ಬಿಬಿಎಂಪಿ ನೌಕರರ ಕನ್ನಡ ಸಂಘ 68ನೇ ಕರ್ನಾಟಕ ರಾಜ್ಯೋತ್ಸವ

ವಿಜಯ ದರ್ಪಣ ನ್ಯೂಸ್ 

ಬೆಂಗಳೂರು ನವಂಬರ್ :ಬಿಬಿಎಂಪಿ ಕೇಂದ್ರ ಕಛೇರಿ ಅವರಣದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘದ ವತಿಯಿಂದ  68ನೇ ಕನ್ನಡ ರಾಜ್ಯೋತ್ಸವ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ, ಸಾಧಕಿಯರಿಗೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ನೇಪಾಳದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಲೋಗೋ(ಲಾಂಛನ) ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು  ದೀಪ ಬೆಳಗಿಸುವುದರ ಮೂಲಕ ಆಡಳಿತಗಾರ ರಾಕೇಶ್ ಸಿಂಗ್ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರವರು, ಖ್ಯಾತ ನಟ ರಮೇಶ್ ಅರವಿಂದ್, ಚಲನಚಿತ್ರ ನಟಿ ಶ್ರೀಮತಿ ಭವ್ಯ, ಗೌರವಾಧ್ಯಕ್ಷರು, ಮಾಜಿ ಮಹಾಪೌರರು ಜೆ.ಹುಚ್ಚಪ್ಪ, ವಿಶೇಷ ಆಯುಕ್ತರುಗಳಾದ ಕೆ.ವಿ.ತ್ರಿಲೋಕ್ ಚಂದ್ರ, ಮೌನೀಶ್ ಮೌದ್ಗೀಲ್, ಹರೀಶ್ ಕೆ, ಮತ್ತು ಪ್ರಧಾನ ಅಭಿಯಂತರಾದ ಪ್ರಹ್ಲಾದ್ ಉಪ ಆಯುಕ್ತರಾದ ಶ್ರೀ ಮಂಜುನಾಥ್ ಸ್ವಾಮಿ, ಜಂಟಿ ಆಯುಕ್ತರಾದ ಶ್ರೀಮತಿ ಪಲ್ಲವಿ ಕೆ.ಆರ್ ಮತ್ತು ಅಧ್ಯಕ್ಷರಾದ ಸಾಯಿಶಂಕರ್, ಪ್ರಧಾನ ಕಾರ್ಯದರ್ಶಿ ಎ.ಅಮೃತ್ ರಾಜ್ ಹಾಗೂ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾರವರು ಉದ್ಘಾಟನೆಯನ್ನು ನೇರವೆರಿಸಿದರು.

ಚಲನಚಿತ್ರ ನಟ ರಮೇಶ್ ಅರವಿಂದ್ ಅವರು  ಮಾತನಾಡುತ್ತಾ ಪ್ರತಿನಿತ್ಯ ನಾವು ಜೀವನ ಸಾಗುವುದು ಉತ್ತಮ , ರಸ್ತೆ, ಉದ್ಯಾನವನ, ಎಲ್ಲವು ಬಿಬಿಎಂಪಿ ಸಹಕಾರ ಕಾರಣ.ನಮ್ಮ ನಾಡಿನ ಮಣ್ಣಿಗೆ ಯಾಕೆ ಗೌರವ ಕೊಡಬೇಕು ಎಂದರೆ ಇಲ್ಲಿ ನಾವು ಮಣ್ಣುಗುವುದು ಇಲ್ಲೆ.ರನ್ನ,ಪಂಪ ಬಸವಣ್ಣ ಆನೇಕ ಮಹಾರಾಜಗಳು, ಸಾಹಿತ್ಯ, ಸಂಸ್ಕೃತಿ ಸಾರುವ ದಿನವೆ ಕನ್ನಡ ರಾಜ್ಯೋತ್ಸವ.

ಪ್ರಪಂಚದ ಎಲ್ಲ ಕಡೆಗಳಲ್ಲಿ ಕನ್ನಡಿಗರಿಗೆ ಗೌರವ ಸಿಗುತ್ತಿದೆ.ಸಾಧನೆ ಮಾಡುವುದು ಬಹಳ ಕಷ್ಟ, ವಿವೇಕ, ವಿನಯತೆ ಎಲ್ಲರು ಬೆಳಸಿಕೊಂಡಾಗ ಇತಿಹಾಸ ಸೃಷ್ಟಿಸಲು ಸಾಧ್ಯ.ಬೆಂಗಳೂರುನಗರ ವಿಶೇಷ ಅಲೋಚನೆ ಬಂದರೆ ಅದನ್ನ ಡೊಡ್ಡವರಿಗೆ ತಿಳಿಸಿ ಇದರಿಂದ ಪ್ರಪಂಚಕ್ಕೆ ಉಪಯೋಗವಾಗುತ್ತದೆ ಎಂದು ಹೇಳಿದರು.

ಚಲನಚಿತ್ರ ನಟ ಸುಂದರ್ ರಾಜ್ ರವರು ಮಾತನಾಡುತ್ತಾ ಬಿಬಿಎಂಪಿ ಅಧಿಕಾರಿ, ನೌಕರರು ಶುದ್ದ ಮನಸ್ಸಿನವರು ಹಾಗೂ ಕನ್ನಡಾಭಿಮಾನಿಗಳು.ಮನೆ ಸ್ವಚ್ಚ ಮಾಡಿ ಕಸವನ್ನು ರಸ್ತೆಗೆ ಹಾಕಬೇಡಿ, ಕಸದ ಸಂಗ್ರಹ ಮಾಡುವವರಿಗೆ ಕೊಡಿ.ಒಣಕಸ,ಹಸಿಕಸ ವಿಂಗಡನೆ ಮಾಡಿ ನೀಡಿದರೆ ಬೆಂಗಳೂರುನಗರ ಸುಂದರವಾಗಲಿದೆ.ಪೌರ ಕಾರ್ಮಿಕರಿಗೆ ಆರೋಗ್ಯ ಕಿಟ್ ಗಳನ್ನು ಸಾರ್ವಜನಿಕರಾದ ನಾವು ನೀಡಿ, ಅವರ ಆರೋಗ್ಯ ಸುರಕ್ಷತೆ ಮಾಡುವುದು ನಮ್ಮ ಕರ್ತವ್ಯವಾಗಿದೆ.

ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪರವರು ಮಾತನಾಡುತ್ತಾ ಕನ್ನಡ ಭಾಷೆಗೆ 2000ಸಾವಿರ ವರ್ಷದ ಇತಿಹಾಸವಿದೆ. ಬಿಬಿಎಂಪಿ ಕನ್ನಡ ನೌಕರರ ಸಂಘ ನಾಡಿನ ಸಾಧಕರನ್ನ ಗುರುತಿಸುವ ಕಾರ್ಯ ಮಾಡಲಾಗುತ್ತಿದೆ.ಕನ್ನಡ ಸಂಘ ನಾಡು, ನುಡಿ ಹೋರಾಟಕ್ಕೆ ಸದಾ ಸಹಕಾರ ನೀಡುತ್ತಿದೆ. ತಂದೆ ತಾಯಿಗೆ ಗೌರವ ಕೊಡುವಂತೆ ಕನ್ನಡ ಭಾಷೆಗೆ ಗೌರವ ಕೊಡಬೇಕು .ಇಂದಿನ ಮಕ್ಕಳಿಗೆ ನಾಡಿನ ಇತಿಹಾಸ ತಿಳಿವಡಿಕೆ ಮೂಡಿಸಬೇಕು ಎಂದು ಹೇಳಿದರು.

ಎ.ಅಮೃತ್ ರಾಜ್ ರವರು ಮಾತನಾಡುತ್ತಾ ರಾಷ್ಟ್ರ ಕಂಡ ಶೇಷ್ಠ ಕಲಾಪ್ರತಿಭೆ ಡಾ.ಪುನೀತ್ ರಾಜ್ ಕುಮಾರ್ ರವರ ಸ್ಮರಣೆಯಲ್ಲಿ ಸಾಧಕರಿಗೆ ಪುನೀತ್ ರಾಜ್ ಕುಮಾರ್ ಪ್ರಶಸ್ತಿ ನೀಡಲಾಗುತ್ತಿದೆ.

ನವಂಬರ್ 25ರಂದು ನೇಪಾಳದ ಪಶುಪತಿನಾಥ ದೇವಾಲಯದಲ್ಲಿ ರಾಜ್ಯ 800ಕ್ಕೂ ಜನರು ತೆರಳಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ನೇಪಾಳದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಡಳಿತಗಾರರು, ಮುಖ್ಯ ಆಯುಕ್ತರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಪಾಲನೇತ್ರ, ಕನ್ನಡ ಚಳುವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದತ್ತ, ಚಲನಚಿತ್ರರಂಗದ ಸುಂದರ್ ರಾಜ್ ,ಶಿವಕುಮಾರ್, ರಿಷಿಗೌಡ, ಪ್ರೇಮಗೌಡ, ಕು.ರಕ್ಷಾ ಅಪೂರ್ವ, ಪ್ರತಿಭಾ, ಶ್ರೀಮತಿ ರಕ್ಷಾ, ರವರು ಮತ್ತು ಪತ್ರಿಕಾರಂಗದಲ್ಲಿ ರಕ್ಷಾ , ಮಾಲತೇಶ್, ವಸಂತ್ ಕುಮಾರ್, ಸ್ಮಿತಾ ರಂಗನಾಥ್, ಶೀತಲ್ ಶೆಟ್ಟಿ, ಮಂಜುನಾಥ್, ಅಲ್ಲಾವುದ್ದಿನ್, ಪುರುಷೋತ್ತಮ್, ಕೊಂಡಯ್ಯ,ಪುಟ್ಟರಾಜು, ಪಿ.ಆರ್.ಓ.ಸುಚಿತ್ರಾ ಮತ್ತು ಡೊಳ್ಳು ಕುಣಿತ ಕಲಾವಿದ ಡೊಳ್ಳು ಚಂದ್ರು ಯೋಗ ಕ್ರೀಡಾ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಹಾಗೂ ಬಿಬಿಎಂಪಿ ಕಾರ್ಯನಿರ್ವಹಿಸುತ್ತಿರುವ 20ಅಧಿಕಾರಿಗಳಿಗೆ, ನೌಕರರಿಗೆ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಖ್ಯಾತ ಹಿನ್ನಲೆ ಗಾಯಕಿ ಅನುರಾಧ ಭಟ್ ರವರಿಂದ ಸಂಗೀತ ಸಂಜೆ ಮತ್ತು ಎಂ.ಎಸ್.ಮೂಸಿಕಲ್ಸ್ ಇವೆಂಟ್ಸ್ ಮತ್ತು ಶಿವಂ ನೃತ್ಯ ಶಾಲೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.