ಸಂವಿಧಾನ ಸಮರ್ಪಣೆ ದಿನವನ್ನು ದಲಿತಪರ ಸಂಘಟನೆಗಳು ಒಗ್ಗೂಡಿ ಆಚರಣೆ.

ವಿಜಯ ದರ್ಪಣ ನ್ಯೂಸ್  

ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನವೆಂಬರ್ 26 :ದೇವನಹಳ್ಳಿ ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿ ಸುವ ಮೂಲಕ ಭಾರತ ಸರ್ಕಾರ ಸಂವಿಧಾನ ಸಮರ್ಪಣೆ ದಿನವನ್ನು ದಲಿತಪರ ಸಂಘಟನೆಗಳು ಒಗ್ಗೂಡಿ ಆಚರಿಸಿದರು.

ದಲಿತ ಸಮುದಾಯದ ಹಿರಿಯ ಮುಖಂಡ ಕಗ್ಗಲಹಳ್ಳಿ ಗುರಪ್ಪ ಅವರು ಮಾತನಾಡಿ ಜಗತ್ತಿನಲ್ಲಿ ಶ್ರೇಷ್ಠವಾದ ಧರ್ಮ ವಿದ್ದರೆ ಅದು ಮಾನವ ಧರ್ಮ ಅದನ್ನು ಕಟ್ಟಿ ಬೆಳೆಸಿದ ಕೀರ್ತಿ ಸಂವಿಧಾನ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆ ತೊಡೆದು ಹಾಕಲು ಸಮಾಜದಲ್ಲಿ  ಸಮಾಜದ ಸುಧಾರಣೆಗೆ ಅವಿರಥ ಹೋರಾಟಕ್ಕೆ ಸಾಕ್ಷಿಯಾಗಿದ್ದಾರೆ. ಅಂಬೇಡ್ಕರ್ ಅವರು ನಡೆದು ಬಂದ ಹಾದಿಯನ್ನು ಪ್ರತಿಯೊಬ್ಬರು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ದಲಿತ ಪರ ಚಿಂತಕರು ಹಾಗೂ ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ ಜಗತ್ತಿನಲ್ಲಿ ಜಾತಿ ಧರ್ಮ ಮೀರಿ ಬೆಳೆದು ಪವಿತ್ರ ಗ್ರಂಥವೆನಿಸಿಕೊಂಡ ಸಂವಿಧಾನ ಇಂದು ರಕ್ಷಣೆ ಮಾಡುವ ಅನಿವಾರ್ಯ ನಮ್ಮೆಲ್ಲರ ಜವಾಬ್ದಾರಿ ಯಾಗಿದೆ. ಪ್ರಜಾಪ್ರಭುತ್ವಕ್ಕೆ ಭದ್ರಬುನಾದಿ ಸಂವಿಧಾನದ ಚೌಕಟ್ಟು ಅಂಬೇಡ್ಕರ್ ಅವರು ಸಮಾನತೆ, ಸಹೋದರತೆ, ಸಮಾಜದ ಸಹಬಾಳ್ವೆಯನ್ನು ಜಗತ್ತಿಗೆ ಸಾರಿದ ಮಹಾನ್ ಚಿಂತಕರು ಈ ದಿನ ದಲಿತ ವರ್ಗಗಳ ಮನೆಗಳಲ್ಲಿ ಸಂವಿಧಾನದ ಸಮರ್ಪಣ ದಿನವನ್ನು ಹಬ್ಬದ ರೀತಿ ಆಚರಿಸಿ ಅಂಬೇಡ್ಕರ್ ಅವರ ಸಾಧನೆಗಳನ್ನು ಪುನರ್ ಸ್ಮರಿಸುವ ದಿನವಾಗಲಿ. ನ್ಯಾ ಕಾಂತರಾಜ್ ವರದಿಯನ್ನು ವಿರೋಧಿಸುವ ಸಮುದಾಯಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ನೀಡಬಲ್ಲ ನಮ್ಮೆಲ್ಲ ಹಿಂದುಳಿದ ಸಮುದಾಯಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತರು ಸಂಘಟಿತರಾಗ ಬೇಕಿದೆ ಎಂದರು.

