ಇಂದಿನಿಂದ ಸುತ್ತೂರು ಜಾತ್ರಾ ಮಹೋತ್ಸವ ಪ್ರಾರಂಭ : ಜಾತ್ರಾ ಮಹಾ ದಾಸೋಹಕ್ಕೆ ಸುತ್ತೂರು ಶ್ರೀಗಳಿಂದ ಚಾಲನೆ
ವಿಜಯ ದರ್ಪಣ ನ್ಯೂಸ್…..
ಇಂದಿನಿಂದ ಸುತ್ತೂರು ಜಾತ್ರಾ ಮಹೋತ್ಸವ ಪ್ರಾರಂಭ : ಜಾತ್ರಾ ಮಹಾ ದಾಸೋಹಕ್ಕೆ ಸುತ್ತೂರು ಶ್ರೀಗಳಿಂದ ಚಾಲನೆ

ತಾಂಡವಪುರ ಜನವರಿ 14- ಹತ್ತೂರ ಸುತ್ತಿ ನೋಡು ಸುತ್ತೂರ ಜಾತ್ರೆ ನೋಡು ಎಂಬ ನಾಣ್ಣುಡಿಯಂತೆ ವಿಶ್ವ ವಿಖ್ಯಾತ ಇತಿಹಾಸ ಪ್ರಸಿದ್ಧವುಳ್ಳಸುತ್ತೂರು ಜಾತ್ರ ಹಿಂದಿನಿಂದ ಪ್ರಾರಂಭವಾಗಲಿದ್ದು ಜಾತ್ರಮಹೋತ್ಸವದ ಕೇಂದ್ರ ಬಿಂದುವಾದ ಮಹಾ ದಾಸೂಹಕ್ಕೆ ಬುದವಾರ ಮುಂಜಾನೆ ಬೃಹತ್ ಒಲೆಗಳಿಗೆ ಅಗ್ನಿ ಸ್ವರ್ಶ ಮಾಡುವ ಮೂಲಕ ಸುತ್ತೂರು ಪೀಠಾಧ್ಯಕ್ಷ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹಳೆ ಮೈಸೂರು ಭಾಗದ ದೀರ್ಘಕಾಲ ನಡೆಯುವ ಜಾತ್ರೆಗಳಲ್ಲಿ ಒಂದಾದ ಸುತ್ತೂರು ಜಾತ್ರಾ ಮಹೋತ್ಸವನ್ನು ಮುಂಜಾನೆ 7ಗಂಟೆಗೆ ಶಿವಯೋಗಿ ಶಿವರಾತ್ರಿಶ್ವರ ಕೇಂದ್ರ ಮಹಾಸ್ವಾಮಿಗಳ ಕತೃ ಗದ್ದಿಗೆಯಲ್ಲಿ ವಿವಿಧ ಪೂಜಾ ವಿಧಾನಗಳನ್ನು ನೆರವೇರಿಸಿ, ಸುಮಾರು ಏಳು ಗಂಟೆ ಸುಮಾರಿಗೆ 36 ಬೃಹತ್ ಒಲೆಗಳಿಗೆ ಸಾದು ಶರಣರು ಗ್ರಾಮಸ್ಥರು ಹಾಗೂ ಇನ್ನೂ ಅನೇಕ ಗಣ್ಯರು ಕರ್ಪೂರದಿಂದ ಅಗ್ನಿ ಸ್ಪರ್ಶ ಮಾಡಿಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.

