ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಬೇಕು: ಸಂಸದ ಪ್ರತಾಪ್ ಸಿಂಹ

ವಿಜಯ ದರ್ಪಣ ನ್ಯೂಸ್.

ಮಡಿಕೇರಿ ಜನವರಿ 28:ಕೊಡಗಿಗೆ ಏನು ಕೊಡುಗೆ ನೀಡಿದ್ದೀರಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಸಿಂಹ ತಿರುಗೇಟು.

ಮಡಿಕೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಿಮ್ಮ ಮಾತನ್ನು ನಿಮ್ಮೂರಾದ ಮೈಸೂರಿನ ಜನರೇ ನಂಬೋದಿಲ್ಲ ಸಿದ್ದರಾಮಯ್ಯನವರೇ,

ದೇಶಪ್ರೇಮಿಗಳಾದ ಕೊಡಗಿನ ಜನ ನಂಬುತ್ತಾರೆಯೇ ಎಂದು ವ್ಯಂಗ್ಯವಾಡಿದ ಪ್ರತಾಪ್
ಬಿಜೆಪಿ ಸಕಾ೯ರದ ಯೋಜನೆಗಳು, ಬಿಜೆಪಿ ನೀಡಿದ ಅನುದಾನಗಳನ್ನೇ ನೀವು ನೀಡಿದ್ದು ಎಂದು ಸುಳ್ಳಿನಿಂದ ಬಿಂಬಿಸಿ ಉದ್ಘಾಟಿಸಿ, ಭೂಮಿ ಪೂಜೆ ಮಾಡಲು ನಾಚಿಕೆಯಾಗೋದಿಲ್ಲವೇ ಎಂದು ಸಿದ್ದರಾಮಯ್ಯ, ಕಾಂಗ್ರೆಸ್ ಸಕಾ೯ರದ ವಿರುದ್ದ ಹರಿಹಾಯ್ದ ಪ್ರತಾಪ್ ಸಿಂಹ. ಕೊಡಗಿನ ಜನರಿಗೆ ಟೋಪಿ ಹಾಕಲು ಸಿದ್ದರಾಮಯ್ಯ ಕೊಡಗಿಗೆ ಬಂದಿದ್ದರು ಎಂದು ಹೇಳಿದರು 

ನಾನು ಮಡಿಕೇರಿಗೆ ಕ್ರಿಟಿಕಲ್ ಕೇರ್ ಸೆಂಟರ್ ತಂದಿದ್ದೇನೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗುತ್ತಿದೆ. ಜಿಲ್ಲೆಗೆ 63 ಮೊಬೈಲ್ ಟವರ್ ನೀಡಿದ್ದೇನೆ. ಪ್ರಧಾನಿ ಮಂತ್ರಿಗಳ ಯೋಜನೆಯಡಿ 83 ಕಿ.ಮೀ. ಸುಸಜ್ಜಿತ ರಸ್ತೆ ನಿಮಿ೯ಸಿದ್ದೇನೆ – ಕುಡಿಯುವ ನೀರಿನ ಯೋಜನೆಗಳು ಜಾರಿಯಾಗಿದೆ ,ಸಾಕಷ್ಟು ಯೋಜನೆಗಳು ಸಂಸದರ ನಿಧಿಯಿಂದ ಬಳಕೆಯಾಗಿದೆ.

ಕೊಡಗಿನ ಶಾಸಕರು ತಮ್ಮ ದೂತರಿಂದ ಹೇಳಿಕೆ ಕೊಡಿಸುವ ಸಣ್ಣ ಬುದ್ದಿಯ ರಾಜಕೀಯ ನಿಲ್ಲಿಸಲಿ .
ಕೊಡಗಿಗೆ ತಮ್ಮ ಪ್ರಯತ್ನದಿಂದಲೇ ಅನುದಾನ ತರಲಿ – ಸಂಸದ ಸಲಹೆ
ಕೊಡಗಿನಲ್ಲಿ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಅನುದಾನ ನೀಡತೊಡಗಿದ್ದೇ ಬಿಜೆಪಿ ಸಕಾ೯ರ
ತಮ್ಮದೇ ಎಂ.ಎಲ್ ಸಿ ಇದ್ದರೂ ಕಾಂಗ್ರೆಸ್ ಹಾಕಿ ಪಂದ್ಯಾವಳಿಗೆ ಅನುದಾನ ನೀಡಿರಲಿಲ್ಲ ಎಂದು ಸಂಸದರ ಆರೋಪ. ಕೊಡವ ಅಭಿವೖದ್ದಿ ನಿಗಮಕ್ಕೆ 10 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. – ಹೀಗಿದ್ದರೂ ಅನುದಾನ ಇಲ್ಲ ಎಂದು ಸುಳ್ಳು ಹೇಳುವ ಕೆಲಸವನ್ನು ಶಾಸಕರು ಮಾಡಿದ್ದಾರೆ.

ಬಿಜೆಪಿ ಭೂಮಿಪೂಜೆ ಮಾಡಿದ ಯೋಜನೆಗಳಿಗೇ ಸಿದ್ದರಾಮಯ್ಯ, ಶಾಸಕರು ಮತ್ತೆ ಮತ್ತೆ ಭೂಮಿಪೂಜೆ ಮಾಡುತ್ತಿರುವುದು ನಾಚಿಕೆಗೋಡು.

ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ತನ್ನದಲ್ಲದ ಯೋಜನೆಗಳ ಕ್ರೆಡಿಟ್ ತಾನು ತೆಗೆದುಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಮಂಥರ್ ಗೌಡ ಶ್ಲಾಘನೀಯ – ಶಾಸಕರ ಬಗ್ಗೆ ಸಂಸದರ ಮೆಚ್ಚುಗೆ.

14 ಬಜೆಟ್ ನೀಡಿರುವ ಸಿದ್ದರಾಮಯ್ಯ ಸುಳ್ಳು ರಾಮಯ್ಯ ಆಗಿದ್ದಾರೆ. ಬರೀ ಸುಳ್ಳು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ – ಸಿಂಹ ಟೀಕೆ.
ಸೂಯ೯ನಿಗೂ ಕೆಲವೊಮ್ಮೆ ಗ್ರಹಣ ಹಿಡಿಯುತ್ತದೆ. ನಂತರ ಪ್ರಜ್ವಲಿಸುವ ಸೂಯ೯ ಕಾಣಿಸುತ್ತಾನೆ. ಅಂತೆಯೇ , ಕೊಡಗಿನಲ್ಲಿಯೂ ಬಿಜೆಪಿಗೆ ತಗುಲಿದ್ದ ಗ್ರಹಣ ದೂರವಾಗಿದೆ. 36 ವಿಎಸ್ ಎಸ್ ಎನ್ ಗಳ ಪೈಕಿ 32 ರಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬಂದಿರುವುದು ಬಿಜೆಪಿಯನ್ನು ಕೊಡಗಿನ ಜನತೆ ಬೆಂಬಲಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ .

ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನ ಬೇಕಿದೆ. 2026ಕ್ಕೆ ಲೋಕ‌ಸಭಾ ಕ್ಷೇತ್ರ ಮರುವಿಂಗಡಣೆ ಆಗಲಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕ್ಷೇತ್ರಗಳು ಜಾಸ್ತಿಯಾಗುತ್ತವೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ​​ ಹೇಳಿದರು.

 ಮೈಸೂರಿನಲ್ಲಿ ಜನ ಸಂಖ್ಯೆ ಜಾಸ್ತಿ ಆಗುತ್ತಿದೆ. ಕೊಡಗು-ಮೈಸೂರು ಜೊತೆಯಲ್ಲೇ ಇರುತ್ತೆ ಅಂತೇನಿಲ್ಲ. ಕೊಡಗು ಬಹಳ ವಿಶಿಷ್ಟ ಸಂಸ್ಕೃತಿ ಇರುವ ಜಿಲ್ಲೆ. ಇದನ್ನು ರಕ್ಷಿಸುವ ದೃಷ್ಟಿಯಿಂದ ಪ್ರತ್ಯೇಕ ಲೋಕಸಭಾ ಸ್ಥಾನ ಬೇಕು. ಈ ವಿಚಾರದಲ್ಲಿ‌ ನಾನು ಕೊಡಗಿನ ಜನರ ಜೊತೆ ಇದ್ದೇನೆ ಎಂದರು.

ಕಳೆದ ಏಳು ತಿಂಗಳಿನಲ್ಲಿ ಸಿದ್ದರಾಮಯ್ಯ ಏನೂ ಕಡಿದು ಕಟ್ಟೆ ಹಾಕಿಲ್ಲ. ಸರ್ಕಾರದಿಂದ ಏಳು ತಿಂಗಳಲ್ಲಿ 7 ರೂಪಾಯಿನೂ ಕೊಡಗಿಗೆ ತಂದಿಲ್ಲ. ಮೊನ್ನೆಯಷ್ಟೇ ಅಭಿವೃದ್ಧಿ ಯೋಜನೆಗಳಿಗೆ ಸಿಎಂ ಚಾಲನೆ ನೀಡಿದ್ದಾರೆ. ಅವೆಲ್ಲವೂ ಕೇಂದ್ರ ಸರ್ಕಾರದ ಯೋಜನೆಗಳು. ಮಂಥರ್ ಗೌಡರನ್ನು ನೋಡಿ ಶಾಸಕ ಪೊನ್ನಣ್ಣ ಕಲಿಯಬೇಕು. ತಾವು ಮಾಡದ‌ ಕೆಲಸಕ್ಕೆ ಮಂಥರ್ ಗೌಡ ಕ್ರೆಡಿಟ್ ತೆಗೆದುಕೊಳ್ಳಲ್ಲ ಎಂದು ವಾಗ್ದಾಳಿ ಮಾಡಿದರು.

146 ಕೋಟಿ ರೂ. ಯೋಜನೆಗೆ ಕಳೆದ‌ ಫೆಬ್ರವರಿಯಲ್ಲಿ ಹಣ ಬಿಡುಗಡೆಯಾಗಲಿದೆ. ಇದು ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ತಂದಿರುವ ಯೋಜನೆ ಎಂದು ಯೋಜನೆಗಳ ದಾಖಲೆ ಬಿಡುಗಡೆ ಮಾಡಿದರು.

ವಿರಾಜಪೇಟೆ ಕ್ಷೇತ್ರದಲ್ಲಿ ಈಗ ಆಗುತ್ತಿರುವ ಅಬೀವೃದ್ಧಿ ಕೆಲಸಗಳು ಬೋಪಯ್ಯ ತಂದಿರುವುದು. ಅಮೃತ್‌-1, ಅಮೃತ- 2 ಕೇಂದ್ರ-ರಾಜ್ಯ ಸಹಭಾಗಿತ್ವದಲ್ಲಿ ಬೊಮ್ಮಾಯಿ ಸರ್ಕಾರ ಅನುದಾನ ನೀಡಿರುವುದು ಎಂದು ತಿಳಿಸಿದರು.