ಶಿಡ್ಲಘಟ್ಟ ನಗರಸಭೆಯ 7 ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ
ವಿಜಯ ದರ್ಪಣ ನ್ಯೂಸ್….. ಶಿಡ್ಲಘಟ್ಟ ನಗರಸಭೆಯ 7 ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಶಿಡ್ಲಘಟ್ಟ : ನಗರಸಭೆ ಅಧ್ಯಕ್ಷ ಮತ್ತು ಉಪಾದ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ನ 7 ಸದಸ್ಯರು ಪಕ್ಷದ ವಿಪ್ ಉಲ್ಲಂಘನೆ ಮಾಡಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯವು 7 ಮಂದಿ ನಗರಸಭೆ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದೆ. ಕಳೆದ 2024 ರ ಸೆಪ್ಟೆಂಬರ್ ತಿಂಗಳಿನ 5 ನೇ ದಿನಾಕದಂದು ನಡೆದ ಶಿಡ್ಲಘಟ್ಟ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ…
ವಿವಿಧ ಕಾಮಾಗಾರಿಗಳನ್ನು ಉದ್ಘಾಟನೆ ಮಾಡಿದ ಉಸ್ತುವಾರಿ ಸಚಿವ ಡಾ.ಎಂ ಸಿ ಸುಧಾಕರ್
ವಿಜಯ ದರ್ಪಣ ನ್ಯೂಸ್…. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ವಿವಿಧ ಕಾಮಾಗಾರಿಗಳನ್ನು ಉದ್ಘಾಟನೆ ಮಾಡಿದ ಉಸ್ತುವಾರಿ ಸಚಿವ ಡಾ. ಎಂ ಸಿ ಸುಧಾಕರ್ ಶಿಡ್ಲಘಟ್ಟ : ಸರ್ವಜನರ ಅಭಿವೃದ್ಧಿಯೇ ನಮಗೆ ಮುಖ್ಯ ನಿಮ್ಮ ದ್ವಂದ್ವ ನಿಲುವನ್ನು ಬಿಡಿ ರೈತರ ಕುರಿತಾದ ನನ್ನ ಕಾಳಜಿ ಮತ್ತು ಬದ್ದತೆಯ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ನಿಮಗೆ ಯಾರಿಗೂ ಅರ್ಹತೆಯಿಲ್ಲ ನಿಮಗಿಂತ ಹೆಚ್ಚಿನ ರೈತರು ನಾವು ನೀವುಗಳು ಸ್ವತಃ ಲೇಬಲ್ ಹಾಕಿಕೊಂಡು, ರೈತೋದ್ಧಾರಕರು ಎಂಬ ಮನಸ್ಥಿತಿಯಲ್ಲಿ ಯಾರ ಬಗ್ಗೆ ಏನು ಬೇಕಾದರೂ ಮಾತನಾಡಬಹುದು ಎಂಬುದನ್ನು ಬಿಡಿ…
ಕೆಣಕಿದರೆ ಸುಮ್ಮನಿರೋಲ್ಲ – ಪಾಕಿಸ್ತಾನಕ್ಕೆ ಎಚ್ಚರಿಸಿದ ಸಿ.ಎಂ.ಸಿದ್ದರಾಮಯ್ಯ
