ಸರ್ಕಾರಿ ಜಮೀನುಗಳ ಮಂಜೂರಿ ನಡಾವಳಿ ಪುಸ್ತಕ ಕಳವು: ಗ್ರಾಮ ಸಹಾಯಕನ ಬಂಧನ

ವಿಜಯ ದರ್ಪಣ ನ್ಯೂಸ್…. ಸರ್ಕಾರಿ ಜಮೀನುಗಳ ಮಂಜೂರಿ ನಡಾವಳಿ ಪುಸ್ತಕ ಕಳವು: ಗ್ರಾಮ ಸಹಾಯಕನ ಬಂಧನ ಶಿಡ್ಲಘಟ್ಟ : ತಾಲ್ಲೂಕು ಕಚೇರಿಯ ಅಭಿಲೇಖಾಲಯದಲ್ಲಿ 1994-95 ನೇ ಸಾಲಿನ ಸರ್ಕಾರಿ ಜಮೀನುಗಳ ಮಂಜೂರಿ ನಡಾವಳಿ ವಹಿಯು ಕಳವುವಾಗಿರುವುದು ಕಂಡು ಬಂದಿದ್ದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಬಿ.ಎನ್.ಸ್ವಾಮಿ ಅವರು ನೀಡಿದ್ದ ದೂರನ್ನು ಆಧರಿಸಿ, ಬಶೆಟ್ಟಿಹಳ್ಳಿ ಹೋಬಳಿ ಅಮ್ಮಗಾರಹಳ್ಳಿ ಕಂದಾಯ ವೃತ್ತದಲ್ಲಿ ಹೆಚ್ಚುವರಿ ಗ್ರಾಮ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಜಿ.ಗಂಗಾಧರ್ ಎಂಬಾತನನ್ನು ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಬಗ್ಗೆ ವರದಿಯಾಗಿದೆ. ತಾಲ್ಲೂಕಿನಲ್ಲಿ…

Read More

ಶ್ರೀದೌಪದಮ್ಮದೇವಿಯ ಹೂವಿನ ಕರಗ ಮಹೋತ್ಸವ

ವಿಜಯ ದರ್ಪಣ ನ್ಯೂಸ್….. ಶ್ರೀದೌಪದಮ್ಮದೇವಿಯ ಹೂವಿನ ಕರಗ ಮಹೋತ್ಸವ ಶಿಡ್ಲಘಟ್ಟ : ನಗರದ ಶ್ರೀಗಂಗಮ್ಮ ದೇವಾಲಯದಲ್ಲಿ ಆರನೇ ವರ್ಷದ ಶ್ರೀದೌಪದಮ್ಮದೇವಿಯ ಹೂವಿನ ಕರಗ ಮಹೋತ್ಸವವು ವೈಭವದೊಂದಿಗೆ ನೆರವೇರಿತು. ನಗರದಾದ್ಯಂತ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಭಕ್ತರು ಸೇರಿ ಕರಗ ಮಹೋತ್ಸವವನ್ನು ಕಣ್ತುಂಬಿಕೊಂಡರು. ಮುಳಬಾಗಿಲಿನ ನಾಗರಾಜ್ ಅವರು ತಲೆ ಮೇಲೆ ಹೂವಿನ ಕರಗ ಹೊತ್ತು ಭಕ್ತಿಯಲ್ಲಿ ಮುಳುಗಿ ಕುಣಿದರೆ,ಅವರ ಸುತ್ತಲೂ ನಿಂತಿದ್ದ ಭಕ್ತರೂ ತಮ್ಮ ಸ್ಥಾನದಲ್ಲೇ ಕುಣಿದು ಉಲ್ಲಾಸ ವ್ಯಕ್ತಪಡಿಸಿದರು. ತಮಟೆಯ ಸದ್ದಿನಲ್ಲಿ ಹಾಗು ಕರಗದ ನೃತ್ಯ ಭಕ್ತರನ್ನು…

Read More

ಸಂಭ್ರಮದಿಂದ ನಡೆದ ಶ್ರೀ ಗಂಗಾದೇವಿ ಅಮ್ಮನವರ ಮರಿ ಜಾತ್ರೆ

ವಿಜಯ ದರ್ಪಣ ನ್ಯೂಸ್.. ಶಿಡ್ಲಘಟ್ಟ: ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಗ್ರಾಮದೇವತೆ ಶ್ರೀಗಂಗಾದೇವಿ ಅಮ್ಮನವರ ಮರಿ ಜಾತ್ರೆಯು ಸಡಗರ ಸಂಭ್ರಮದಿಂದ ನೆರವೇರಿತು. ಜಾತ್ರೆ ಪ್ರಯುಕ್ತ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಿ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.ಗ್ರಾಮದ ಹೆಣ್ಣು ಮಕ್ಕಳು, ಮುತ್ತೈದೆಯರು ತಂಬಿಟ್ಟು ಆರತಿಯನ್ನು ತಲೆ ಮೇಲೆ ಹೊತ್ತು ಊರ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಾಲಯದ ಸುತ್ತಲೂ ಪ್ರದಕ್ಷಿಣಿ ಹಾಕಿ ದೇವರಿಗೆ ಬೆಳಗಿದರು,ದೀಪೋ ತ್ಸವದಲ್ಲಿ ಮೇಲೂರು ಹಾಗೂ ಸುತ್ತಮುತ್ತಲಿನ…

Read More

ರೈತ ಮತ್ತು ಸೈನಿಕ ಇಬ್ಬರು ಕಣ್ಣುಗಳಿದ್ದಂತೆ: ಸೀಕಲ್ ಆನಂದಗೌಡ

ವಿಜಯ ದರ್ಪಣ ನ್ಯೂಸ್…. ರೈತ ಮತ್ತು ಸೈನಿಕ ಇಬ್ಬರು ಕಣ್ಣುಗಳಿದ್ದಂತೆ: ಸೀಕಲ್ ಆನಂದಗೌಡ ಶಿಡ್ಲಘಟ್ಟ : ದೇಶಕ್ಕೆ ಅನ್ನ ಕೊಡುವ ರೈತ ಮತ್ತು ದೇಶ ಕಾಯುವ ಸೈನಿಕ ಇಬ್ಬರು ಕಣ್ಣುಗಳಿದ್ದಂತೆ ಅವರಿಲ್ಲದ ದೇಶ, ಸಮಾಜವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಹಾಗಾಗಿ ರೈತರಿಂದಲೇ ಶೋಭಾ ಯಾತ್ರೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಬಿಜೆಪಿ ಮುಖಂಡ ಸೀಕಲ್ ಆನಂದಗೌಡ ತಿಳಿಸಿದರು. ನಗರದ ದಿ.ವೆಂಕಟರಾಯಪ್ಪ ಫ್ಯಾಕ್ಟರಿಯ ಆವರಣದಲ್ಲಿ ಹಸಿರುಸೇನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘದ ಕಚೇರಿಯಲ್ಲಿ ರೈತ ಮುಖಂಡರಿಗೆ ಶೋಭಾ ಯಾತ್ರೆಯ ಆಹ್ವಾನ…

Read More

ಸ್ವಸಹಾಯ ಸಂಘಗಳ ಉತ್ಪನ್ನಗಳ ವ್ಯಾಪಾರ ವಹಿವಾಟು ವ್ಯವಸ್ಥಿತವಾಗಿ ನಡೆಯುತ್ತಿಲ್ಲ : ಶಾಸಕ ಬಿಎನ್ ರವಿಕುಮಾರ್

ವಿಜಯ ದರ್ಪಣ ನ್ಯೂಸ್… ಸ್ವಸಹಾಯ ಸಂಘಗಳ ಉತ್ಪನ್ನಗಳ ವ್ಯಾಪಾರ ವಹಿವಾಟು ವ್ಯವಸ್ಥಿತವಾಗಿ ನಡೆಯುತ್ತಿಲ್ಲ : ಶಾಸಕ ಬಿಎನ್ ರವಿಕುಮಾರ್ ಶಿಡ್ಲಘಟ್ಟ : ಸ್ವ-ಸಹಾಯ ಸಂಘಗಳು ಕರಕುಶಲ ವಸ್ತುಗಳು, ತಿಂಡಿ,ಇನಿಸು ಹಾಗು ಗೃಹೋಪಯೋಗಿ ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಕೆಲಸದಲ್ಲಿ ತೊಡಗಿವೆ ಆದರೆ ಮಾರುಕಟ್ಟೆ ಮತ್ತು ತಂತ್ರಗಾರಿಕೆ ನೈಪುಣ್ಯತೆ ಕೊರತೆಯಿಂದ ವ್ಯಾಪಾರ -ವಹಿವಾಟು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಶಾಸಕ ಬಿ.ಎನ್.ರವಿಕುಮಾ‌ರ್ ತಿಳಿಸಿದರು. ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಚಿಕ್ಕಬಳ್ಳಾಪುರದ ಜ್ಞಾನೋದಯ ಗ್ರಾಮೀಣ ವಿದ್ಯಾ ಟ್ರಸ್ಟ್ ಹಾಗೂ ಸಂಜೀವಿನಿ…

Read More

ಬಿಜೆಪಿ ಪಕ್ಷದಿಂದ ನನ್ನನ್ನು ಕಡೆಗಣಿಸುವ ಪ್ರಯತ್ನ ನಡೆದಿದೆ: ಮಾಜಿ ಶಾಸಕ ಎಂ ರಾಜಣ್ಣ

ವಿಜಯ ದರ್ಪಣ ನ್ಯೂಸ್…. ಬಿಜೆಪಿ ಪಕ್ಷದಿಂದ ನನ್ನನ್ನು ಕಡೆಗಣಿಸುವ ಪ್ರಯತ್ನ ನಡೆದಿದೆ: ಮಾಜಿ ಶಾಸಕ ಎಂ ರಾಜಣ್ಣ ಶಿಡ್ಲಘಟ್ಟ : ಗ್ರಾಮ ಪಂಚಾಯತಿ ಚುನಾವಣೆ ವೇಳೆ ಬಿಜೆಪಿ ಬೆಂಬಲಿತ 53 ಸದಸ್ಯರ ಗೆಲುವಿಗೆ ಶ್ರಮಿಸಿದ್ದು ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ನನ್ನ ಕೊಡುಗೆ ಇದೆ ಸ್ಥಳೀಯವಾಗಿ ನನ್ನನ್ನು ಕಡೆಗಣಿಸುವ ಪ್ರಯತ್ನ ನಡೆಯುತ್ತಿದೆ .ಸದ್ಯ ಮೂಲ ಬಿಜೆಪಿಗರು ತಟಸ್ಥರಾಗಿಲ್ಲ ನಾನು ಸಹ ವಲಸಿಗ ಎಂದು ಮಾಜಿ ಶಾಸಕ ಎಂ.ರಾಜಣ್ಣ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು….

Read More

ವೈಭವದಿಂದ ನಡೆದ ಶ್ರೀವಾಸವಿ ಜಯಂತಿ 

ವಿಜಯ ದರ್ಪಣ ನ್ಯೂಸ್…. ವೈಭವದಿಂದ ನಡೆದ ಶ್ರೀವಾಸವಿ ಜಯಂತಿ ಶಿಡ್ಲಘಟ್ಟ : ನಗರದಲ್ಲಿ ಆರ್ಯವೈಶ್ಯ ಮಂಡಳಿ ಹಾಗೂ ಸಂಬಂಧಿತ ಸಹ ಸಂಸ್ಥೆಗಳ ಆಶ್ರಯದಲ್ಲಿ ಶ್ರೀವಾಸವಿ ಜಯಂತಿಯನ್ನು ವೈಭವದಿಂದ ಆಚರಿಸಲಾಯಿತು. ವಾಸವಿ ಮಹಿಳಾ ಮಂಡಳಿ ಮತ್ತು ಭಜನಾ ಮಂಡಳಿಯ ಸದಸ್ಯೆಯರು ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಾಗವಹಿಸಿದರು. ಆರು ತಿಂಗಳ ಮಗುವಿನಿಂದ ಎಂಟು ವರ್ಷವರೆಗೆ ಇರುವ ಬಾಲಿಕೆಯರಿಗೆ ಕನ್ಯಕಾ ಪೂಜೆ ನೆರವೇರಿಸಲಾಯಿತು, ವಾಸವಿ ಮಾತೆಯ ಚರಿತ್ರೆಯ ಪಠಣ, ಉಯ್ಯಾಲೆ ಉತ್ಸವ, ಪಂಚಾರತಿ ಕಾರ್ಯಕ್ರಮಗಳು ಭಕ್ತಿಭಾವದಿಂದ ತುಂಬಿದ್ದವು….

Read More

ಭಕ್ತಿ ಭಾವದಿಂದ ನಡೆದ “ಶ್ರೀ ಈರಲದೇವರು ಮತ್ತು ಕರಗದಮ್ಮದೇವಿ” ದೇವಾಲಯದ ಜೀರ್ಣೋದ್ಧಾರ, ಕುಂಭಾಭಿಷೇಕ ಮಹೋತ್ಸವ

