ರಾಜಕೀಯ ಮತ್ತು ಆಡಳಿತದಲ್ಲಿ ವಕೀಲಿಕೆ ಎಂಬ ವಾದ ಪ್ರತಿವಾದಗಳ ಮಂಕುಬೂದಿ…..
ವಿಜಯ ದರ್ಪಣ ನ್ಯೂಸ್….. ರಾಜಕೀಯ ಮತ್ತು ಆಡಳಿತದಲ್ಲಿ ವಕೀಲಿಕೆ ಎಂಬ ವಾದ ಪ್ರತಿವಾದಗಳ ಮಂಕುಬೂದಿ….. ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ಇವುಗಳದೇ ಪ್ರಾಬಲ್ಯ……… ವಕೀಲಿಕೆಯ ನೆರಳಲ್ಲಿ ಆರೋಪ ಪ್ರತ್ಯಾರೋಪಗಳಿಂದ ಪಲಾಯನ ಮಾಡುವ ಕುತಂತ್ರ ರಾಜಕಾರಣಕ್ಕೆ ನಾವುಗಳು ಮೂಕ ಪ್ರೇಕ್ಷಕರಾಗಿ ಸಾಕ್ಷಿಯಾಗುವ ದುರಂತ ವ್ಯವಸ್ಥೆಯಲ್ಲಿ ನಾವಿದ್ದೇವೆ. ವಕೀಲಿಕೆ ಎಂದರೆ, ತಾವು ಮಾಡುವ ಕೆಲಸಗಳನ್ನು ದಾಖಲೆಗಳ ಸಮೇತ ನಿರೂಪಿಸುವ ಅಥವಾ ಸಮರ್ಥಿಸಿಕೊಳ್ಳುವ ಒಂದು ವಿಧಾನ. ಸಾಮಾನ್ಯವಾಗಿ ಒಳ್ಳೆಯ ಕೆಲಸಗಳಲ್ಲಿ ವಕೀಲಿಕೆಯ ಅವಶ್ಯಕತೆ ಅಷ್ಟಾಗಿ ಬರುವುದಿಲ್ಲ. ಅದನ್ನು ನಿರೂಪಿಸುವುದು ಹೆಚ್ಚು ಕಷ್ಟವಲ್ಲ….