ವಿಜಯ ದರ್ಪಣ ನ್ಯೂಸ್…. ಕೆಣಕಿದರೆ ಸುಮ್ಮನಿರೋಲ್ಲ – ಪಾಕಿಸ್ತಾನಕ್ಕೆ ಎಚ್ಚರಿಸಿದ ಸಿ.ಎಂ.ಸಿದ್ದರಾಮಯ್ಯ ದೇವನಹಳ್ಳಿ ಸಾಧನೆ ಸಮಾವೇಶದಲ್ಲಿ ಸಿ.ಎಂ.ಗುಡುಗು 1 ಸಾವಿರ ಕೋಟಿ ರೂ ಕಾಮಗಾರಿಗಳ ಶಂಕುಸ್ಥಾಪನೆ, ಉಧ್ಘಾಟನೆ ಬಿಜಿಎಸ್ ನಗರ ದೇವನಹಳ್ಳಿ ಬೆಂಗಳೂರು ಗ್ರಾ, ಏಪ್ರಿಲ್ ದೇವನಹಳ್ಳಿ ಶಾಂತಿ ಭೋಧಿಸಿದ ಬುದ್ದ, ಬಸವರ ನಾಡು ನಮ್ಮದು.ಭಾರತವನ್ನು ಕೆಣಕಿದರೆ ಅದು ಪಾಕಿಸ್ತಾನವೇ ಆಗಲಿ, ಯಾವುದೇ ದೇಶವಾಗಲಿ ನಾವು ಸಹಿಸಲ್ಲ. ಯಾವುದೇ ಹಂತದ ಯುದ್ಧಕ್ಕೆ ಭಾರತ ಸದಾ ಸಿದ್ಧ, ಸದಾ ಸನ್ನದ್ಧ ಆಗಿರುತ್ತದೆ. ಅನಿವಾರ್ಯತೆ ಆದಾಗ ಯುದ್ಧಕ್ಕೆ ಮುಂದಡಿ ಇಟ್ಟು…
ಅಧಿಕಾರಿಗಳಿಗೆ ಪ.ಜಾತಿ ಒಳಮೀಸಲಾತಿ ಸಮೀಕ್ಷೆ ತರಬೇತಿ ಕಾರ್ಯಗಾರ
ವಿಜಯ ದರ್ಪಣ ನ್ಯೂಸ್…. ಮೇ 05 ರಿಂದ ಪ.ಜಾತಿ ಒಳಮೀಸಲಾತಿ ಸಮೀಕ್ಷೆ ಅಧಿಕಾರಿಗಳಿಗೆ ಪ.ಜಾತಿ ಒಳಮೀಸಲಾತಿ ಸಮೀಕ್ಷೆ ತರಬೇತಿ ಕಾರ್ಯಗಾರ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ.ಏಪ್ರಿಲ್: ಸಾಮಾಜಿಕ ನ್ಯಾಯವನ್ನು ಎಲ್ಲಾ ವರ್ಗದವರಿಗೂ ಒದಗಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಯನ್ನು ಮೇ 05 ರಿಂದ ಕೈಗೊಂಡಿದ್ದು ಗಣತಿದಾರರು ಮನೆ ಮನೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸಲಿದ್ದಾರೆ, ದತ್ತಾಂಶ ಸಂಗ್ರಹದಲ್ಲಿ ಲೋಪವಾಗದಂತೆ ಸರಿಯಾದ ಕ್ರಮದಲ್ಲಿ ಸಮೀಕ್ಷೆ ಮಾಡಿ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಶಾ…
ಬಾಲ್ಯವಿವಾಹ ನಡೆಯದಂತೆ ಜಾಗೃತಿ ವಹಿಸಿ: ಜಿಲ್ಲಾಧಿಕಾರಿ ಎ.ಬಿ ಬಸವರಾಜು
ವಿಜಯ ದರ್ಪಣ ನ್ಯೂಸ್….. ಬಾಲ್ಯವಿವಾಹ ನಡೆಯದಂತೆ ಜಾಗೃತಿ ವಹಿಸಿ: ಜಿಲ್ಲಾಧಿಕಾರಿ ಎ.ಬಿ ಬಸವರಾಜು ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ, ಏಪ್ರಿಲ್, 29 :ಏಪ್ರಿಲ್ 30 ರಂದು ಬಸವ ಜಯಂತಿ ಮತ್ತು ಅಕ್ಷಯ ತೃತೀಯ ದಿನವಾಗಿದ್ದು, ಆ ದಿನದಂದು ಬಾಲ್ಯವಿವಾಹಗಳು ಹೆಚ್ಚು ನಡೆಯುವ ಸಾಧ್ಯತೆ ಇರುವುದರಿಂದ, ಅಧಿಕಾರಿಗಳು, ಸಾರ್ವಜನಿಕರು ಜಾಗೃತರಾಗಿರಿ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದ್ದಾರೆ. ಬಾಲ್ಯ ವಿವಾಹವೆಂದರೆ 18 ವರ್ಷದೊಳಗಿನ ಹುಡುಗಿ ಹಾಗೂ 21 ವರ್ಷದೊಳಗಿನ ಹುಡುಗನ ನಡುವೆ ನಡೆಯುವ ಮದುವೆ ಅಥವಾ…
ಜೀವನದ ಪಯಣ ಅತ್ಯಂತ ದೀರ್ಘವೇ ………..
