ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸಲು ಮಾಧ್ಯಮದವರಿಗೆ ಮುಖ್ಯಮಂತ್ರಿಗಳ ಸಲಹೆ

ವಿಜಯ ದರ್ಪಣ ನ್ಯೂಸ್… ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸಲು ಮಾಧ್ಯಮದವರಿಗೆ ಮುಖ್ಯಮಂತ್ರಿಗಳ ಸಲಹೆ ಬೆಂಗಳೂರು, ಸೆಪ್ಟೆಂಬರ್ 19 : ಸಮಾಜದಲ್ಲಿನ ಅಸಮಾನತೆಗೆ ಕಾರಣಗಳು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಮಾಧ್ಯಮಗಳು ತೊಡಗಬೇಕು. ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸಬೇಕು. ಹಾಗೆಯೇ ದುರ್ಬಲ ವರ್ಗದವರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು. ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ…

Read More

ರೈತರಿಗೆ ಅನುಕೂಲವಾಗಲು ಸಂತೆ ಮೈದಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ : ಶಾಸಕ ಬಿ.ಎನ್‌.ರವಿಕುಮಾರ್

ವಿಜಯ ದರ್ಪಣ ನ್ಯೂಸ್…. ರೈತರಿಗೆ ಅನುಕೂಲವಾಗಲು ಸಂತೆ ಮೈದಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ : ಶಾಸಕ ಬಿ.ಎನ್‌.ರವಿಕುಮಾರ್ ಶಿಡ್ಲಘಟ್ಟ : ನಗರದಲ್ಲಿ ಪ್ರತಿ ಸೋಮವಾರ ನಡೆಯುವ ವಾರದ ಸಂತೆ ಮೈದಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ರೈತರು, ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಶಾಸಕ ಬಿ.ಎನ್‌.ರವಿಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳೊಂದಿಗೆ ಅವರು ಸಂತೆ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ನಗರೋತ್ಥಾನ ಯೋಜನೆ 4ನೇ ಹಂತದಲ್ಲಿ 4 ಕೋಟಿ 65 ಲಕ್ಷ ರೂ.ಗಳನ್ನು ಈ ಅಭಿವೃದ್ಧಿ…

Read More

ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಬರುತ್ತಿಲ್ಲ ಎಂದರೆ ನೀವು ಸರಿಯಾಗಿ ಔಷಧೋಪಚಾರ ಮಾಡುತ್ತಿಲ್ಲ ಎಂದರ್ಥ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ

ವಿಜಯ ದರ್ಪಣ ನ್ಯೂಸ್…. ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಬರುತ್ತಿಲ್ಲ ಎಂದರೆ ನೀವು ಸರಿಯಾಗಿ ಔಷಧೋಪಚಾರ ಮಾಡುತ್ತಿಲ್ಲ ಎಂದರ್ಥ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಶಿಡ್ಲಘಟ್ಟ : ಇಡೀ ರಾಜ್ಯದಲ್ಲಿ ಸುತ್ತಾಡಿದ್ದೇನೆ ಇಷ್ಟು ಕಡಿಮೆ ರೋಗಿಗಳು ದಾಖಲಾಗಿರುವ ಆಸ್ಪತ್ರೆ ಇದು, ಸಾಮಾನ್ಯವಾಗಿ ಬಡವರು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ ,ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ ಎಂದರೆ ನೀವು ಸರಿಯಾಗಿ ಔಷಧೋಪಚಾರ ಮಾಡುತ್ತಿಲ್ಲ ಎಂದರ್ಥ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅಸಮಾಧಾನ ಹೊರ ಹಾಕಿದರು. ರಾಜ್ಯ ಆಹಾರ…

Read More

ಅಯ್ಯೋ, ಯಾವುದೀ ಪ್ರವಾಹವು, ಯಾವುದೀ ಮೇಘ ಸ್ಫೋಟಗಳು…..

ವಿಜಯ ದರ್ಪಣ ನ್ಯೂಸ್… ಅಯ್ಯೋ, ಯಾವುದೀ ಪ್ರವಾಹವು, ಯಾವುದೀ ಮೇಘ ಸ್ಫೋಟಗಳು….. ಇತ್ತೀಚೆಗೆ ಪ್ರತಿನಿತ್ಯ ದೇಶದ ಒಂದಲ್ಲಾ ಒಂದು ಭಾಗದಲ್ಲಿ ಈ ರೀತಿಯ ಸುದ್ದಿಗಳನ್ನು ಕೇಳುತ್ತಲೇ ಇದ್ದೇವೆ. ಪ್ರವಾಹ, ಪ್ರಳಯ ಅಥವಾ ಆ ರೀತಿಯ ಪ್ರಾಕೃತಿಕ ವಿಕೋಪಗಳನ್ನು ತಡೆಯುವುದು ಸಾಧ್ಯವೇ ? ಇಲ್ಲ, ಬಹುಶಃ ವಿಶ್ವದ ಯಾವುದೇ ದೇಶ ಮತ್ತು ಮಾನವ ಕುಲ ಇನ್ನೂವರೆಗೆ ಅದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಜಪಾನ್, ಅಮೆರಿಕ, ಆಸ್ಟ್ರೇಲಿಯಾ ಮುಂತಾದ ಮುಂದುವರಿದ ದೇಶಗಳೇ ಅದನ್ನು ಮಾಡಲು ಸಾಧ್ಯವಾಗಿಲ್ಲ. ಭೂಕಂಪ, ಸುನಾಮಿ, ಚಂಡಮಾರುತ, ಮೇಘ…

