ಮಧ್ಯಕಾಲೀನ ಯುಗದತ್ತ ಜಾಗತಿಕ ವಿದ್ಯಮಾನಗಳು ಚಲಿಸುತ್ತಿವೆ……
ವಿಜಯ ದರ್ಪಣ ನ್ಯೂಸ್… ಮಧ್ಯಕಾಲೀನ ಯುಗದತ್ತ ಜಾಗತಿಕ ವಿದ್ಯಮಾನಗಳು ಚಲಿಸುತ್ತಿವೆ…… ಪುರಾತನ ಕಾಲದಲ್ಲಿ ಮನುಷ್ಯ ಅನಾಗರಿಕನಾಗಿದ್ದು ನಾಗರೀಕ ಪ್ರಪಂಚಕ್ಕೆ ಮರಳಿದ ಮೇಲೆ ಬಹುತೇಕ ಎಲ್ಲ ನಾಗರಿಕತೆಗಳು ಒಂದಷ್ಟು ನೆಮ್ಮದಿಯಿಂದ ಬದುಕನ್ನು ಕಟ್ಟಿಕೊಂಡಿದ್ದವು. ಹಲವು ಯುದ್ಧಗಳು, ಅಕ್ರಮಣಗಳು ನಡೆಯುತ್ತಿದ್ದವು. ಆದರೆ ಇತಿಹಾಸದ ದಾಖಲೆಗಳ ಪ್ರಕಾರ ಅವುಗಳ ಪ್ರಮಾಣ ಕಡಿಮೆ ಇತ್ತು. ತಾನು ತನ್ನ ಸುರಕ್ಷತೆಗಾಗಿ ಮಾತ್ರ ರಕ್ಷಣಾತ್ಮಕವಾಗಿ ಹೋರಾಡುತ್ತಿದ್ದ….. ಆದರೆ ಮಧ್ಯಕಾಲೀನ ಯುಗದಲ್ಲಿ ವಿಶ್ವದ ಬಹುತೇಕ ನಾಗರಿಕತೆಗಳಲ್ಲಿ ಹಿಂಸೆ ತಾಂಡವವಾಡುತ್ತಿತ್ತು. ಮನುಷ್ಯನ ವಿಸ್ತರಣಾ ಸ್ವಭಾವ ಮತ್ತು ತನ್ನ ಅಹಂ…
