಮುನ್ನ………
ವಿಜಯ ದರ್ಪಣ ನ್ಯೂಸ್….. ಜಯಂತಿಗಳ ಆಚರಣೆ ಹಾಸ್ಯಾಸ್ಪದವಾಗುವ ಮುನ್ನ……… ಇತ್ತೀಚಿನ ಕೆಲವು ವರ್ಷಗಳಲ್ಲಿ ಮಹಾನ್ ವ್ಯಕ್ತಿಗಳ ಜಯಂತಿ ಯಾಕೋ ಅತಿರೇಕಕ್ಕೆ ತಲುಪಿ ಹಾಸ್ಯಸ್ಪದವಾಗುತ್ತಿರುವಂತೆ ಭಾಸವಾಗುತ್ತಿದೆ. ಅದೇ ಹಾಡು, ಅದೇ ಕುಣಿತ, ಅದೇ ಭಾಷಣ, ಅದೇ ಜನರು, ಅದೇ ಉನ್ಮಾದ, ಅದೇ ಭಕ್ತಿಯ ಪರಾಕಾಷ್ಠೆ, ಅದೇ ವ್ಯಕ್ತಿಯ ವಿಜೃಂಭಣೆ ಕೆಲವೊಮ್ಮೆ ತುಂಬಾ ವಿಚಿತ್ರವೆನಿಸುತ್ತಿದೆ. ಗಾಂಧಿ ಜಯಂತಿಗೂ, ಹನುಮ ಜಯಂತಿಗೂ, ಅಂಬೇಡ್ಕರ್ ಜಯಂತಿಗೂ, ರಾಮ ಜಯಂತಿಗೂ, ಬಸವ ಜಯಂತಿಗೂ, ಮಹಾವೀರ ಜಯಂತಿಗೂ, ವಾಲ್ಮೀಕಿ ಜಯಂತಿಗೂ, ಕೆಂಪೇಗೌಡ ಜಯಂತಿಗೂ, ಬುದ್ದ ಜಯಂತಿಗೂ,…
