ಸರ್ಕಾರಿ ನೌಕರಿ ಕೊಡಿಸುವುದಾಗಿ 21 ಲಕ್ಷ 36 ಸಾವಿರ ರೂ.ಗಳನ್ನು ವಂಚನೆ
ವಿಜಯ ದರ್ಪಣ ನ್ಯೂಸ್… ಸರ್ಕಾರಿ ನೌಕರಿ ಕೊಡಿಸುವುದಾಗಿ 21 ಲಕ್ಷ 36 ಸಾವಿರ ರೂ.ಗಳನ್ನು ವಂಚನೆ ಶಿಡ್ಲಘಟ್ಟ : ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ 21 ಲಕ್ಷ 36 ಸಾವಿರ ರೂ.ಗಳನ್ನು ವಂಚಿಸಿದ ವ್ಯಕ್ತಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ವೇಮಗಲ್ ಹೋಬಳಿ ತೋಕಲಘಟ್ಟ ಗ್ರಾಮದ ಅನಿಲ್ ಕುಮಾರ್ ಬಂಧಿತ ಆರೋಪಿಯಾಗಿದ್ದು ತಾಲ್ಲೂಕಿನ ಜಂಗಮಕೋಟೆಯ ಗೋಪಾಲಕೃಷ್ಣ ಅವರಿಗೆ ಪರಿಚಯವಾಗಿದ್ದ ಅನಿಲ್ ಕುಮಾರ್, ತಾನು ಕೆಪಿಎಸ್‌ಸಿಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದೇನೆ, ನಿಮ್ಮ ಮಗನಿಗೆ ಸರ್ಕಾರಿ ನೌಕರಿ ಕೊಡಿಸುತ್ತೇನೆ…