Read More

ಸಮಾನತೆ ಎಂದರೆ ಸ್ತ್ರೀ ಪುರುಷ ಮಾತ್ರವಲ್ಲ, ತೃತೀಯಲಿಂಗಿಗಳಾದ ನಾವು ಇದ್ದೇವೆ : ಡಾ.ಮಾತಾ ಮಂಜಮ್ಮ ಜೋಗಿತಿ 

ವಿಜಯ ದರ್ಪಣ ನ್ಯೂಸ್…. ಸಮಾನತೆ ಎಂದರೆ ಸ್ತ್ರೀ ಪುರುಷ ಮಾತ್ರವಲ್ಲ, ತೃತೀಯಲಿಂಗಿಗಳಾದ ನಾವು ಇದ್ದೇವೆ : ಡಾ.ಮಾತಾ ಮಂಜಮ್ಮ ಜೋಗಿತಿ   ಸಮಾನತೆ ಎಂದರೆ ಸ್ತ್ರೀ ಪುರುಷ ಮಾತ್ರವಲ್ಲ, ಈ ಸಮಾಜದಲ್ಲಿ ತೃತೀಯಲಿಂಗಿಗಳಾದ ನಾವು ಇದ್ದೇವೆ ಎಂಬುದನ್ನು ಅನೇಕರು ಮರೆತಿದ್ದಾರೆ ಮಾತಾ ಡಾ.ಮಾತಾ ಮಂಜಮ್ಮ ಜೋಗಿತಿ ನುಡಿದರು. ಡಾಕ್ಟರ್ ಎಸ್ ಲಕ್ಷ್ಮೀದೇವಿ ಸ್ಮಾರಕ ಪ್ರತಿಷ್ಠಾನ (ರಿ) ವತಿಯಿಂದ ಸಿ. ಅಶ್ವತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಲ್ಕನೇ ವಾರ್ಷಿಕ ಪ್ರಶಸ್ತಿಯನ್ನು ಸ್ವೀಕರಿಸಿದ ಅವರು ಮಾತನಾಡುತ್ತಿದ್ದರು. ಜಗತ್ತಿನಲ್ಲಿ ಗಂಡಿನಿಂದ ಹೆಣ್ಣಿಗೆ ಸಮಾನತೆ…

Read More

ಲೋಕಾಯುಕ್ತ ಸಂಸ್ಥೆಯಲ್ಲಿ ಎಸಿ, ತಹಶೀಲ್ದಾರ್ ಗಳ ಮೇಲೆ ಸ್ವಯಂಪ್ರೇರಿತ ದೂರು ದಾಖಲು

ವಿಜಯ ದರ್ಪಣ ನ್ಯೂಸ್… ಲೋಕಾಯುಕ್ತ ಸಂಸ್ಥೆಯಲ್ಲಿ ಎಸಿ, ತಹಶೀಲ್ದಾರ್ ಗಳ ಮೇಲೆ ಸ್ವಯಂಪ್ರೇರಿತ ದೂರು ದಾಖಲು ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ ಸೆ.17:-ಜಿಲ್ಲೆಯ ಸೈನಿಕರು, ಮಾಜಿ ಸೈನಿಕರು, ಸ್ವಾತಂತ್ರ್ಯ ಹೋರಾಟಗಾರಿರಿಗೆ ಹಾಗೂ ಅವಲಂಬಿತ ಕುಟುಂಬಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ವಿಳಂಬ ಧೋರಣೆ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಗಳ ಮೇಲೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಉಪವಿಭಾಗಾಧಿಕಾರಿ ದುರ್ಗಶ್ರೀ, ದೇವನಹಳ್ಳಿ ತಹಶೀಲ್ದಾರ್ ಅನಿಲ್ ಎಂ, ಹೊಸಕೋಟೆ ತಹಶೀಲ್ದಾರ್ ಸೋಮಶೇಖರ್…

