ವಿಷಕಾರಿ ಜನರೊಂದಿಗೆ ವ್ಯವಹರಿಸುವುದು ಹೇಗೆ?
ವಿಜಯ ದರ್ಪಣ ನ್ಯೂಸ್… ವಿಷಕಾರಿ ಜನರೊಂದಿಗೆ ವ್ಯವಹರಿಸುವುದು ಹೇಗೆ? ಇಂದು ಬಹುತೇಕರ ಅಂಬೋಣ, ನನ್ನ ಸರಳ ಸ್ವಭಾವ ನನ್ನ ಬಲಹೀನತೆ ಆಗಿದೆ ಎಂಬುದು. ಪ್ರಪಂಚದಲ್ಲಿ ನೀರಿಗಿಂತ ಸರಳ ಯಾವುದೂ ಇಲ್ಲ. ಆದರೆ ಅದರ ರಭಸಕ್ಕೆ ಎಲ್ಲವನ್ನೂ ಸೋಲಿಸುವ ಸಾಮರ್ಥ್ಯವಿದೆ ಎನ್ನುವ ಮಾತನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ವಾಸ್ತವದಲ್ಲಿ ಸಮಾಜ ಕಠಿಣ ಜನರಿಂದ ಕೂಡಿದೆ. ಕೆಲವರು ಪರೀಕ್ಷಿಸುತ್ತಾರೆ. ಕೆಲವರು ಹಿಂಡುತ್ತಾರೆ. ಇನ್ನೂ ಕೆಲವರು ಜೀವನವನ್ನು ಇನ್ನಷ್ಟು ಕಠಿಣ ಮಾಡಲೆಂದೇ ಇರುತ್ತಾರೆ. ವಿಚಿತ್ರ ಸತ್ಯವೆಂದರೆ ಅವರೆಲ್ಲ ನಮ್ಮ ಬದುಕಿನಲ್ಲಿ ನಮ್ಮ…
