ಖಾದ್ರಿ ಶಾಮಣ್ಣನವರ ಆದರ್ಶಗಳನ್ನು ಪಾಲಿಸಬೇಕು: ಚಂದ್ರಶೇಖರ್ ಹಡಪದ್
ವಿಜಯ ದರ್ಪಣ ನ್ಯೂಸ್… ಖಾದ್ರಿ ಶಾಮಣ್ಣನವರ ಆದರ್ಶಗಳನ್ನು ಪಾಲಿಸಬೇಕು: ಚಂದ್ರಶೇಖರ್ ಹಡಪದ್ ವಿಜಯಪುರ : ಸ್ವಾತಂತ್ರ್ಯ, ಸಮಾನತೆ, ಗಾಂಧಿವಾದ, ಸರ್ವೋದಯ ತತ್ವಗಳ ಸಾಕಾರ ಮೂರ್ತಿಯಂತಿದ್ದ ಬಹುಮುಖ ವ್ಯಕ್ತಿತ್ವದ ಖಾದ್ರಿ ಶಾಮಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ, ಕರ್ನಾಟಕದ ಏಕೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಲೇ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದಿದ್ದರು. ಕಾಗೋಡು ಸತ್ಯಾಗ್ರಹ, ಗೋಕಾಕ ಚಳವಳಿಗಳ ಪ್ರತಿಬಿಂಬದಂತಿದ್ದ ಖಾದ್ರಿ ಶಾಮಣ್ಣನವರೆಂದು ಅಖಿಲ ಕರ್ನಾಟಕ ಮಿತ್ರ ಸಂಘದ ಚಿ.ಮಾ.ಸುಧಾಕರ ಪ್ರಸ್ತಾವಿಕವಾಗಿ ನುಡಿದರು. ವಿಜಯಪುರ ಪಟ್ಟಣದ ಕೇಶವ ಸ್ವಾಮಿ ಗುಡಿ ಬೀದಿಯಲ್ಲಿರುವ ಸರ್ಕಾರಿ ಹೆಣ್ಣು…