6 ದಿನಗಳ ಕಾಲ ನಡೆಯುವ ಮಾಹಾ ದಾಸೋಹದಲ್ಲಿ ಜಾತ್ರಗೆ ಆಗಮಿಸುವ ಭಕ್ತ ವೃಂದಕ್ಕೆ ಬೆಳಿಗ್ಗೆ ,ಮಧ್ಯಾಹ್ನ, ಹಾಗೂ ರಾತ್ರಿಯ ವೇಳೆ ನಿರಂತರವಾಗಿ ದಾಸೋಹ ನಡೆಯಲಿದೆ. 35 ಬೃಹತ್ ಕೊಪ್ಪರಿಕೆಗಳು, 500 ಬಾಣಸಿಗರು 500ಕ್ಕೂ ಹೆಚ್ಚು ಸಹಾಯಕರು, ಹಾಗೂ 15ಕ್ಕೂ ಹೆಚ್ಚು ಸುತ್ತಮುತ್ತಲಿನ ಗ್ರಾಮಸ್ಥರು ದಾಸೋಹದಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಗದ್ದುಗೆ ಪಕ್ಕದಲ್ಲಿ ಇರುವ ಬೃಹತ್ ವಿಶಾಲವಾದ ಮೈದಾನದಲ್ಲಿ ಮಹಿಳೆಯರಿಗೆ, ಪುರುಷರಿಗೆ, ಸ್ವಯಂ ಸೇವಕರಿಗೆ ಹಾಗೂ ಸಾಮಾನ್ಯ ಭಕ್ತರಿಗೆ ಬೃಹತ್ ಶಾಮಿಯಾನಗಳನ್ನು ಹಾಕಲಾಗಿದೆ. ಒಂದು ವೇಳೆಗೆ ಸುಮಾರು ಒಂದು ಲಕ್ಷ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಅನ್ನ ಸಾಬಂರ್, ಮಜ್ಜಿಗೆ, ಕಡ್ಲೆಹುಳಿ,ಮೈಸೂರು ಪಾಕ್, ಪಾಯಸ ಸೇರಿದಂತೆ ಇನ್ನು ಮುಂತಾದ ಖಾದ್ಯಗಳನ್ನು ಬಡಿಸಲಾಗುತ್ತದೆ,ಅಕ್ಕಿ 1೦೦೦ ಕ್ವಿಂಟಲ್, 250 ಕ್ವಿಂಟಲ್ ತೊಗರಿ ಬೇಳೆ,1600 ಕ್ಯಾನ್ ರೀಪೆಂಡ್ ಆಯಿಲ್ ,14 ಟನ್ ಬೆಲ್ಲ, 1350 ಕೆ ಜಿ ಖಾರದ ಪುಡಿ,200 ಕ್ವಿಂಟಲ್ ಸಕ್ಕರೆ, 600 ಕೆ ಜಿ ನಂದಿನಿ ತುಪ್ಪ ,1400 ಕೆ ಜಿ ದ್ರಾಕ್ಷಿ ಗೋಡಂಬಿ, 9000 ಲೀಟರ್ ಹಾಲು, 28000 ಲೀಟರ್ ಮೊಸರು,5000ಕೆ ಜಿ ಉಪ್ಪಿನ ಕಾಯಿ, ತರಕಾರಿ,25000 ತೆಂಗಿನ ಕಾಯಿ, ಇನ್ನೂ ಅನೇಕ ಸಾಮಗ್ರಿಗಳನ್ನು ಮಹಾದಾಸೋಹಕ್ಕೆ ಬಳಸಲಾಗುತ್ತದೆ.

ಜಾತ್ರೆಯ ಪ್ರಯುಕ್ತ ಬಿಗಿ ಪೋಲಿಸ್ ಭದ್ರತೆ:
ಆರು ದಿನಗಳ ಕಾಲ ನಡೆಯುವ ಜಾತ್ರೆಗೆ ಯಾವುದೇ ತರ ಅಹಿತಕರ ಘಟನೆಗಳು ನಡೆಯದಂತೆ ಮೈಸೂರು ಜಿಲ್ಲಾ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ, 2 ಎ ಎಸ್ ಪಿ,4 ಡಿ ವೈ ಎಸ್ ಪಿ,12 p ಪೊಲೀಸ್ ಇನ್ಸ್ಪೆಕ್ಟರ್,,35 ಪಿ ಎಸ್ ಐ, ಸೇರಿದಂತೆ ಸ್ವಯಂಸೇವಕರು ಮತ್ತು ಎನ್ ಸಿ ಸಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತದೆ.
ಈ ಸಂದರ್ಭದಲ್ಲಿ ಇಮ್ಮಡಿ ಮುರಗಿ ಸ್ವಾಮಿಗಳು, ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು, ನಂಜನಗೂಡು ಮಲ್ಲಿನಾಥ ಸ್ವಾಮಿಗಳು, ಕುರುಬೂರು ಮಲ್ಲಿಕಾರ್ಜುನ ಸ್ವಾಮಿಗಳು, ಮಾದಾಪುರ ಚನ್ನಬಸವ ಸ್ವಾಮಿಗಳು, ಚುಂಚನಹಳ್ಳಿ ಷಡಕ್ಷರಿ ಸ್ವಾಮಿಗಳು, ಗವಿಮಠ ಪ್ರಭುಲಿಂಗ ಸ್ವಾಮಿಗಳು, ರಾಗಿ ಬೊಮ್ಮನ ಹಳ್ಳಿ ಮಠದ ಬಸವಲಿಂಗ ದೇಸಿ ಕೇಂದ್ರ ಸ್ವಾಮಿಗಳು, ಸಿದ್ದಲಿಂಗ ಸ್ವಾಮಿಗಳು,ಎಸ್ ಪಿ ಉದಯ್ ಶಂಕರ್ , ಎಸ್ ಪಿ ಮಂಜುನಾಥ, ಶಿವ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.
