ಸಮಾನತೆ ಎಂದರೆ ಸ್ತ್ರೀ ಪುರುಷ ಮಾತ್ರವಲ್ಲ, ತೃತೀಯಲಿಂಗಿಗಳಾದ ನಾವು ಇದ್ದೇವೆ : ಡಾ.ಮಾತಾ ಮಂಜಮ್ಮ ಜೋಗಿತಿ
ವಿಜಯ ದರ್ಪಣ ನ್ಯೂಸ್….
ಸಮಾನತೆ ಎಂದರೆ ಸ್ತ್ರೀ ಪುರುಷ ಮಾತ್ರವಲ್ಲ, ತೃತೀಯಲಿಂಗಿಗಳಾದ ನಾವು ಇದ್ದೇವೆ : ಡಾ.ಮಾತಾ ಮಂಜಮ್ಮ ಜೋಗಿತಿ
ಸಮಾನತೆ ಎಂದರೆ ಸ್ತ್ರೀ ಪುರುಷ ಮಾತ್ರವಲ್ಲ, ಈ ಸಮಾಜದಲ್ಲಿ ತೃತೀಯಲಿಂಗಿಗಳಾದ ನಾವು ಇದ್ದೇವೆ ಎಂಬುದನ್ನು ಅನೇಕರು ಮರೆತಿದ್ದಾರೆ ಮಾತಾ ಡಾ.ಮಾತಾ ಮಂಜಮ್ಮ ಜೋಗಿತಿ ನುಡಿದರು.
ಡಾಕ್ಟರ್ ಎಸ್ ಲಕ್ಷ್ಮೀದೇವಿ ಸ್ಮಾರಕ ಪ್ರತಿಷ್ಠಾನ (ರಿ) ವತಿಯಿಂದ
ಸಿ. ಅಶ್ವತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಲ್ಕನೇ ವಾರ್ಷಿಕ ಪ್ರಶಸ್ತಿಯನ್ನು ಸ್ವೀಕರಿಸಿದ ಅವರು ಮಾತನಾಡುತ್ತಿದ್ದರು. ಜಗತ್ತಿನಲ್ಲಿ ಗಂಡಿನಿಂದ ಹೆಣ್ಣಿಗೆ ಸಮಾನತೆ ಬೇಕು ಎನ್ನುತ್ತಾರೆ ಆದರೆ ಅಲ್ಪಸಂಖ್ಯಾತರಾದ ನಮ್ಮಂತಹ ತೃತೀಯಲಿಂಗಗಳನ್ನು ಗೌರವಿಸಿದರೆ ಅದು ನಿಜವಾದ ಸಮಾನತೆಯ ಸಂದೇಶವಾಗುತ್ತದೆ, ಅದನ್ನು ಎಲ್ಲರೂ ಮನಗಾಣಬೇಕಿದೆ. ಪೋಷಕರಲ್ಲಿ ವಿನಂತಿ ನಮ್ಮಂತಹ ದೈಹಿಕ ಬದಲಾವಣೆಯಾದ ವ್ಯಕ್ತಿಗಳನ್ನು ದೂರ ತಳ್ಳಬೇಡಿ ಅವರನ್ನು ಮನುಷ್ಯರೆಂದು ಭಾವಿಸಿ, ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರ ಭಾವನೆಗಳಿಗೂ ಸ್ಪಂದಿಸಿದರೆ ಅದೇ ನಿಜವಾದ ಪೋಷಕತನ ಎಂದರು.
ಪದವಿ ಪುರಸ್ಕಾರಗಳು ನಮ್ಮನ್ನು ಹರಸಿ ಬರುತ್ತವೆ ಅಲ್ಲಿಯವರೆಗೂ ತಾಳ್ಮೆ ಬೇಕು ಅಷ್ಟೇ ಎಂದು ನುಡಿದರು.
ಲಕ್ಷ್ಮಿ ಸಂ.ಸಾ.ರ. ಯೂಟ್ಯೂಬ್ ಚಾನಲ್ ಅನ್ನು ಲೋಕಾರ್ಪಣೆ ಮಾಡಿದ ಬಹುಭಾಷಾ ನಟ ಶ್ರೀ ಶರತ್ ಲೋಹಿತಾಶ್ವ ಮಾತನಾಡುತ್ತ ರಂಗಭೂಮಿ ಮಾತ್ರ ಗೆಳೆತನ, ಸಹೃದಯತೆ ಸಂವೇದನಾಶೀಲತೆಯನ್ನು ಉಳಿಸಿಕೊಂಡಿದೆ, ಅದು ಪ್ರತಿ ಮನಸ್ಸನ್ನು ಮಿಡಿಯುತ್ತದೆ. ನಮ್ಮ ತಂದೆಯವರಾದ ಲೋಹಿತಾಶ್ವ ಅವರ ರಂಗಭೂಮಿಯ ಕೊಡುಗೆ ನನ್ನನ್ನು ಈ ಮಟ್ಟಿಗೆ ನಿಲ್ಲುವಂತೆ ಮಾಡಿದೆ ನನ್ನ ಸಾಧನೆಗಿಂತ ಅಪ್ಪನ ಹಾದಿಯಲ್ಲಿ ನಡೆದದ್ದರಿಂದ ನನಗೆ ಸಿಕ್ಕ ಮನ್ನಣೆಗಳೇ ಹೆಚ್ಚು. ಅಪ್ಪನ ಆದರ್ಶಗಳು ನನಗೆ ದಾರಿದೀಪವಾಗಿದೆ. ಆ ಕಾರಣದಿಂದ ಅನೇಕ ರಂಗಭೂಮಿಯ ಗೆಳೆಯರು ನನ್ನೊಂದಿಗೆ ಬೆರತು ನನ್ನ ಪ್ರತಿ ಹೆಜ್ಜೆಯಲ್ಲೂ ಸಹಕಾರಿಯಾಗಿ ಶ್ರಮಿಸುತ್ತಿದ್ದಾರೆ.
ಅದಕ್ಕೆ ಜನ್ಮ ನೀಡಿದ ತಂದೆಯವರಿಗೆ ಬದುಕು ಕೊಟ್ಟ ರಂಗಭೂಮಿಗೆ ನಾನು ಚಿರಋಣಿಯಾಗಿರುತ್ತೇನೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಎನ್.ಮುನಿರಾಜು ಮಾತನಾಡಿ ಬಹುಕಾಲದ ಗೆಳತಿ ಲಕ್ಷ್ಮಿ ಅವರ ಸಾಹಿತ್ಯ ಸಂಶೋಧನೆ ಹಾಗೂ ರಂಗಭೂಮಿಯ ಸೇವೆ ಅನನ್ಯ ಆಕೆಯ ಅಧ್ಯಾಪಕತ್ವದಲ್ಲಿ ಅನೇಕರನ್ನು ವಿದ್ಯಾವಂತರನ್ನಾಗಿ ಮಾಡಿದ್ದಾರೆ ಜೊತೆಗೆ ಅವರ ಬದುಕಿಗೆ ಒಂದು ಮಾರ್ಗದರ್ಶಿಯಾಗಿದ್ದಾರೆ ಎಂದು ನುಡಿದರು.
ನಾರಾಯಣಗುರು ಸೇವಾ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಮಾಸ್ತಿ ಟಿಸಿ ರಮೇಶ್ ಮಾತನಾಡುತ್ತಾ ರಂಗಭೂಮಿ ಪ್ರತಿಯೊಬ್ಬರ ಬದುಕಿಗೆ ಅನಿವಾರ್ಯ, ರಂಗಭೂಮಿಯನ್ನು ಶ್ರದ್ಧೆಯಿಂದ ಕಲಿತರೆ ಬದುಕು ಹೇಗೆ ಬದುಕಬೇಕು ಎಂಬುದು ಅರ್ಥವಾಗುತ್ತದೆ ಎಂದರು. ಕೇಂದ್ರ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾದ ಬಿ ವಿ ರಾಜಾರಾಮ್ ಮಾತನಾಡಿ ಲಕ್ಷ್ಮಿಯ ಒಡನಾಟ ನನಗೆ ಬಹಳಷ್ಟುನ್ನು ಕಳಿಸಿಕೊಟ್ಟಿದೆ ಜೊತೆಗೆ ಆಕೆಯ ಬದುಕು ಎಲ್ಲರಿಗೂ ಮಾರ್ಗದರ್ಶಿಯಾಗಿದೆ ಎಂದರು.
ಜಾನಪದ ತಜ್ಞ ಪ್ರೊ.ಎಂ.ಎನ್.ವೆಂಕಟೇಶ್ ಮಾತನಾಡುತ್ತಾ ಇದೊಂದು ಅನನ್ಯ ವೇದಿಕೆ ಸಮಾನತೆಯ ವೇದಿಕೆ ಈ ವೇದಿಕೆಗೆ ಕಾರಣಕರ್ತರಾದವರು ನನ್ನ ಸಹೋದ್ಯೋಗಿ
ಡಾ. ಎಸ್ ಲಕ್ಷ್ಮೀದೇವಿ, ಅವರ ಸ್ಮರಣೆ ನಮಗೆ ಸದಾ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಡಾಕ್ಟರ್ ಲಕ್ಷ್ಮೀನಾರಾಯಣ,
ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ರೇಖಾ ಶ್ರೀವತ್ಸ, ಕೆ.ಆನಂದ್ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ರಂಗ ವಿಜಯಾ ತಂಡದಿಂದ ಸ್ತ್ರೀ ಪತಿ ಸತ್ತೋದ ನಾಟಕವು ಸಹ ಅಭಿನಯಿಸಲಾಯಿತು.
ಒಂದು ಅರ್ಥಪೂರ್ಣ ಕಾರ್ಯಕ್ರಮ ಇದಾಗಿತ್ತು. ಸಂಧ್ಯಾ ಪ್ರಶಾಂತ್ ಹಾಗೂ ಮಾಲೂರು ವಿಜಿ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು. ಟ್ರಸ್ಟ್ ನಾ ಅಧ್ಯಕ್ಷ ವೇಣು ಪ್ರಕಾಶ್ ವಂದನೆ ಸಲ್ಲಿಸಿದರು.
ಈ ಸಮಾರಂಭದಲ್ಲಿ ಕುಪಂ ದ್ರಾವಿಡ ವಿಶ್ವವಿದ್ಯಾಲಯ ವಿದ್ಯಾನಿಲಯದ ಪ್ರೊ.ಶೇಷ ಶಾಸ್ತ್ರಿ, ಪ್ರೊ. ಸತ್ಯವಾಣಿ, ಪದದೇವರಾಜ್ ದೂರದರ್ಶನದ ಬಿ.ಕೆ. ಶ್ರೀಧರ್, ಶಶಿಧರ,
ಎಂ ಸಿ ಜಯಮಾಲಾ, ವಾಸುದೇವ, ಮುಂತಾದವರು ಉಪಸ್ಥಿತರಿದ್ದರು.