ದಲಿತ ಸಮುದಾಯದ ಮತ್ತೊಬ್ಬ ಹಿರಿಯ ಮುಖಂಡ ಮಾರಪ್ಪ ಅವರು ಮಾತನಾಡಿ, ಅಂಬೇಡ್ಕರ್ ಅವರು ಕೊಟ್ಟಂತಹ ಸಂವಿಧಾನದಲ್ಲಿ ಎಲ್ಲವನ್ನು ಅನುಭವಿಸಿದವರು ಇಂತಹ ಪುಣ್ಯದ ದಿನದ ಆಚರಣೆಯಲ್ಲಿ ಭಾಗವಹಿಸುವಲ್ಲಿ ವಿಫಲರಾಗಿದ್ದಾರೆ. ಪರಿಶಿಷ್ಟ ಜಾತಿಯಲ್ಲಿ ನೂರೊಂದು ಜಾತಿಗಳಿದ್ದು ಎಲ್ಲ ವರ್ಗದವರನ್ನು ಒಗ್ಗೂಡಿಸಿ ಮೀಸಲು ಕ್ಷೇತ್ರವಾದ ದೇವನಹಳ್ಳಿಯಲ್ಲಿ ಅಹಿಂದ ಸಂಘಟನೆಯನ್ನು ಹುಟ್ಟುಹಾಕುವ ಮೂಲಕ ಮುಂದಿನ ದಿನಗಳಲ್ಲಿ ಶಕ್ತಿ ಪ್ರದರ್ಶನ ಅಗತ್ಯವಿದೆ.

ನ್ಯಾಯಮೂರ್ತಿ ಸದಾಶಿವ ಆಯೋಗ ಹಾಗೂ ನ್ಯಾ  ಕಾಂತರಾಜ್ ವರದಿ ಯಥಾವತ್ತಾಗಿ ಜಾರಿಗೆ ಬರುವ ಬಹು ದಿನಗಳ ಬೇಡಿಕೆಯನ್ನು ಕೇವಲ ಎರಡೇ ಜಾತಿಗಳು ವಿರೋಧ ವ್ಯಕ್ತಪಡಿಸುತಿವೆ ಅವರಿಗೆ ತಳ ಸಮುದಾಯಗಳ ಶಕ್ತಿ ಪ್ರದರ್ಶನ ಎರಡು ವರದಿಗಳನ್ನು ವಿರೋಧಿಸುವವರಿಗೆ ಅರ್ಥಮಾಡಿಸಬೇಕಿದೆ. ಪ.ಜಾತಿ/ ಪ.ಪಂ, ಹಿಂದುಳಿದ ವರ್ಗ ಅಲ್ಪಸಂಖ್ಯಾತರು ಒಂದೇ ವೇದಿಕೆ ಅಡಿ ಸಹಸ್ರಾರು ಸಂಖ್ಯೆಯಲ್ಲಿ ಮೀಸಲಾತಿಯ ಹೋರಾಟದ ಬಗ್ಗೆ ಪುನರ್ ಎಚ್ಚರಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಪದಾದಿಕಾರಿಗಳಾದ. ನರಸಪ್ಪ, ಶಿವಾನಂದ್, ಸೋಲೂರು ನಾಗರಾಜ್, ತಿರುಮಲೇಶ್ , ನಾರಾಯಣಸ್ವಾಮಿ, ರೈತ ಸಂಘಟನೆ ನಂಜೇಗೌಡ, ಮನೋಜ್ ಮುನಿವೆಂಕಟರ ಮಣಪ್ಪ,ಹೈದರ್, ಜಗದೀಶ್, ಸೇರಿದಂತೆ ನೂರಾರು ಮುಖಂಡರು ಹಾಜರಿದ್ದರು.