ರಾಮಸಮುದ್ರ ಕೆರೆಯ ಹರಿಯುತಿರುವ ನೀರಿಗೆ ಸೇತುವೆ ನಿರ್ಮಿಸಲು ಸ್ಥಳ ಪರಿಶೀಲಿಸಿದ ಶಾಸಕ ಬಿ ಎನ್ ರವಿಕುಮಾರ್

ವಿಜಯ ದರ್ಪಣ ನ್ಯೂಸ್…

ರಾಮಸಮುದ್ರ ಕೆರೆಯ ಹರಿಯುತಿರುವ ನೀರಿಗೆ ಸೇತುವೆ ನಿರ್ಮಿಸಲು ಸ್ಥಳ ಪರಿಶೀಲಿಸಿದ ಶಾಸಕ ಬಿ ಎನ್ ರವಿಕುಮಾರ್

ಶಿಡ್ಲಘಟ್ಟ : ತಾಲ್ಲೂಕಿನ ಸಾದಲಿ ಬಳಿಯ ರಾಮಸಮುದ್ರ ಕೆರೆಯ ಹರಿಯುತಿರುವ ನೀರಿಗೆ ಸೇತುವೆ ನಿರ್ಮಿಸಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಶಾಸಕರಾದ ಬಿ.ಎನ್‌.ರವಿಕುಮಾರ್ ಅವರು ಚರ್ಚಿಸಿದರು.
ರಾಮಸಮುದ್ರ ಕೆರೆ ಕೋಡಿ ಹರಿದಾಗ ಕೆರೆಯ ಕೆಳಗಡೆ ಇರುವ ರಸ್ತೆಯು ಸಂಚರಿಸಲು ಆಗದೆ ಇರುವ ಸಮಸ್ಯೆಯನ್ನು
ಬಗೆ ಹರಿಬೇಕೆಂದು ಸಾರ್ವಜನಿಕರು ಮನವಿ ಸಲ್ಲಿಸಿದರು.

ಕೆರೆ ಸುತ್ತಮುತ್ತಲಿನ ಸಾದಲಿ ಮತ್ತು ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯತಿಯ ರೈತರ ಸಮಸ್ಯೆಗಳನ್ನು ಆಲಿಸಿದಾಗ ಈ ನೀರು ಆಂಧ್ರ ಬಾಗಕ್ಕೆ ಹರಿದು ಹೋಗುತ್ತದೆ ಇದಕ್ಕೆ ಶಾಶ್ವತ ಪರಿಹಾರವನ್ನು ರೂಪಿಸಬೇಕು ಎಂದು ರೈತರು ಶಾಸಕರ ಬಳಿ ವಿವರಿಸಿದರು.

ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ಸಾದಲಿ ಗ್ರಾಮದಲ್ಲಿ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಮತ್ತು ಸರ್ಕಾರದಿಂದ ನೀಡಿರುವ ನಿವೇಶನಗಳಲ್ಲಿ ವಿದ್ಯುತ್ ಸಂಪರ್ಕ ಒಂದೇ ಇರುವ ಕಾರಣ ವಿದ್ಯುತ್ ಸರಬರಾಜು ಅಧಿಕಾರಿಗಳ ಜೊತೆ ಚರ್ಚಿಸಿ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ತಾಕೀತು ಮಾಡಿದರು.

ಈ ಭಾಗದ ಹಲವು ಮುಖಂಡರು ನನ್ನ ಬಳಿ ಬಂದು ಈ ಭಾಗಕ್ಕೆ ನೀವು ಭೇಟಿ ನೀಡಿ ನಮ್ಮ ಸಮಸ್ಯೆಗಳನ್ನು ಆಲಿಸಬೇಕು ಎಂಬ ಮನವಿಗೆ ಹಲವು ಕಡೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ತಾದೂರು ರಘು, ತ್ಯಾಗರಾಜ್, ಆವುಲರೆಡ್ಡಿ(ವಿಜಯಾನಂದ), ಆಂಜಿನಪ್ಪ, ಗಂಗಾಧರ್, ಪಿಡಬ್ಲ್ಯೂ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಬೆಸ್ಕಾಂ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ
ಎಸ್.ದೇವಗಾನಹಳ್ಳಿ ಮತ್ತು ಸಾದಲಿ ಗ್ರಾಮ ಪಂಚಾಯಿತಿಯ ಜೆಡಿಎಸ್ ಎಲ್ಲಾ ಮುಖಂಡರು ಹಾಜರಿದ್ದರು.