ವಿಜಯ ದರ್ಪಣ ನ್ಯೂಸ್… ಜೀವನದ ಪಯಣ ಅತ್ಯಂತ ದೀರ್ಘವೇ ……….. ಬದುಕೊಂದು ದೂರದ ಪಯಣ. ತುಂಬಾ ತುಂಬಾ ದೂರ ನಿರಂತರವಾಗಿ ನಡೆಯಬೇಕು ಮರೆಯಾಗುವ ಮುನ್ನ……………… Life is Short , Make it Sweet………….. ಈ ಎರಡು ವಿಭಿನ್ನ ಹೇಳಿಕೆಗಳನ್ನು ಗಮನಿಸಿ. ಒಂದು ಬದುಕನ್ನು ದೀರ್ಘ ಅವಧಿಯ ಹೋರಾಟ ಎಂದು ಹೇಳಿದರೆ ಮತ್ತೊಂದು ಬದುಕು ತುಂಬಾ ಚಿಕ್ಕ ಸಮಯದ್ದು ಎಂಬ ಅರ್ಥ ಕೊಡುತ್ತದೆ. ಹಾಗಾದರೆ ಬದುಕು ದೀರ್ಘವೇ ಅಥವಾ ಕಡಿಮೆ ಸಮಯವೇ ?……… ಭಾರತದ ಈಗಿನ ಸರಾಸರಿ…
ಪಹಲ್ಗಾಮ್ನಲ್ಲಿ ನಡೆದ ಪೈಶಾಚಿಕ ಕೃತ್ಯವನ್ನು ಇಡೀ ಜಗತ್ತು ಖಂಡಿಸಬೇಕು:ಸೀಕಲ್ ರಾಮಚಂದ್ರಪ್ಪ
ವಿಜಯ ದರ್ಪಣ ನ್ಯೂಸ್….. ಪಹಲ್ಗಾಮ್ನಲ್ಲಿ ನಡೆದ ಪೈಶಾಚಿಕ ಕೃತ್ಯವನ್ನು ಇಡೀ ಜಗತ್ತು ಖಂಡಿಸಬೇಕು:ಸೀಕಲ್ ರಾಮಚಂದ್ರಪ್ಪ ಶಿಡ್ಲಘಟ್ಟ : ಪಹಲ್ಗಾಮ್ನಲ್ಲಿ ನಡೆದ ಪೈಶಾಚಿಕ ಕೃತ್ಯವನ್ನು ಇಡೀ ಜಗತ್ತು ಜಾತಿ, ಧರ್ಮ, ಭಾಷೆ, ದೇಶಗಳ ಗಡಿ ಮೀರಿ ಎಲ್ಲರೂ ಖಂಡಿಸಬೇಕು ಮತ್ತು ಜಾಗತಿಕವಾಗಿ ಉಗ್ರರನ್ನು ಬೇರು ಸಮೇತ ಕಿತ್ತು ಹಾಕುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಆಗ್ರಹಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿ ಹಿಂದೂಗಳನ್ನು ಹುಡುಕಿ ಹುಡುಕಿ ಗುಂಡಿಕ್ಕಿ ಕೊಂದದ್ದು ಕೇವಲ…
ಎಲ್ಲಾ ನೂಲು ಬಿಚ್ಚಣಿಕೆದಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕೋಡಬೇಕು : ರಾಜ್ಯ ರೈತ ಸಂಘ ಒತ್ಯಾಯ
ವಿಜಯ ದರ್ಪಣ ನ್ಯೂಸ್….. ಎಲ್ಲಾ ನೂಲು ಬಿಚ್ಚಣಿಕೆದಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕೋಡಬೇಕು : ರಾಜ್ಯ ರೈತ ಸಂಘ ಒತ್ಯಾಯ ಶಿಡ್ಲಘಟ್ಟ : ತಾಲ್ಲೂಕಿನ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ, ಬೇರೆ ತಾಲ್ಲೂಕುಗಳಿಂದ ಬರುವ ನೂಲು ಬಿಚ್ಚಣಿಕೆದಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಾರದು ಎಂದು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ಆರೋಪ ಮಾಡಿದರು. ಮಾರುಕಟ್ಟೆಗೆ ದಿನಕ್ಕೆ ಸರಾಸರಿ 300-400 ಲಾಟ್ ರೇಷ್ಮೆ ಗೂಡು ಬರುತ್ತಿದೆ ನಮ್ಮ ಗೂಡಿಗೆ ಉತ್ತಮ ಬೆಲೆ…
