ಕಪಿಲಾ ನದಿ ಪ್ರವಾಹಕ್ಕೆ ತಡೆಗೋಡೆ ಕಟ್ಟಲು ಅನುದಾನಕ್ಕೆ ಡಿಸಿಎಂ ಗೆ ಮನವಿ : ಶಾಸಕ ಧ್ರುವ ನಾರಾಯಣ್
ವಿಜಯ ದರ್ಪಣ ನ್ಯೂಸ್….
ಕಪಿಲಾ ನದಿ ಪ್ರವಾಹಕ್ಕೆ ತಡೆಗೋಡೆ ಕಟ್ಟಲು ಅನುದಾನಕ್ಕೆ ಡಿಸಿಎಂ ಗೆ ಮನವಿ : ಶಾಸಕ ಧ್ರುವ ನಾರಾಯಣ್

ತಾಂಡವಪುರ ಜನವರಿ 09 : ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹುಲ್ಲಹಳ್ಳಿ ಹೋಬಳಿ ವ್ಯಾಪ್ತಿಯ ಶ್ರೀ ಮಹದೇವತಾತ ಅವರ ಐಕ್ಯಸ್ಥಳವಾದ ಶ್ರೀ ಸಂಗಮ ಕ್ಷೇತ್ರದಲ್ಲಿ, ಕಪಿಲಾ ನದಿ ಹಾಗೂ ನುಗು ನದಿಯಿಂದ ಉಂಟಾಗುವ ಪ್ರವಾಹವನ್ನು ತಡೆಗಟ್ಟುವ ಉದ್ದೇಶದಿಂದ ರಕ್ಷಣಾತ್ಮಕ ತಡೆಗೋಡೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ವೇಳೆ ಶ್ರೀ ಸದ್ಗುರು ಮಹದೇವ ತಾತಾನ ಗದ್ದುಗೆಯ ಭಕ್ತ ಮಂಡಳಿ(ರಿ.) ಐಕ್ಯಸ್ಥಳ ಸಂಗಮ ಕ್ಷೇತ್ರದ ಅಧ್ಯಕ್ಷ ಹೆಚ್.ವಿ. ಶಿವರಾಜಪ್ಪ ಟ್ರಸ್ಟಿನ ನಿರ್ದೇಶಕರು ಹಾಗೂ ಪಿ.ಎಲ್.ಡಿ ಬ್ಯಾಂಕ್ ನಂಜನಗೂಡಿನ ಅಧ್ಯಕ್ಷ ಹೆಚ್.ಕೆ. ಚನ್ನಪ್ಪ , ಹೆಚ್.ಎಂ. ಕೆಂಡಗಣ್ಣಪ್ಪ ಕಾರ್ಯದರ್ಶಿಗಳು ನಂದೀಶ್ ಕುಮಾರ್ , ಉಪಾಧ್ಯಕ್ಷರು ಶಿವನಾಗಪ್ಪ ಖಜಾಂಜಿ ಮಹೇಶ್ ಸಹಕಾರ್ಯದರ್ಶಿ ಸಂಗರಾಜು ಉಪಸ್ಥಿತರಿದ್ದರು
ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ರಾಮಯ್ಯ ಗೆ ಶುಭಾಶಯ ಕೋರಿದ ಶಾಸಕ ಧ್ರುವನಾರಾಯಣ್

ತಾಂಡವಪುರ ಜನವರಿ 09 : ನೂತನ ಹೊಸ ವರ್ಷದ ಪ್ರಯುಕ್ತ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ರವರು ವಿಧಾನ ಪರಿಷತ್ ಸದಸ್ಯ ಡಾಕ್ಟರ್ ಯತಿಂದ್ರ ಸಿದ್ರಾಮಯ್ಯನವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ನೂತನ 2026ನೇ ವರ್ಷದ ಪ್ರಯುಕ್ತ ಅವರಿಗೆ ಹೂಗುಚ್ಛ ನೀಡಿ ಶುಭಶಕೋರಿ ಇಬ್ಬರು ನಾಯಕರು ಉಭಯ ಕುಸುಮಪರಿ ವಿಚಾರಿಸಿ ಶುಭಾಶಯ ವಿನಿಮಯ ಮಾಡಿಕೊಂಡರು
ಇಬ್ಬರು ಯುವನಾಯಕ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮತ್ತು ಕತೆ ನಡೆಸಿ ನೂತನ ವರ್ಷದ ಶುಭಾಶಯ ಹೇಳುವ ಮೂಲಕಇಬ್ಬರು ನಾಯಕರುಗಳು ವಿನಿಮಯ ಮಾಡಿಕೊಂಡು ನೂತನ ಹೊಸ ವರ್ಷದಲ್ಲಿ ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಮತ್ತು ಮೂಲಭೂತ ಸೌಲಭ್ಯಗಳು ಜೊತೆಗೆ ಪಕ್ಷ ಸಂಘಟನೆ ಕುರಿತು ಸುದೀರ್ಘವಾಗಿ ಮಾತುಕತೆ ನಡೆಸಿದರು ವರುಣ ವಿಧಾನಸಭಾ ಕ್ಷೇತ್ರ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರ ಎರಡು ಕ್ಷೇತ್ರಗಳ ಗ್ರಾಮಗಳು ನಂಜನಗೂಡು ತಾಲ್ಲೂಕಿಗೆ ಸೇರಿದ್ದು , ಈ ಎಲ್ಲಾ ಗ್ರಾಮಗಳ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲು ನಾವು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಣ ಎಂದು ಇದೆ ವೇಳೆ ಇಬ್ಬರು ನಾಯಕರುಗಳು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾವೇರಪ್ಪ ಹಾಗೂ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ ಬಸವರಾಜ್ ರವರು ಹಾಗೂ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು
ಶ್ರೀಕಂಠೇಶ್ವರನ ದರ್ಶನ ಪಡೆದ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಧೀಂದ್ರ

ತಾಂಡವಪುರ ಜನವರಿ 08 :ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಧೀಂದ್ರ ಸೋಮವಾರ ನಂಜನಗೂಡು ವಿಧಾನಸಭಾ ಕ್ಷೇತ್ರದ ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ಭೇಟಿ ನೀಡಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಚಾಮರಾಜನಗರ ಜಿಲ್ಲೆಗೆ ಕಾರ್ಯನಿಮಿತ್ತ ತೆರಳುತ್ತಿದ್ದ ಹಿನ್ನೆಲೆ, ಪ್ರಸಿದ್ಧ ಧಾರ್ಮಿಕ ಕ್ಷೇತ್ರ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರಸ್ವಾಮಿಯ ದರ್ಶನ ಪಡೆಯಲು ಆಗಮಿಸಿದ್ದೇನೆ. ಇಲ್ಲಿಗೆ ಬಂದಿರುವುದು ಬಹಳ ಖುಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೈವಿಕ ಇಂಧನದ ಬಗ್ಗೆ ಸಾಕಷ್ಟು ಅಭಿವೃದ್ಧಿಗೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಬಯೋ ಡೀಸೆಲ್ ಹೆಚ್ಚು ಉತ್ಪಾದನೆ ಮಾಡುವ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಿದೆ. ರಾಜ್ಯದ ಜನರಿಗೆ ನೈಸರ್ಗಿಕವಾಗಿ ಬಯೋ ಡೀಸಲ್ ಜೊತೆಗೆ ಬಯೋ ಗ್ಯಾಸ್ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸಿಎಂ ಕನಸು ನನಸು ಮಾಡಲು ನಿರಂತರ ಪ್ರಯತ್ನ ಮಾಡುತಿದ್ದೇವೆ ಎಂದರು.