ವಿಜಯ ದರ್ಪಣ ನ್ಯೂಸ್…. ಭಕ್ತಿ ಭಾವದಿಂದ ನಡೆದ “ಶ್ರೀ ಈರಲದೇವರು ಮತ್ತು ಕರಗದಮ್ಮದೇವಿ” ದೇವಾಲಯದ ಜೀರ್ಣೋದ್ಧಾರ, ಕುಂಭಾಭಿಷೇಕ ಮಹೋತ್ಸವ ಚಿಕ್ಕಬಳ್ಳಾಪುರ : ತಾಲ್ಲೂಕಿನ ಕಸಬಾ ಹೋಬಳಿ ಪಟ್ರೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಣಕನೂರು ಗ್ರಾಮದಲ್ಲಿ ನೆಲೆಸಿರುವ “ಶ್ರೀ ಈರಲದೇವರು ಮತ್ತು ಕರಗದಮ್ಮದೇವಿ” ದೇವಾಲಯದ ಜೀರ್ಣೋದ್ಧಾರ ಪುನಃಪ್ರತಿಷ್ಠಾಪನೆ, ನಾಗದೇವತಾ ನೂತನ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವವನ್ನು ಸಂಪ್ರದಾಯದಂತೆ ಭಕ್ತಿಭಾವದಿಂದ ಆಚರಿಸಲಾಯಿತು. ದೇವಾಲಯದ ವಕ್ಕಲು ಕುಟುಂಬದ ನಗರ ಹಾಗು ಗ್ರಾಮಗಳಾದ ಚಿಕ್ಕಬಳ್ಳಾಪುರ ತಾಲ್ಲೂಕಿನ,ಚಿಕ್ಕಬಳ್ಳಾಪುರ ನಗರ, ಅಣಕನೂರು ,ಮರಸನಹಳ್ಳಿ ,ಇನಪನಹಳ್ಳಿ, ರಾಮಚಂದ್ರಹೊಸೂರು,ಅರಿಕೆರೆ…

Read More

ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಪ್ತಿಹೊಸಹಳ್ಳಿ ಪ್ರಕಾಶ್ 

ವಿಜಯ ದರ್ಪಣ ನ್ಯೂಸ್….. ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಪ್ತಿಹೊಸಹಳ್ಳಿ ಪ್ರಕಾಶ್ ಶಿಡ್ಲಘಟ್ಟ : ತಾಲ್ಲೂಕಿನ ಆನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜಪ್ತಿಹೊಸಹಳ್ಳಿ ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಹಿತ್ತಲಹಳ್ಳಿ ವೆಂಕಟೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಬಿಸಿಎಂ ಎ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಜಪ್ತಿಹೊಸಹಳ್ಳಿ ಪ್ರಕಾಶ್ ಮಾತ್ರವೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಚುನಾವಣಾಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್ ,ಸಹಾಯಕರಾಗಿ ಪಿಡಿಓ ಕೆ. ಕಾತ್ಯಾಯಿನಿ ಕಾರ್ಯನಿರ್ವಹಿಸಿದರು. ಅಧ್ಯಕ್ಷರ…

Read More

ಕೆರೆ ಏರಿಯ ಮೇಲೆ ತಡೆಗೋಡೆ ನಿರ್ಮಿಸಲು ಆಗ್ರಹ 

ವಿಜಯ ದರ್ಪಣ ನ್ಯೂಸ್… ಕೆರೆ ಏರಿಯ ಮೇಲೆ ತಡೆಗೋಡೆ ನಿರ್ಮಿಸಲು ಆಗ್ರಹ ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆಯಿಂದ ವಿಜಯಪುರದ ಕಡೆಗೆ ಸಾಗುವ ಪ್ರಮುಖ ಹೆದ್ದಾರಿಯು ಭದ್ರನಕೆರೆಯ ಕಟ್ಡೆಯ ಮೇಲೆ ಹೋಗುತ್ತದೆ ಈ ರಸ್ತೆಯಲ್ಲಿ ಒಂದು ಬದಿಯಲ್ಲಿ ಮಾತ್ರ ಕಬ್ಬಿಣದ ಸರಳಿನಿಂದ ತಡೆಗೋಡೆ ನಿರ್ಮಿಸಲಾಗಿದ್ದು, ಮತ್ತೊಂದು ಬದಿ ಸರಳಿನ ತಡೆಗೋಡೆ ಇಲ್ಲದೇ ಇರುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿರುವುದು ವಾಹನ ಸವಾರರಲ್ಲಿ ಭಯದ ವಾತಾವರಣ ಮೂಡಿಸಿದೆ. ಸಂಬಂದಿಸಿದ ಇಲಾಖೆಯು ತಕ್ಷಣ ಕ್ರಮ ಕೈಗೊಂಡು ಶೀಘ್ರವಾಗಿ ತಡೆಗೋಡೆ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ….

Read More