ಸಂಭ್ರಮದಿಂದ ನಡೆದ ಶ್ರೀ ಗಂಗಾದೇವಿ ಅಮ್ಮನವರ ಮರಿ ಜಾತ್ರೆ
ವಿಜಯ ದರ್ಪಣ ನ್ಯೂಸ್.. ಶಿಡ್ಲಘಟ್ಟ: ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಗ್ರಾಮದೇವತೆ ಶ್ರೀಗಂಗಾದೇವಿ ಅಮ್ಮನವರ ಮರಿ ಜಾತ್ರೆಯು ಸಡಗರ ಸಂಭ್ರಮದಿಂದ ನೆರವೇರಿತು. ಜಾತ್ರೆ ಪ್ರಯುಕ್ತ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಿ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.ಗ್ರಾಮದ ಹೆಣ್ಣು ಮಕ್ಕಳು, ಮುತ್ತೈದೆಯರು ತಂಬಿಟ್ಟು ಆರತಿಯನ್ನು ತಲೆ ಮೇಲೆ ಹೊತ್ತು ಊರ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಾಲಯದ ಸುತ್ತಲೂ ಪ್ರದಕ್ಷಿಣಿ ಹಾಕಿ ದೇವರಿಗೆ ಬೆಳಗಿದರು,ದೀಪೋ ತ್ಸವದಲ್ಲಿ ಮೇಲೂರು ಹಾಗೂ ಸುತ್ತಮುತ್ತಲಿನ…
