ಶಿಡ್ಲಘಟ್ಟ ನಗರಸಭೆಗೆ ನೂತನ ಪೌರಾಯುಕ್ತೆಯಾಗಿ ಜಿ.ಅಮೃತ ನೇಮಕ
ವಿಜಯ ದರ್ಪಣ ನ್ಯೂಸ್….. ಶಿಡ್ಲಘಟ್ಟ ನಗರಸಭೆಗೆ ನೂತನ ಪೌರಾಯುಕ್ತೆಯಾಗಿ ಜಿ.ಅಮೃತ ನೇಮಕ ಶಿಡ್ಲಘಟ್ಟ : ನಗರಸಭೆಗೆ ನೂತನ ಪೌರಾಯುಕ್ತೆಯಾಗಿ ಜಿ.ಅಮೃತ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಪ್ರಭಾರಿ ನಗರಸಭೆ ಪೌರಾಯುಕ್ತರಾದ ಮೋಹನ್ ಕುಮಾರ್ ಅವರ ಸ್ಥಾನಕ್ಕೆ ಸರ್ಕಾರವು ಇವರನ್ನು ನಿಯೋಜಿಸಿದೆ. ನಗರಸಭೆ ಪೌರಾಯುಕ್ತೆಯಾಗಿ ಜಿ.ಅಮೃತ ಅಧಿಕಾರ ಸ್ವೀಕರಿಸಿ ಮಾತನಾಡಿ ನಗರದ ಅಭಿವೃದ್ಧಿ ಚಟುವಟಿಕೆಗಳು ,ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ಪೌರಸೇವೆಗಳ ಸುಧಾರಣೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗು ನಗರ ಸ್ವಚ್ಛತೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು…