ಮಡಿಕೇರಿಯಲ್ಲಿ ಮೊಳಗಿದ ರೈತರ ಕಹಳೆ
ವಿಜಯ ದರ್ಪಣ ನ್ಯೂಸ್…. ಮಡಿಕೇರಿಯಲ್ಲಿ ಮೊಳಗಿದ ರೈತರ ಕಹಳೆ ಮಡಿಕೇರಿ: ಸಿ ಮತ್ತು ಡಿ ಜಮೀನು ಸಮಸ್ಯೆಗೆ ಪರಿಹಾರ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಪಕ್ಷಾತೀತ ಬೆಂಬಲ ವ್ಯಕ್ತವಾಯಿತು. ಹಸಿರು ಶಾಲು ತೊಟ್ಟು ರಸ್ತೆಗಿಳಿದ ಸಾವಿರಾರು ಕೃಷಿಕರು ಪ್ರತಿಭಟನಾ ಮೆರವಣಿಗೆ, ಸಮಾವೇಶದ ಮೂಲಕ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು. ಮೂಲೆ ಮೂಲೆಯಿಂದ ಬಸ್, ಕಾರು ಸೇರಿದಂತೆ ನೂರಾರು ವಾಹನಗಳಲ್ಲಿ ಜಿಲ್ಲಾಕೇಂದ್ರಕ್ಕೆ ಆಗಮಿಸಿದ್ದ ರೈತರು, ಸಂಘಟನೆಗಳ ಪ್ರಮುಖರು…