ಜನಪದ-ಜಾನಪದ, ಜಾನಪದ ಅಧ್ಯಯನ ಮತ್ತು ಕ್ಷೇತ್ರಕಾರ್ಯ ಕೃತಿ ಬಿಡುಗಡೆ

ವಿಜಯ ದರ್ಪಣ ನ್ಯೂಸ್ 
ಮೈಸೂರು ನವೆಂಬರ್ 28:ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಇಫ್ರೋ ಜಾನಪದ ಮಹಾವಿದ್ಯಾಲಯ ಮುದ್ದುಶ್ರೀ ದಿಬ್ಬ, ಕೆರೆಮೇಗಳದೊಡ್ಡಿ ಹಾಗೂ ಜಾನಪದ ವಿಭಾಗ ಮಹಾರಾಜ ಕಾಲೇಜು ಸಂಯುಕ್ತವಾಗಿ ಬೆಂಗಳೂರಿನ  ಪ್ರಗತಿ ಗ್ರಾಫಿಕ್ಸ್ ಪ್ರಕಟಿಸಿರುವ ಪ್ರೊ. ವ.ನಂ. ಶಿವರಾಮು ಅವರ `ಜನಪದ-ಜಾನಪದ, ಜಾನಪದ ಅಧ್ಯಯನ ಮತ್ತು ಕ್ಷೇತ್ರಕಾರ್ಯ’ ಕೃತಿ ಬಿಡುಗಡೆ ಕಾರ್ಯಕ್ರಮವನ್ನು 29ನೇ ನವೆಂಬರ್ 2023ರ ಬುಧವಾರ ಹಮ್ಮಿಕೊಂಡಿದೆ. ಕಾರ್ಯಕ್ರಮವು ಮೈಸೂರಿನ ಮಹಾರಾಜ ಕಾಲೇಜು ಜ್ಯೂನಿಯರ್ ಬಿ.ಎ. ಹಾಲ್‌ನಲ್ಲಿ ನಡೆಯುವುದು.

ಸಂಸ್ಕೃತಿ ಚಿಂತಕರು, ವಿಶ್ರಾಂತ ಪ್ರಾಧ್ಯಾಪಕರು ಆದ ಹಿ.ಶಿ. ರಾಮಚಂದ್ರೇಗೌಡ ಕೃತಿ ಬಿಡುಗಡೆ ಮಾಡುವರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅತಿಥಿಗಳಾಗಿ ಪಾಲ್ಗೊಳ್ಳುವರು. ಕುಪ್ಪಂ ಆಂಧ್ರಪ್ರದೇಶದ ದ್ರಾವಿಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎಂ.ಎನ್. ವೆಂಕಟೇಶ ಕೃತಿ ಪರಿಚಯ ಮಾಡಿಸುವರು.

ಮಹಾರಾಜ ಕಾಲೇಜು ಆಡಳಿತಾಧಿಕಾರಿ ಪ್ರೊ ವಿ. ಷಣ್ಮುಗಂ, ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ, ಜಾನಪದ ವಿಭಾಗ ಮುಖ್ಯಸ್ಥೆ ಡಾ. ಎಚ್.ಆರ್. ಚೇತನ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ. ಎಚ್. ಸೋಮಶೇಖರಪ್ಪ ಅಧ್ಯಕ್ಷತೆ ವಹಿಸುವರು. ಪ್ರಾಧ್ಯಾಪಕಿ ಡಾ. ವಿಜಯಲಕ್ಷಿö್ಮ ಮನಾಪುರ ಕಾರ್ಯಕ್ರಮ ಸಂಯೋಜಿಸುವರು. ನಮ್ಮೊಡನೆ ಮೈಸೂರು ವಿ.ವಿ. ಕುವೆಂಪು ಕನ್ನಡ ಅಧ್ಯಯನ ಜಾನಪದ ವಿಭಾಗ ಮತ್ತು ಕನ್ನಡ ವಿಭಾಗ, ಮಹಾರಾಜ ಕಾಲೇಜು ಕನ್ನಡ ವಿಭಾಗದ ವಿದ್ಯಾರ್ಥಿಗಳು, ಸಂಶೋಧಕರು ಪ್ರಾಧ್ಯಾಪಕರು ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.