ಬಾಯ್ಲರ್ ನೀರು ಸ್ಫೋಟಗೊಂಡು ಸುಟ್ಟುಹೋದ ದೇಹ ಕಾರ್ಖಾನೆ ಯಿಂದ ಸಿಗದ ಪರಿಹಾರ, ಕುಟುಂಬ ಹಾಗೂ ಕಾರ್ಮಿಕರಿಂದ ಪ್ರತಿಭಟನೆ
ವಿಜಯ ದರ್ಪಣ ನ್ಯೂಸ್…
ಬಾಯ್ಲರ್ ನೀರು ಸ್ಫೋಟಗೊಂಡು ಸುಟ್ಟುಹೋದ ದೇಹ ಕಾರ್ಖಾನೆ ಯಿಂದ ಸಿಗದ ಪರಿಹಾರ, ಕುಟುಂಬ ಹಾಗೂ ಕಾರ್ಮಿಕರಿಂದ ಪ್ರತಿಭಟನೆ

ತಾಂಡವಪುರ ನವಂಬರ್ 24 ಮೈಸೂರು ಜಿಲ್ಲೆ, ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ನೆಸ್ಲೆ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬನಿಗೆ ಬಾಯ್ಲರ್ ಸ್ಫೋಟಗೊಂಡು ದೇಹದ ಬಹುತೇಕ ಭಾಗ ಸುಟ್ಟು ಕರಕಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾರ್ಮಿಕನ ಕುಟುಂಬಸ್ಥರು ಹಾಗೂ ಕಾರ್ಮಿಕರು ಕಂಪನಿಯ ಮುಂದೆ ಪ್ರತಿಭಟನೆ ನಡೆಸಿದರು
ಕಳೆದ ಒಂದು ವರ್ಷಗಳ ಹಿಂದೆ ನಂಜನಗೂಡಿನ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ನೆಸ್ಲೆ ಕಾರ್ಖಾನೆಯಲ್ಲಿ ಬಾಯ್ಲರ್ ನೀರು ಸ್ಫೋಟಗೊಂಡು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ತಾಲ್ಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಹದಿನಾರು ಮೊಳೆ ಗ್ರಾಮದ ಚಂದ್ರು ಎಂಬ ಕಾರ್ಮಿಕನ ದೇಹದ ಬಲ ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡ ಕಾರ್ಮಿಕನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಕಾರ್ಮಿಕನ ದೇಹವನ್ನು ಸರ್ಜರಿ ಮಾಡಿದ ಮಾಡಿದ ಪರಿಣಾಮ ಇನ್ನು ಗಂಭೀರ ಸ್ಥಿತಿಯಲ್ಲಿ ಕಾರ್ಮಿಕ ನರಳಾಡುತ್ತಿದ್ದಾನೆ.
ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿರುವ ದೆಸೆಯಿಂದ ಗಂಭೀರ ಗಾಯಗೊಂಡಿರುವ ಕಾರ್ಮಿಕ ಚಂದ್ರು ಎಂಬಾತನ ಪತ್ನಿಗೆ ನೆಸ್ಲೆ ಕಾರ್ಖಾನೆಯಲ್ಲಿ ಖಾಯಂ ಹುದ್ದೆ ನೀಡಬೇಕು ಎಂದು ಬೇಡಿಕೆ ಇಡಲಾಗಿತ್ತು. ನೆಸ್ಲೆ ಕಾರ್ಖಾನೆಯ ಸಿಬ್ಬಂದಿಗಳು ಖಾಯಂ ಹುದ್ದೆ ನೀಡುತ್ತೇವೆ ಎಂದು ಒಂದು ವರ್ಷಗಳ ಕಾಲ ಇಂದು ನಾಳೆ ಎಂದು ದಿನ ದೂಡುತ್ತಿದ್ದೂ, ಕಾರ್ಖಾನೆಯ ಸಿಬ್ಬಂದಿಗಳು ಮತ್ತು ಮಾಲೀಕರ ಉಡಾಫೆ ವರ್ತನೆಯಿಂದ ಬೇಸತ್ತು, ಸೋಮವಾರ ಕಾರ್ಖಾನೆಯ ಮುಂಭಾಗದಲ್ಲಿ ನೊಂದ ಕುಟುಂಬ ಹಾಗೂ ಗುತ್ತಿಗೆ ಕಾರ್ಮಿಕರು ಅನಿರ್ದಿಷ್ಟ ಅವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ. ನೆಸ್ಲೆ ಕಾರ್ಖಾನೆಯ ಸಿಬ್ಬಂದಿಗಳು ಮತ್ತು ಮಾಲೀಕರು ನೀಡಿದ ಕಿರುಕುಳವನ್ನು ವ್ಯಕ್ತಪಡಿಸಿ ಕಣ್ಣೀರು ತೋಡಿಕೊಂಡರು.
ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ನಾವು ನೊಂದಿದ್ದೇವೆ. ಕಾರ್ಖಾನೆಯ ಮಾಲೀಕರು ಮತ್ತು ಸಿಬ್ಬಂದಿಗಳು ನಮಗೆ ನ್ಯಾಯ ಕೊಡಿ,ಇಲ್ಲವೇ ವಿಷ ಕೊಡಿ, ಇಲ್ಲೇ ಕುಡಿದು ನಮ್ಮ ಕುಟುಂಬ ಸಾಮೂಹಿಕವಾಗಿ ಸಾವನ್ನಪ್ಪುತ್ತೇವೆ ಎಂದು ನ್ಯಾಯಕ್ಕಾಗಿ ಆಗ್ರಹಿಸಿದರು. ಬಳಿಕ ಕಾರ್ಖಾನೆ ಆಡಳಿತ ಮಂಡಳಿ ನೊಂದ ಕುಟುಂಬದವರಿಗೆ ಮಾತುಕತೆ ನಡೆಸಿದರು. ಆದರೆ ಮಾತುಕತೆ ವಿಫಲವಾದ ಹಿನ್ನೆಲೆ ಕಾರ್ಮಿಕರು ಹಾಗೂ ಕುಟುಂಬಸ್ಥರು ಆನಿರ್ದಿಷ್ಟ ಪ್ರತಿಭಟನೆಗೆ ಮುಂದಾಗಿದ್ದಾರೆ.
