ವಿಶ್ವ ಮಹಿಳಾ ದಿನಾಚರಣೆ, ಮಾರ್ಚ್ – 8…
ವಿಜಯ ದರ್ಪಣ ನ್ಯೂಸ್…. ವಿಶ್ವ ಮಹಿಳಾ ದಿನಾಚರಣೆ, ಮಾರ್ಚ್ – 8… ” ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗ ಬಾರದವ್ವ. ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳವ್ವ ” ” ಬಡತನದ ಮನಿಯೊಳಗ ಹೆಣ್ಣು ಹುಟ್ಟ ಬಾರದು ” ಇದು ಪ್ರಖ್ಯಾತ ಎರಡು ಜನಪದೀಯ ಹಾಡುಗಳು…… ಹೆಣ್ಣಿಗೆ ಜಗತ್ತಿನಲ್ಲಿಯೇ ಅತ್ಯಂತ ಪೂಜನೀಯ ಸ್ಥಾನ ನೀಡಿರುವ ಭಾರತೀಯ ಸಂಸ್ಕೃತಿಯ ಮತ್ತೊಂದು ಮುಖದ ಅನಾವರಣವನ್ನು ಈ ಜಾನಪದ ಸಾಹಿತ್ಯ ಮಾಡುತ್ತದೆ. ಬಹುಶಃ ಜಾಗತೀಕರಣಕ್ಕೆ ಭಾರತ ಮುಕ್ತವಾಗಿರದಿದ್ದರೆ…