ಚಪ್ಪಲಿ ಎಸೆಯುವುದು ಯಾವ ರೀತಿಯ ಪ್ರತಿಭಟನೆ……..
ವಿಜಯ ದರ್ಪಣ ನ್ಯೂಸ್… ಚಪ್ಪಲಿ ಎಸೆಯುವುದು ಯಾವ ರೀತಿಯ ಪ್ರತಿಭಟನೆ…….. ನ್ಯಾಯಾಂಗದ ಕ್ರಿಯಾಶೀಲತೆಯನ್ನು ಸ್ವಾಗತಿಸುತ್ತಾ, ನ್ಯಾಯಾಧೀಶರ ಅತಿರೇಕದ ಅಕ್ರಮಣಕಾರಿ ಮಾತುಗಳನ್ನು ಖಂಡಿಸುತ್ತಾ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳತ್ತ ಚಪ್ಪಲಿ ಎಸೆದ ದುಷ್ಟ, ಮತಾಂಧ ವಕೀಲರ ನಡೆಯನ್ನು ಪ್ರಬಲವಾಗಿ ವಿರೋಧಿಸುತ್ತಾ, ಮೂಲಭೂತವಾದ ಸಂಪೂರ್ಣವಾಗಿ ತನ್ನ ನೆಲೆಯನ್ನು ವಿಸ್ತರಿಸುವ ಮುನ್ನ ಕ್ರಿಯೆ – ಪ್ರತಿಕ್ರಿಯೆಗಳ ಸುತ್ತ ಒಂದು ಸುತ್ತು……. ವಿರೋಧಿಗಳನ್ನು ಕೆಲವರು ಬಾಂಬ್ ಹಾಕಿ ಉಡಾಯಿಸುತ್ತಾರೆ, ಕೆಲವರು ಬಂದೂಕಿನಿಂದ ಗುರಿಯಿಟ್ಟು ಹೊಡೆಯುತ್ತಾರೆ, ಕೆಲವರು ಮಚ್ಚು ಲಾಂಗುಗಳನ್ನು ಬೀಸುತ್ತಾರೆ, ಕೆಲವರು ರಾಡು, ದೊಣ್ಣೆಗಳಿಂದ…