Read More

ವಿಶ್ವಕರ್ಮರನ್ನು ಶ್ರೇಷ್ಠ ವಾಸ್ತುಶಿಲ್ಪಿಯಾಗಿ ವರ್ಣಿಸಲಾಗಿದೆ:  ಶಾಸಕ ಬಿ.ಎನ್.ರವಿಕುಮಾರ್ 

ವಿಜಯ ದರ್ಪಣ ನ್ಯೂಸ್… ವಿಶ್ವಕರ್ಮರನ್ನು ಶ್ರೇಷ್ಠ ವಾಸ್ತುಶಿಲ್ಪಿಯಾಗಿ ವರ್ಣಿಸಲಾಗಿದೆ:  ಶಾಸಕ ಬಿ.ಎನ್.ರವಿಕುಮಾರ್ ಶಿಡ್ಲಘಟ್ಟ : ಋಗ್ವೇದ ಹಾಗೂ ಪುರಾಣಗಳಲ್ಲಿ ವಿಶ್ವಕರ್ಮರನ್ನು ಸರ್ವ ಶಕ್ತಿಶಾಲಿ ಕರ್ತೃ ಹಾಗೂ ಶ್ರೇಷ್ಠ ವಾಸ್ತುಶಿಲ್ಪಿಯಾಗಿ ವರ್ಣಿಸಲಾಗಿದೆ ಲಂಕಾ, ದ್ವಾರಕಾ, ಇಂದ್ರಪ್ರಸ್ಥದಂತಹ ಮಹಾನಗರಗಳನ್ನು ನಿರ್ಮಿಸಿದವರು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು. ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವಕರ್ಮರನ್ನು ದೇವತ್ವ ಪಡೆದ ದೈವಿಕ ವಾಸ್ತುಶಿಲ್ಪಿ ಹಾಗೂ ಸೃಷ್ಟಿಕರ್ತರೆಂದು ಪೂಜಿಸಲಾಗುತ್ತಿದೆ ಎಂದು…

Read More

ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ಆಯೋಜನೆ

ವಿಜಯ ದರ್ಪಣ ನ್ಯೂಸ್…. ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ಆಯೋಜನೆ ದೊಡ್ಡಬಳ್ಳಾಪುರ  ಬೆಂಗಳೂರು ಗ್ರಾ.ಜಿಲ್ಲೆ. ಸೆಪ್ಟೆಂಬರ್ 17: ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಜಿಲ್ಲೆಯ ಹಿರಿಯ ನಾಗರಿಕರಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ…

Read More

ಶ್ರೇಷ್ಠತೆಗೆ ಬೇಕು ಏಕಾಗ್ರತೆ

ವಿಜಯ ದರ್ಪಣ ನ್ಯೂಸ್…. ಶ್ರೇಷ್ಠತೆಗೆ ಬೇಕು ಏಕಾಗ್ರತೆ ಲೇಖನ – ಜಯಶ್ರೀ.ಜೆ. ಅಬ್ಬಿಗೇರಿ ಇಂಗ್ಲೀಷ್ ಉಪನ್ಯಾಸಕರು ಬೆಳಗಾವಿ ಮೊ: ೯೪೪೯೨೩೪೧೪೨ ಮಹಾಭಾರತದಲ್ಲಿ ಒಂದು ಕಥೆ ಬರುತ್ತದೆ. ಭೀಮ ಮತ್ತು ಅರ್ಜುನ ಇಬ್ಬರೂ ಶಿವನ ದೊಡ್ಡ ಭಕ್ತರು. ಅರ್ಜುನ ದಿನವೂ ಶಿವನನ್ನು ಎರಡು ಗಂಟೆಗಳ ಕಾಲ ಪ್ರಾರ್ಥಿಸುತ್ತಿದ್ದ. ಆದರೆ ಭೀಮ ಕೇವಲ ಎರಡು ನಿಮಿಷ ಪ್ರಾರ್ಥಿಸುತ್ತಿದ್ದ. ಒಂದು ದಿನ ಪ್ರಾರ್ಥನೆ ಮಾಡುವಾಗ ಶಿವ ಪ್ರತ್ಯಕ್ಷನಾಗುತ್ತಾನೆ. ಆಗ ಅರ್ಜುನ ತನ್ನ ಮತ್ತು ಭೀಮನ ನಡುವೆ ನಿಮ್ಮ ಉತ್ತಮ ಭಕ್ತ ಯಾರು ಎಂದು…

Read More

ಗೌರಿ ಗಣೇಶ ಮೂರ್ತಿಗಳನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಿ ಶ್ರದ್ಧ ಭಕ್ತಿಯಿಂದ  ವಿಸರ್ಜನೆ 

ವಿಜಯ ದರ್ಪಣ ನ್ಯೂಸ್… ಗೌರಿ ಗಣೇಶ ಮೂರ್ತಿಗಳನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಿ ಶ್ರದ್ಧ ಭಕ್ತಿಯಿಂದ  ವಿಸರ್ಜನೆ  ತಾಂಡವಪುರ ಸೆಪ್ಟೆಂಬರ್ 16 ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದ ಬೀಚಾಳಮ್ಮ ದೇವಾಲಯದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗದವರು ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಶ್ರದ್ಧ ಭಕ್ತಿಯಿಂದ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವಿಶೇಷ ಪೂಜೆ ಸಲ್ಲಿಸಿ ಕಪಿಲ ನದಿಯಲ್ಲಿ ವಿಸರ್ಜನೆ ಮಾಡಲಾಯಿತು ಗ್ರಾಮದ ವಿನಾಯಕ ಗೆಳೆಯರ…

Read More