ಹೂವನ್ನು ನೀಡುವ ಕೈಗೂ ಒಂದಿಷ್ಟು.
ವಿಜಯ ದರ್ಪಣ ನ್ಯೂಸ್… ಹೂವನ್ನು ನೀಡುವ ಕೈಗೂ ಒಂದಿಷ್ಟು. ಲೇಖನ – ಜಯಶ್ರೀ.ಜೆ. ಅಬ್ಬಿಗೇರಿ ಬೆಳಗಾವಿ ಇಂಗ್ಲೀಷ್ ಉಪನ್ಯಾಸಕರು ಮೊ: ೯೪೪೯೨೩೪೧೪೨ ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ. ಎಲ್ಲರೊಳಗೆ ಒಂದಾಗುವ ಬದುಕಿನ ಸ್ವಾರಸ್ಯಕರ ಗುಟ್ಟನ್ನು ಡಿವಿಜಿಯವರು ಈ ಕಗ್ಗದಲ್ಲಿ ಬಹು ಚೆನ್ನಾಗಿ ಹೇಳಿದ್ದಾರೆ. ಬೆಟ್ಟದ ಅಡಿಯಲ್ಲಿರುವ ಹುಲ್ಲಿನಂತಿರು. ಆ ಹುಲ್ಲನ್ನು ಹಸು ಕರುಗಳು ತಿಂದು ತೃಪ್ತಿ ಪಡುವಂತಿರಲಿ. ಮನೆಗೆ ಸುಗಂಧ ಸೂಸುವ ಮಲ್ಲಿಗೆಯಂತಿರು….