ಊಹೆಗೂ ಮೀರಿದ ಮಾನವ ಇತಿಹಾಸ ಮತ್ತು ಭವಿಷ್ಯ……
ವಿಜಯ ದರ್ಪಣ ನ್ಯೂಸ್… ಊಹೆಗೂ ಮೀರಿದ ಮಾನವ ಇತಿಹಾಸ ಮತ್ತು ಭವಿಷ್ಯ…… ವರ್ತಮಾನದ ನಾವು ಅದೃಷ್ಟಶಾಲಿಗಳಲ್ಲವೇ…… ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂಧರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ……… ಬಹಳ ಹಿಂದೆ ಏನೂ ಅಲ್ಲ. ಕೇಲವೇ ಶತಮಾನಗಳ ಹಿಂದೆ ಕುರಿ ಕೋಳಿ ಹಸು ನಾಯಿ ಕತ್ತೆ ಕುದುರೆಗಳ ರೀತಿಯಲ್ಲಿ ಮನುಷ್ಯನನ್ನು ಸಹ ಬೀದಿ ಬದಿಯಲ್ಲಿ ಮಾರಾಟಕ್ಕೆ ನಿಲ್ಲಿಸಲಾಗುತ್ತಿತ್ತು. ನಮ್ಮ ಗ್ರಾಮೀಣ ಪ್ರದೇಶದ ದನಗಳ ಜಾತ್ರೆಯಲ್ಲಿ ಅವುಗಳನ್ನು ಕೊಳ್ಳುವವರು ಅದರ ಹಲ್ಲಿನಿಂದ ಹಿಡಿದು ದೇಹದ ಸಂಪೂರ್ಣ ಅಂಶಗಳನ್ನು…
ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಿದ್ದೇ ಆದಲ್ಲಿ ಹೂಡಿಕೆದಾರರು ಹೆಚ್ಚಾಗಿ ಬರುವ ನಿರೀಕ್ಷೆ ಇದೆ: ಸಚಿವ ಡಾ.ಎಂ ಸಿ ಸುಧಾಕರ್
ವಿಜಯ ದರ್ಪಣ ನ್ಯೂಸ್….. ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಿದ್ದೇ ಆದಲ್ಲಿ ಹೂಡಿಕೆದಾರರು ಹೆಚ್ಚಾಗಿ ಬರುವ ನಿರೀಕ್ಷೆ ಇದೆ: ಸಚಿವ ಡಾ.ಎಂ ಸಿ ಸುಧಾಕರ್ ಶಿಡ್ಲಘಟ್ಟ : ಜಂಗಮಕೋಟೆ ಹೋಬಳಿ ಪ್ರದೇಶದ ವ್ಯಾಪ್ತಿಯಲ್ಲಿನ ಕೈಗಾರಿಕಾ ಪ್ರದೇಶವು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವುದರಿಂದ ಅಭಿವೃದ್ಧಿ ಪಡಿಸಿದ್ದೇ ಆದಲ್ಲಿ ಹೂಡಿಕೆದಾರರು ಈ ಭಾಗಕ್ಕೆ ಹೆಚ್ಚಾಗಿ ಬರುವ ನಿರೀಕ್ಷೆ ಇದೆ ಇದು ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪೂರಕವಾಗಲಿದೆ ಎಂದು ಉನ್ನತ ಶಿಕ್ಷಣ ಹಾಗು ಚಿಕ್ಕಬಳ್ಳಾಪುರ ಜಿಲ್ಲಾ…